ಪ್ರವಾಸಿಗರ ತಾಣ, ಕಡಲತೀರ ಕಾರವಾರಕ್ಕೆ ಭದ್ರತಾ ಸಚಿವ ರಾಜನಾಥ್ ಸಿಂಗ್ ಭೇಟಿ

ಕಾರವಾರ : ಕೋಟೆ ದೇವಸ್ಥಾನಗಳು, ಕಡಲತೀರವನ್ನು ಹೊಂದಿದ ಹಾಗೂ ವರ್ಷಪೂರ್ತಿ ಪ್ರವಾಸಿಗರನ್ನು ಹೊಂದಿರುವ ಅತ್ಯಂತ ಸುಂದರವಾದ ಪಟ್ಟಣ ಕಾರವಾರದ ನೌಕಾನೆಲೆಗೆ ಇಂದು (ಜೂನ್ 24) ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದಾರೆ.

ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕಾರಂಬೀರ್ ಸಿಂಗ್ ರೊಂದಿಗೆ ಗೋವಾದಿಂದ ಹೆಲಿಕ್ಯಾಪ್ಟಾರ್ ಮೂಲಕ ಬಂದಿಳಿದಿದ್ದ ಇವರನ್ನು ವೆಸ್ಟರ್ನ್ ನೇವಲ್ ಕಮಾಂಡ್, ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ವೈಸ್ ಅಡ್ಮಿರಲ್ ಆರ್. ಹರಿ ಕುಮಾರ ಮತ್ತು ಕರ್ನಾಟಕ ನೌಕಾ ಪ್ರದೇಶದ ಧ್ವಜ ಅಧಿಕಾರಿ, ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಸ್ವಾಗತಿಸಿದರು.

ಸಚಿವರು ಎರಡನೆಯ ಹಂತದ ಕಾಮಗಾರಿಯ ಕುರಿತು ಕಾಂಟ್ರಾಕ್ಟರ್, ಇಂಜಿನಿಯರ್, ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದ್ದು,ನೌಕಾನೆಲೆ ಸಿಬ್ಬಂದಿಗಳಿಗಾಗಿ ನಿರ್ಮಿಸಲಾದ ವಸತಿಗೃಹದ
ಮೂಲಭೂತ ಸೌಕರ್ಯಗಳು, ತ್ಯಾಜ್ಯ ನಿರ್ವಹಣೆಗಳನ್ನು ವೀಕ್ಷಿಸುವುದರೊಂದಿಗೆ ಹಡಗುಗಳ ರಿಪೇರಿ ಕೆಲಸ ಕೈಗೊಳ್ಳುವ ಲಿಫ್ಟಿಂಗ್ ಯಂತ್ರಗಳ ಸಾಮರ್ಥ್ಯವನ್ನು, ನೌಕಾ ಜಟ್ಟಿನಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು.

Leave A Reply

Your email address will not be published.