ಆಲಂಕಾರು:ಅಡಿಕೆ ಕಳ್ಳತನ ಪ್ರಕರಣ | ಆರೋಪಿಯನ್ನು ಬಂಧಿಸಿದ ಕಡಬ ಪೊಲೀಸರು

ಕಡಬ : ಸುಲಿದು ಮಾರಾಟ ಮಾಡಲು ಅಂಗಳದಲ್ಲಿ ಇಟ್ಟಿದ್ದ ಅಡಿಕೆ ಚೀಲವೊಂದನ್ನು ಬೈಕ್ ನಲ್ಲಿ ಬಂದು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಅಡಿಕೆ ಚೀಲದೊಂದಿಗೆ ಜೂ.24 ರಂದು ಕಡಬ ಪೊಲೀಸರು ಬಂಧಿಸಿದ್ದಾರೆ.

ಕಡಬ ತಾಲೂಕು ಹಳೆ ನೇರಂಕಿ ಗ್ರಾಮದ ಅಲೆಪ್ಪಾಡಿಯ ಸುಕೇಶ್ ಎಂಬವರ ಮನೆಯಿಂದ ಅಡಿಕೆ ಚೀಲ ಕಳವಾಗಿತ್ತು.ಆರೋಪಿ ಪರಮೇಶ್ವರ್ ಎಂಬಾತನನ್ನು ಗುರುವಾರ ಮುಂಜಾನೆ ಆತನ ಮನೆಯಿಂದ ವಶಕ್ಕೆ ಪಡೆದುಕೊಂಡು ವಿಚಾರಿಸಿ ಕಳವು ಮಾಡಿದ ಅಡಿಕೆಯನ್ನು ಮತ್ತು ಕಳವಿಗೆ ಉಪಯೋಗಿಸಿದ ಮೋಟರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ .

ಈತನ ವಿರುದ್ದ ಅಪರಾಧ ಕ್ರಮಾಂಕ ನಂ 47 ಬಾರ್ 20 21 ಕಲಂ 379 ಐಪಿಸಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ .

ಕಾರ್ಯಾಚರಣೆಯಲ್ಲಿ ಎಸ್.ಐ ರುಕ್ಮ ನಾಯ್ಕ್ ,ಸಿಬಂದಿಗಳಾದ ಭವಿತ್ ರೈ , ಚಂದ್ರಶೇಖರ್, ಶ್ರೀಶೈಲ, ಮಹೇಶ್ , ದೀಪು ಪಾಲ್ಗೊಂಡಿದ್ದರು.

Leave A Reply

Your email address will not be published.