ನಮ್ಮೂರಿನ ಪೆಲತ್ತರಿಗೆ (ಹಲಸಿನ ಬೀಜ) ಕೆ.ಜಿ ಗೆ 687 ರೂ.

ಪುತ್ತೂರು: ಕೃಷಿಯುತ್ಪನ್ನಗಳ ಬೆಲೆ ಏರಿಕೆಯಾಗುವುದರಿಂದ ಕೃಷಿಕರಿಗೆ ಲಾಭದಾಯಕ. ಆದರೆ ಕರಾವಳಿಯ ಎಲ್ಲೆಡೆ ದೊರಕುವ, ಇತ್ತೀಚಿನ ದಿನಗಳಲ್ಲಿ ಮೂಲೆ ಗುಂಪಾದ ಹಲಸಿನ ಹಣ್ಣಿನ ಬೀಜಕ್ಕೆ ಆನ್ಲೈನ್ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ ಬಿದ್ದಿದೆ.
Agri dot jackfruit seed ನ ಬೆಲೆಯನ್ನು ಆನ್ಲೈನ್ ನಲ್ಲಿ ಹುಡುಕಿದರೆ ನಿಬ್ಬೆರಗಾಗೋದು ಖಂಡಿತ.

ಯಾಕೆಂದರೆ ನಮ್ಮ‌ಪೆಲತ್ತರಿಗೆ ಅಷ್ಟು ಬೆಲೆ ಇದೆ. 800 ಗ್ರಾಂ.ಗೆ 550 ರೂ ಬೆಲೆ ಇದೆ. ಅದೂ ಡಿಸ್ಕೌಂಟ್ ಆಗಿ. ವಿದೌಟ್ ಡಿಸ್ಕೌಂಟ್ 800 ರೂ.

ಅಂದರೆ ರಿಯಾಯಿತಿ ದರದಲ್ಲಿ ತುಲನೆ ಮಾಡೋದಾದರೆ ಕೆ.ಜಿ.ಗೆ 687 ಬೆಲೆ ಇರಲಿದೆ.

ಮೊನ್ನೆ ಅಡಿಕೆಗೆ ಕೆಜಿಗೆ 525 ರೂಪಾಯಿ ಆದಾಗ ಸಂಭ್ರಮಿಸಿದವರು ನಾವು. ಈಗ ಅಡಿಕೆಯನ್ನು ಅಡಿಗೆ ಹಾಕಿ ಪೆಳತ್ತರಿ ಮೇಲೆ ಕೂತಿದೆ. ಯಾರಿಗೂ ಬೇಡವಾಗಿ ತೆಂಗಿನ ಮರದ ಬುಡಕ್ಕೆ ಹಾಕುತ್ತಿದ್ದ ಹಲಸಿನ ಹಣ್ಣಿನ ಬೀಜಕ್ಕೆ ಇಷ್ಟು ಬೆಲೆ ಆದರೆ, ಇನ್ನೂ ರಬ್ಬರು ಮರ ಕಡಿದು ಅಡಿಕೆ ಹಾಕುವ ಹುನ್ನಾರದಲ್ಲಿರುವ ನಮ್ಮ ಜನ ಹಲಸಿನ ಮರ ನೆಡ್ತಾರಾ ಹೇಗೆ ? ಕಾದು ನೋಡಬೇಕಾಗಿದೆ.

2 Comments
  1. ANIL KUMAR RAI says

    ಅ ಹಲಸಿನ ಬೀಜ ಎಲ್ಲಿ ಸೇಲ್ ಮತ್ತು ಆನ್ಲೈನ್ ಹೇಗೆ ಹಾಕೋದು ಅಂತ ಮಂಗಳೂರುರವರಿಗೆ ಅದಸ್ಟ್ ಬೇಗ ತಿಳಿಸಿ ಇಲ್ಲಾಂದ್ರೆ ನನ್ನ ಈ ನಂಬರ್ ಗೆ ಕಾಂಟಾಕ್ಟ್ ಮಾಡಿ -9900474600

  2. Anil Kumar Rsi says

    ನಮ್ಮತ್ರನು ಇದೆ ತೆಗೊಳೋವರ್ ಇದ್ರೆ ಹೇಳಿ

Leave A Reply

Your email address will not be published.