ಇಲ್ಲಿ ಫೋನ್ ಇಟ್ಕೊಂಡರೆ ಪುರುಷರ ‘ ಅದಕ್ಕೆ ‘ ಡ್ಯಾಮೇಜ್ ಆಗತ್ತಂತೆ | ಎಲ್ಲೆಂದರಲ್ಲಿ ಇಟ್ಕೊಳ್ಳೋ ಮುಂದೆ ಎಚ್ಚರ ಇರಲಿ

ನವದೆಹಲಿ : ಸದ್ಯ ಮೊಬೈಲ್ ಇಲ್ಲದೆ ಜೀವನವೇ ಇಲ್ಲ. ಇದ್ದರೂ ಅದು ನಶ್ವರ ಎಂಬಂತಾಗಿದೆ. ಮೊಬೈಲ್ ಮನುಷ್ಯನ ಜೀವನದ ಅತ್ಯಂತ ಪ್ರಮುಖ ಅಂಗವಾಗಿದೆ. ನಾವು ಎಲ್ಲಾದಕ್ಕೂ ಫೋನ್ ಅವಲಂಭಿಸಿದ್ದೇವೆ. ಅದೇ ಕಾರಣಕ್ಕೆ ನಾವ್ ಹೋದಲ್ಲೆಲ್ಲ ಫೋನ್ ಅನ್ನು ಒಯ್ಯುತ್ತೇವೆ. ಊಟ ಮಾಡುವಾಗ, ಟಾಯ್ಲೆಟ್ ಹೋಗುವಾಗ, ಕುಳಿತಾಗ, ನಿದ್ರೆ ಮಾಡುವಾಗ ಕೂಡಾ ಮೊಬೈಲ್ ನಮ್ಮ ದಿಂಬಿನ ಕೆಳಗೆ ಇರಲೇ ಬೇಕು. ಆದರೆ ಇದರಿಂದ ಕಣ್ಣಿನ ದೃಷ್ಟಿ ಮತ್ತು ಕಳಪೆ ಭಂಗಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ ಪುರುಷರ ಲೈಂಗಿಕ ಜೀವನದ ಮೇಲೆಯೂ ಪರಿಣಾಮ ಬೀರಬಹುದು.

ಸ್ಮಾರ್ಟ್ ಫೋನ್ ನ ಹಾನಿಕಾರಕ ಪರಿಣಾಮಗಳು ಹಲವು. ಮೊಬೈಲ್(Mobile) ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣವು (ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್) ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಹಾಗಿದ್ದರೆ ಎಲ್ಲೆಲ್ಲಿ ಫೋನ್ ಇಟ್ಟುಕೊಳ್ಳಬಾರದು?

  1. ಪ್ಯಾಂಟ್ ನ ಮುಂಬದಿಯ ಜೇಬು : ವಿಶೇಷವಾಗಿ ಪುರುಷ(Men)ರು ಪ್ಯಾಂಟ್ ಅಥವಾ ಜೀನ್ಸ್ ನ ಮುಂಭಾಗದ ಜೇಬಿನಲ್ಲಿ ಸ್ಮಾರ್ಟ್ ಫೋನ್ ಅನ್ನು ಇಟ್ಟುಕೊಳ್ಳಬಾರದು. ಇದರಿಂದಾಗಿ ಅವರ ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯಾಣುಗಳ ಗುಣಮಟ್ಟವು ತೀವ್ರವಾಗಿ ಕುಸಿಯುತ್ತದೆ. ಇದು ಯಾವುದೇ ಪುರುಷನ ಲೈಂಗಿಕ ಆರೋಗ್ಯವನ್ನು ಹಾಳುಮಾಡುವ ಮೂಲಕ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು. ಪುರುಷನ ಲೈಂಗಿಕ ಸಾಮರ್ಥ್ಯ ಕುಸಿಯಬಹುದು. ಆಮೂಲಕ ನಿಮ್ಮ ಸುಖ ಕಸಿಯುವ ಸಾಮರ್ಥ್ಯ ಎಲ್ಲೆಂದರಲ್ಲಿ ಇಡುವ ಮೊಬೈಲ್ ಫೋನ್ ಗೆ ಇದೆ.
  2. ಪ್ಯಾಂಟ್ ನ ಹಿಂದಿನ ಕಿಸೆ : ಪ್ಯಾಂಟ್ ನ ಹಿಂದಿನ ಜೇಬಿನಲ್ಲಿ ಸ್ಮಾರ್ಟ್ ಫೋನ್ ಅನ್ನು ಇಟ್ಟುಕೊಳ್ಳುವುದರಿಂದ ನಿಮಗೆ ಸಯಾಟಿಕಾ ನರನೋವಿನ ಸಮಸ್ಯೆ ಉಂಟಾಗಬಹುದು. ಇದು ಸೊಂಟದ ಕೆಳಭಾಗದಿಂದ ಸೊಂಟ ಮತ್ತು ಕಾಲಿನ ನೋವು ಉಂಟು ಮಾಡಬಹುದು. ಇದರಿಂದಾಗಿ ನೀವು ಕುಳಿತುಕೊಳ್ಳುವಲ್ಲಿ ಅಥವಾ ನಡೆಯುವಲ್ಲಿ ತುಂಬಾ ನೋವನ್ನು ಅನುಭವಿಸಬಹುದು.
  3. ಶರ್ಟ್ ನ ಪಾಕೆಟ್ : ಕೆಲವರು ತಮ್ಮ ಸ್ಮಾರ್ಟ್ ಫೋನ್ ಅನ್ನು ತಮ್ಮ ಶರ್ಟ್ ಜೇಬಿನಲ್ಲಿ ಇಟ್ಟುಕೊಳ್ಳುವುದೂ. ಸ್ಮಾರ್ಟ್ ಕೆಲಸ ಅಲ್ಲವೇ ಅಲ್ಲ. ಫೋನ್ ಅನ್ನು ಈ ಸ್ಥಳದಲ್ಲಿ ಇಡುವ ಮೂಲಕ ಅದರಿಂದ ಹೊರಹೊಮ್ಮುವ ಹಾನಿಕಾರಕ ವಿದ್ಯುತ್ಕಾಂತೀಯ ವಿಕಿರಣವು ನಿಮ್ಮ ಹೃದಯವನ್ನು ದುರ್ಬಲಗೊಳಿಸಬಹುದು. ಅಲ್ಲಿಂದ ಕೇವಲ 2 ಇಂಚು ಕೆಳಗೆ ಇದೆ ನಿಮ್ಮ ಹೃದಯ. ಅದರಲ್ಲೂ ಅಧಿಕ ರಕ್ತದೊತ್ತಡ ಇರುವ ರೋಗಿಗಳು, ಮಧುಮೇಹಿಗಳು ಮತ್ತು 40 ವರ್ಷ ಮೇಲ್ಪಟ್ಟವರು ತಮ್ಮ ಶರ್ಟ್ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟುಕೊಳ್ಳಬಾರದು.
  4. ತಲೆ ದಿಂಬಿನ ಕೆಳಗೆ : ಸುತಾರಾಂ ಅಲ್ಲಿ ಫೋನ್ ಇರುವುದು ನಿಷಿದ್ಧ. ನಾವು ದಿನಕ್ಕೆ 6 ರಿಂದ 8 ಗಂಟೆ ನಿದ್ದೆ ಮಾಡುತ್ತಿದ್ದು, ಒಂದೊಮ್ಮೆ ಮೊಬೈಲ್ ಅನ್ನು ದಿಂಬಿನ ಕೆಳಗೆ ಇಟ್ಟು ಮಲಗಿದರೆ, 6-8 ಗಂಟೆಗಳ ಕಾಲ ಅದು ಬೀರುವ ರೇಡಿಯೇಶನ್ ನಮ್ಮ ಮೆದುಳಿನ ಸೆಲ್ ಅನ್ನು ಹಾಳು ಮಾಡೋದು ಖಚಿತ. ಆದುದರಿಂದ ಇಡೀ ಆರೋಗ್ಯ ಕುಸಿತ ಉಂಟಾಗುವುದಲ್ಲದೆ, ಲೈಂಗಿಕ ಕ್ರಿಯೆಗೆ ಕೂಡಾ ಇದು ಅಡ್ಡಿಯಾಂದೀತು. ಕಾರಣ ಮನುಷ್ಯನ ಲೈಂಗಿಕ ಆಕರ್ಷಣೆ ಮತ್ತು ಪರ್ಫಾರ್ಮೆನ್ಸ್ ನ ಮೂಲ ಇರೋದು ಮೆದುಳಿನಲ್ಲಿ.!

ಹಾಗಾಗಿ, ಮೊಬೈಲ್ ದೂರ ಇಡಿ. ಎಷ್ಟು ಹೊತ್ತಿಗೂ ಮೊಬೈಲ್ ಜತೆ ಆಟ ಆಡಬೇಡಿ. ತಪ್ಪಿದ್ರೆ ಆಟ ಆಡಬೇಕಿರುವಲ್ಲಿ ಆಡುವ ಮೊದಲೇ ಔಟ್ ಆದೀರಿ ಎಚ್ಚರಿಕೆ !

Leave A Reply

Your email address will not be published.