Daily Archives

July 6, 2021

ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ರಾಜ್ಯಪಾಲರಾಗಿ ಕೆಂದ್ರ ಸಚಿವರಾಗಿದ್ದ ತಾವರ್ ಚಂದ್ ಗೆಹ್ಲೋಟ್ ನೇಮಕವಾಗಿದ್ದಾರೆ.ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕವಾಗಿದ್ದು, ತಾವರ್ ಚಂದ್ ಗೆಹ್ಲೋಟ್ ಕೇಂದ್ರ ಸಾಮಾಜಿಕ, ನ್ಯಾಯ ಸಬಲೀಕರಣ ಸಚಿವರಾಗಿದ್ದರು.

ಮೋದಿ,ನಡ್ಡಾ ನೇತೃತ್ವದಲ್ಲಿ ಕೇಂದ್ರ ಸರಕಾರದ ಪ್ರಮುಖ ಸಚಿವರ ಸಭೆ ರದ್ದು | ವಿಸ್ತರಣೆಯೂ ಮುಂದೂಡಿಕೆ

ಬುಧವಾರ ನಡೆಯಬಹುದು ಎಂದು ನಿರೀಕ್ಷಿಸಲಾಗಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿದೆ.ಇದಕ್ಕೂ ಮುನ್ನ ಪ್ರಮುಖ ಸಚಿವರೊಂದಿಗೆ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮಂಗಳವಾರ ಸಂಜೆ ಸಭೆ ಏರ್ಪಡಿಸಿದ್ದರು. ಆದರೆ ಇದೀಗ ಈ ಸಭೆ

ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಡೆಯುತ್ತಿದೆ ಅಕ್ರಮ | ಭಯೋತ್ಪಾದಕ ಹಾಗೂ ನಕ್ಸಲ್ ಕೃತ್ಯಕ್ಕೆ…

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜನರು ಪಾವತಿಸುವ ಹಣ ಅಧಿಕಾರಿಗಳ ಖಾಸಗಿ ಖಾತೆಗೆ ವರ್ಗಾವಣೆಯಾಗಿ ದುರ್ಬಳಕೆಯಾಗುತ್ತಿರುವ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ, ಸರ್ಕಾರಿ ಖಜಾನೆ ಸೇರುವ ಅದೇ ಹಣ ರಾಜ್ಯದಲ್ಲಿರುವ ನಕ್ಸಲರು ಹಾಗೂ ಉಗ್ರ ಸಂಘಟನೆಗಳ ಕೃತ್ಯಕ್ಕೂ ಬಳಕೆಯಾಗುತ್ತಿರುವ ಸ್ಫೋಟಕ

ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಒಳಮೊಗ್ರುವಿನ ಶಾಫಿ ಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ಪುತ್ತೂರು ಪೋಕ್ಸೋ ವಿಶೇಷ ನ್ಯಾಯಾಲಯ ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕುವರೆ ವರ್ಷ ಸಾದಾ ಸ್ವರೂಪದ ಶಿಕ್ಷೆ ಹಾಗೂ ರೂ. 16,000 ದಂಡ ವಿಧಿಸಿ ಜುಲೈ 05ರಂದು ಆದೇಶ ಹೊರಡಿಸಿದೆ.ಪುತ್ತೂರು ತಾಲೂಕಿನ ಒಳಮೊಗ್ರು

ಕೊರೋನಾ ಪಾಸಿಟಿವ್ ಪರೀಕ್ಷೆ ಈಗ ಫೇಸ್ ಮಾಸ್ಕ್ ನಲ್ಲಿ ಲಭ್ಯ

ಕೊರೋನಾ ವೈರಸ್ ಪ್ರಕೋಪ ದೇಶದಲ್ಲಿ ಹೆಚ್ಚಾಗದಂತೆ ತಡೆಯಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆ (ಕೋವಿಡ್ -19), ಸಾಮಾಜಿಕ ದೂರ, ಬೆಸ-ಸಮ ನಿಯಮ ಮತ್ತು ಇದೀಗ ಮಾಸ್ಕ್ ಪರೀಕ್ಷೆಗಳಂತಹ ಪ್ರಯತ್ನಗಳು ಮುಂದುವರೆದಿವೆ.ಕೊರೋನದ ಮೂರನೇ ಅಲೆಯ ಅಪಾಯದ ನಡುವೆಯೇ,

ಬೆಳ್ತಂಗಡಿ : ಮಚ್ಚಿನದಲ್ಲಿ ಮನೆಗೆ ನುಗ್ಗಿ ನಿದ್ರಿಸುತ್ತಿದ್ದ ಗೃಹಿಣಿಯ ಕಾಲುಚೈನ್,ಕಪಾಟಿನಲ್ಲಿದ್ದ ನಗದು ಕಳ್ಳತನ |…

ಪುಂಜಾಲಕಟ್ಟೆ ಠಾಣಾ ವ್ಯಾಪ್ತಿ ಮಚ್ಚಿನ‌ ಗ್ರಾ.ಪಂಚಾಯತ್‌ಗೆ ಒಳಪಟ್ಟ ಕುದ್ರಡ್ಕ ಎಂಬಲ್ಲಿ ಮನೆಯೊಂದಕ್ಕ ನುಗ್ಗಿದ ಕಳ್ಳರು ಮನೆಯವರೆಲ್ಲರೂ ಮಲಗಿ ನಿದ್ರಿಸುತ್ತಿದ್ದಂತೆಯೇ ಗೃಹಿಣಿಯೊಬ್ಬರ ಕಾಲ್ಚೈನನ್ನೇ ತುಂಡರಿಸಿ ಕಳ್ಳತನ ನಡೆಸಲಾಗಿದೆ.ಹಾಗೂ ಕಪಾಟಿನಲ್ಲಿಟ್ಟಿದ್ದ 20 ಸಾವಿರ ರೂ.‌ನಗದು ಕೂಡ

ಕೆಯ್ಯೂರು : ಸರಣಿ ಕಳ್ಳತನ | ಮಾಡಾವು,ಕಟ್ಟತ್ತಾರು,ಅರಿಕ್ಕಿಲದಲ್ಲಿ ಕಳ್ಳತನ

ಪುತ್ತೂರು: ಕೆಯ್ಯೂರು ಗ್ರಾಮದ ವಿವಿದೆಡೆ ಸರಣಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ಕಳೆದ ರಾತ್ರಿ ಕಟ್ಟತ್ತಾರು ಎಂಬಲ್ಲಿ ಮೂರು ಅಂಗಡಿಗಳಿಗೆ ಕಳ್ಳರು ನುಗ್ಗಿದ್ದಾರೆ.ಅಲ್ಲದೆ ಅರಿಕ್ಕಿಲ,ಮಾಡಾವಿನಲ್ಲೂ ಕಳ್ಳತನ ನಡೆದ ಬಗ್ಗೆ ತಿಳಿದು ಬಂದಿದೆ.ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಎಸೈ

ಪುತ್ತೂರು,ಕಡಬ : ಆರೋಗ್ಯ ಕೇಂದ್ರಗಳಲ್ಲಿಯೇ ಲಸಿಕಾಕರಣ ನಡೆಸಲು ಸೂಚನೆ

ಪುತ್ತೂರು: ಕಡಬ,ಪುತ್ತೂರು ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿಯೇ ಲಸಿಕಾಕರಣ ನಡೆಸುವಂತೆ ತಾಲೂಕು ಆರೋಗ್ಯಾಧಿಕಾರಿ ಸೂಚನೆ ನೀಡಿದ್ದಾರೆ.ಸಮುದಾಯ ಆರೋಗ್ಯ ಕೇಂದ್ರ ಉಪ್ಪಿನಂಗಡಿ, ಕಡಬ,ಸಾರ್ವಜನಿಕ ಆಸ್ಪತ್ರೆ ಪುತ್ತೂರು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಲಿಕಟ್ಟೆ ಪುತ್ತೂರು ಇವುಗಳನ್ನು