ಅನ್ಯಕೋಮಿನವರ ಜತೆ ವಸತಿಗೃಹದಲ್ಲಿ ಹಿಂದೂ ಯುವತಿಯರು | ಹಿಂ.ಜಾ.ವೇ.ಯಿಂದ ಪೊಲೀಸರಿಗೆ ಮಾಹಿತಿ | ಪೊಲೀಸ್ ದಾಳಿ

ಹಿಂದೂ ಜಾಗರಣ ವೇದಿಕೆ ವಿಟ್ಲ , ಬಂಟ್ವಾಳ ಮತ್ತು ಪುತ್ತೂರು ಜಿಲ್ಲಾ ಪ್ರಮುಖರು ನೀಡಿದ ಮಾಹಿತಿ ಮೇರೆಗೆ ಅನ್ಯಕೋಮಿನ ಯುವಕರೊಂದಿಗೆ ಇದ್ದ ಹಿಂದೂ ಯುವತಿಯರನ್ನು ಮಂಗಳೂರಿನ ಬಂದರು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಜೂ.27 ರಂದು ನಡೆದಿದೆ.

ಮಂಗಳೂರಿನ ಕೊಂಚಾಡಿ ವಸತಿಗೃಹದಲ್ಲಿ ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರು ಇರುವ ಜೋಡಿಗಳು ತಂಗಿವೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದ್ದವು.

ಈ ರೂಮರ್‌ನ ಹಿಂದೆ ಬಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕಳೆದ ಕೆಲದಿನಗಳಿಂದ ಪತ್ತೇದಾರಿ ಕಾರ್ಯಾಚರಣೆ ಶುರು ಮಾಡಿಕೊಂಡಿದ್ದರು. ಇಂದು, ಆದಿತ್ಯವಾರ ಮತ್ತೆ ಅದೇ ಮೊದಲಿನ ಎರಡು ಜೋಡಿ ಮತ್ತು ಮತ್ತೊಂದು ಜೋಡಿಗಳನ್ನು ಹೋಟೆಲ್ ಸಾಯಿ ಪ್ಯಾಲೇಸ್ ನಲ್ಲಿ ತಂಗಿರುವ ಮಾಹಿತಿ ಕಲೆಹಾಕಿದ್ದರು‌. ಈ ಜೋಡಿಗಳು ಹೋಟೆಲ್ ನಲ್ಲಿ ಮೋಜು ಮಸ್ತಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಬಂದರು ಠಾಣೆಯ ಪೋಲಿಸರು ದಾಳಿ ನಡೆಸಿದ್ದಾರೆ. ನಂತರ ಅನ್ಯ ಕೋಮಿನ ಜೋಡಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ‌. ರೂಂ‌ ನಂಬರ್ 208 ರಲ್ಲಿ ಯುವತಿಯರು ಹಾಗೂ ರೂಂ ನಂಬರ್ 407 ರಲ್ಲಿ ಯುವಕರು ವಾಸ್ತವ್ಯವಿದ್ದರು. ಲಾಡ್ಜ್ ಬುಕ್ ಮಾಡುವಾಗ ಹುಡುಗರು ಒಂದು ಕೋಣೆ ಬುಕ್ ಮಾಡುವುದು. ಏಷ್ಟೋ ಹೊತ್ತಿನ ನಂತರ ಹುಡುಗಿಯರು ಬಂದು ಬೇರೊಂದು ರೂಮ್ ಬುಕ್ ಮಾಡುವುದು. ಒಮ್ಮೆ ಲಾಡ್ಜ್ ಒಳಗೆ ಹೋದ ಮೇಲೆ ಆ ನಂತರ ಜೋಡಿಗಳು ತಮ್ಮ pair ಮಾಡಿ ರೂಮೊಳಗೆ ಸೇರಿಕೊಳ್ಳುತ್ತಿದ್ದವು. ಈ ಮೊದಲೇ ಪ್ರಿ ಪ್ಲ್ಯಾನ್ ಮಾಡಿ ಆ ನಂತರ ಜೋಡಿಯಾಗುವ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

ಘಟನೆಯಲ್ಲಿ ವಶಕ್ಕೆ ಪಡೆದವರಲ್ಲಿ ಸುರತ್ಕಲ್ ಹಾಗೂ ಅತ್ತಾವರದ ಯುವತಿಯರು ಇದ್ದರು ಎಂಬ ಮಾಹಿತಿ ಲಭಿಸಿದೆ‌.

Leave A Reply

Your email address will not be published.