ಪಾಣಾಜೆ ಆರ್ಲಪದವಿನ ಕಬೀರ ಇನ್ನು ನೆನಪು ಮಾತ್ರ ! | ಹಲವು ಬಾರಿ ಕಳ್ಳತನಕ್ಕೆ ಯತ್ನಿಸಿದ್ದರೂ ಕಳ್ಳರಿಗೆ ಗುದ್ದಿ ತಪ್ಪಿಸಿದ ಸಾಹಸಿ ಬಸವ

ಪಾಣಾಜೆಯ ಆರ್ಲಪದವು ಪೇಟೆ ಪರಿಸರದಲ್ಲಿ ಹೆಚ್ಚಾಗಿ ಇರುತ್ತಿದ್ದ ಇಲ್ಲಿಯ ಜನರ ಪ್ರೀತಿಗೆ ಪಾತ್ರವಾಗಿದ್ದ ಬಸವ ಕಬೀರ ಅಸುನೀಗಿದೆ.

ದಿನಗಳ ಹಿಂದೆ ಎಲ್ಲಿಯೂ ಕಾಣ ಸಿಗದೆ ಇರುವಾಗ ಹುಡುಕಾಡಿದಾಗ ಆರ್ಲಪದವು ಪೇಟೆ ಹಿಂದೆ ಪೊದರಿನ ಅಡ್ಡದಲ್ಲಿ ಮಲಗಿದ್ದಲ್ಲೆ ತನ್ನ ಪ್ರಾಣ ಬಿಟ್ಟ ಸ್ಥಿತಿಯಲ್ಲಿ ಜೂ.24 ರಂದು ಬೆಳಿಗ್ಗೆ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುಮಾರು 20 ವರ್ಷ ಪ್ರಾಯವಾಗಿದ್ದ ಕಬೀರ ಕೆಲವು ದಿನಗಳಿಂದ ಅನಾರೋಗ್ಯದಿಂದ ಕೂಡಿತ್ತು ಎಂದು ಅಲ್ಲಿಯವರು ತಿಳಿಸಿದ್ದಾರೆ.

ಆರ್ಲಪದವಿನ ಸ್ಥಳೀಯರು ಸೇರಿ ಆರ್ಲಪದವಿನಲ್ಲಿ ಜೆ.ಸಿ.ಬಿ ಮೂಲಕ ಹೊಂಡ ತೆಗೆದು ಹಿಂದೂ ಸಂಸ್ಕೃತಿಯ ವಿಧಿವಿದಾನಗಳೊಂದಿಗೆ ದಫನ ಮಾಡಲಾಯಿತು.

ಸುಮಾರು 20 ವರ್ಷಗಳ ಹಿಂದೆ ಆರ್ಲಪದವಿನ ಪ್ರಾಣಿ ಪ್ರಿಯರು ಸೇರಿ ಸ್ವಲ್ಪ ಹಣ ಸಂಗ್ರಹಿಸಿ ಒಬ್ಬ ಹೈನುಗಾರರಿಂದ ಒಂದು ಸಣ್ಣ ಕರುವನ್ನು ಖರೀದಿಸಿ ಆರ್ಲಪದವಿನಲ್ಲಿ ಬಿಟ್ಟಿದ್ದರು.ಕರುವಿಗೆ ಕಬೀರ ಎಂದು ನಾಮಕರಣ ಮಾಡಿದ್ದರು.

ತುಂಬಾ ದಷ್ಟ ಪುಷ್ಟವಾಗಿದ್ದ ಆ ಕರು ಎಲ್ಲರ ಪ್ರೀತಿಗೆ ಪಾತ್ರವಾಯಿತು.ಆರ್ಲಪದವು, ಸಂಟ್ಯಾರ್, ಸೂರಂಬೈಲು ಹೀಗೆ ರಸ್ತೆ ಬದಿ ಅಡ್ಡಾಡುತ್ತ ಹುಲ್ಲು ಮೇಯುತ್ತಾ ಆರ್ಲಪದವು ಜನತೆ ನೀಡಿದ ಆಹಾರ ನೀರು ಸೇವಿಸಿ ತನ್ನಷ್ಟಕ್ಕೆ ಇರುತ್ತಿದ್ದು ತಾನೊಬ್ಬ ರಾಜನಂತೆ ಜೀವಿಸುತ್ತಿತ್ತು.
ದನ ಕಳ್ಳರು ಈ ಬಸವನನ್ನು ಕಳವು ಮಾಡಲು ಹಲವು ಬಾರಿ ಪ್ರಯತ್ನಿಸಿದರೂ ವಿಫಲರಾಗಿದ್ದರು.

ಈ ಹಿಂದೆ ಒಂದು ಬಾರಿ ಕಬೀರನ ಕಾಲಿಗೆ ಗಾಯವಾಗಿ ನಡೆದಾಡಲು ಕಷ್ಟಕರ ಸ್ಥಿತಿಯಲ್ಲಿದ್ದ. ಆ ಸಮಯದಲ್ಲಿ ಅಂದು ಪಶುವೈದ್ಯರಾಗಿದ್ದ ದಿ.ಪ್ರಭಾಕರ ನಾಯಕ್ ಅವರು ಉಚಿತ ಆರೈಕೆಯಿಂದ ಚೇತರಿಸಿಕೊಂಡಿತ್ತು.

ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಬಸವ ಈಗ ಇಲ್ಲದಿರುವುದರಿಂದ ಆರ್ಲಪದವು ಪೇಟೆ ಬಿಕೋ ಅನ್ನುತ್ತಿದೆ.

Leave A Reply

Your email address will not be published.