ಪೆರ್ಲಂಪಾಡಿಯ ಅವಿವಾಹಿತ ಯುವತಿ ಕೊರೋನಾಗೆ ಬಲಿ

ಪುತ್ತೂರು: ಕೊಳ್ತಿಗೆ ಗ್ರಾಮದ ಯುವತಿ ಕೊರೋನಾಗೆ ಬಲಿಯಾದ ಬಗ್ಗೆ ವರದಿಯಾಗಿದೆ.

ಪೆರ್ಲಂಪಾಡಿ ಕೆಮ್ಮತಕಾನದ 24 ರ ಹರೆಯದ ಯುವತಿ ಕೊರೊನಾದಿಂದ ಮೃತಪಟ್ಟ ದುರ್ದೈವಿ.

ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದಿದ್ದು ಚಿಕಿತ್ಸೆಗಾಗಿ ಜೂ. 23 ರಂದು ಪೆರ್ಲಂಪಾಡಿ ಆಸ್ಪತ್ರೆಗೆ ಕೆರೆದೊಯ್ದಿದ್ದರು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕರೆತಂದು, ಪುತ್ತೂರಿನಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಂತ್ಯ ಸಂಸ್ಕಾರದಲ್ಲಿ ಕೈ ಜೋಡಿಸಿದ ಹಿಂದೂ ಜಾಗರಣ ವೇದಿಕೆ:

ಮೃತದೇಹವನ್ನು ಹಿಂದೂ ಜಾಗರಣ ವೇದಿಕೆಯ ಆಂಬುಲೆನ್ಸ್ ಮೂಲಕ ಜೂ.24ರಂದು ಕೆಮ್ಮತಕಾನಕ್ಕೆ ತರಲಾಗಿದೆ. ಮನೆಯವರ ಜೊತೆ ಸೇರಿ ಅಂತ್ಯ ಸಂಸ್ಕಾರದಲ್ಲೂ ಜಾಗರಣ ವೇದಿಕೆಯ ಕಾರ್ಯಕರ್ತರು ಕೈ ಜೋಡಿಸಿದ್ದಾರೆ. ಜಾಗರಣ ವೇದಿಕೆಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

Leave A Reply

Your email address will not be published.