ಬೆಳ್ತಂಗಡಿ | ತಾಲೂಕು ಸರಕಾರಿ ಆಸ್ಪತ್ರೆಯ ಕಪಾಟಿನೊಳಗೆ ಅವಿತು ಕುಳಿತ ಹೆಬ್ಬಾವು

ಬೆಳ್ತಂಗಡಿ: ತಾಲೂಕು ಸರಕಾರಿ ಆಸ್ಪತ್ರೆಯ ಹೊರ ರೋಗಿ ವಿಭಾಗದ ಕಪಾಟಿನೊಳಗೆ ಹೆಬ್ಬಾವು ಕಂಡಿದ್ದು, ಸಿಬ್ಬಂದಿ ವರ್ಗ ಆತಂಕಕ್ಕೀಡಾದ ಘಟನೆ ಇಂದು ನಡೆದಿದೆ.

ಬೆಳಗ್ಗೆ ಸುಮಾರು 11 ಗಂಟೆಗೆ ಹೊರ ರೋಗಿ ವಿಭಾಗದ ಒಳಗಿನ ಕಪಾಟಿನೊಳಗೆ ಹಾವು ಅವಿತಿದ್ದು, ಹಾವು ಯಾವುದೆಂದು ತಿಳಿಯದ ಪರಿಣಾಮ ಕೂಡಲೇ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಲಾಗಿದೆ. ಸ್ನೇಕ್ ಅಶೋಕ್ ಬಂದು ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

“ಮಳೆಗಾಲದಲ್ಲಿ ಹೆಬ್ಬಾವಿನ ಮೊಟ್ಟೆಗಳು ಒಡೆದು ಮರಿಯಾಗುವ ಕಾಲವಾಗಿದ್ದು, ರಕ್ಷಣೆಗಾಗಿ ಹಾಗೂ ಬೆಚ್ಚಗಿನ ಸುರಕ್ಷಿತ ಸ್ಥಳ ಅರಸಿಕೊಂಡು ಹೆಬ್ಬಾವಿನ ಮರಿ ಆಸ್ಪತ್ರೆಗೆ ಆಗಮಿಸಿರಬಹುದು. ಸಮೀಪದಲ್ಲೇ ಎಲ್ಲೋ ಹೆಬ್ಬಾವು ಮೊಟ್ಟೆ ಇಟ್ಟಿದ್ದು, ಈಗ ಮರಿಗಳು ಹೊರಬಂದಿರುವ ಸಾಧ್ಯತೆಯೂ ಇದೆ. ಆದ್ದರಿಂದ ಸ್ಥಳೀಯ ಪರಿಸರದಲ್ಲಿ ಇನ್ನಷ್ಟು ಹೆಬ್ಬಾವಿನ ಮರಿಗಳು ಪತ್ತೆಯಾದರೂ ಅಚ್ಚರಿ ಪಡಬೇಕಿಲ್ಲ” ಎಂದು ಉರಗ ಪ್ರೇಮಿ ಸ್ನೇಕ್ ಅಶೋಕ್ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.