ಕೊರೋನಾ ಇದ್ದರೂ ರಿಸ್ಕ್ ತೆಗೆದುಕೊಂಡು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಹೊರಟ ಆಂಧ್ರ, ಕೇರಳ | ವಿದ್ಯಾರ್ಥಿ ಮೃತಪಟ್ಟರೆ 1 ಕೋಟಿ ಪರಿಹಾರ ವಿಧಿಸುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆ

ನವದೆಹಲಿ :ಮಹಾಮಾರಿ ಕೊರೋನಾದ ಎರಡನೆಯ ಅಲೆಯ ಸಮಯದಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದಕ್ಕೆ ಆಂಧ್ರ ಪ್ರದೇಶ ಹಾಗೂ ಕೇರಳ ಸರ್ಕಾರಗಳು ಮುಂದಾಗಿದ್ದು, ಯುವುದೇ ವಿದ್ಯಾರ್ಥಿಯು ಮೃತಪಟ್ಟರೆ ಆ ಕುಟುಂಬಕ್ಕೆ ಒಂದು ಕೋಟಿ ರೂ ನೀಡಬೇಕೆಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

ಕೋವಿಡ್ 19 ನ ಅಬ್ಬರದ ನಡುವೆ ಎಲ್ಲಾ ರಾಜ್ಯಗಳು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದ್ದು, ಕಳೆದ ಬಾರಿ ತಡವಾದರೂ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಅತ್ಯಂತ ಹದಗೆಟ್ಟಿದ್ದು ,ಪರೀಕ್ಷೆಗಳನ್ನು ರದ್ದು ಮಾಡಿದೆ. ಆದರೆ ಆಂಧ್ರ ಪ್ರದೇಶ ಹಾಗೂ ಕೇರಳ ಸರ್ಕಾರಗಳು ನಡೆಸುವುದಕ್ಕೆ ಮುಂದಾಗಿದ್ದು, ಈ ಕುರಿತಾಗಿ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ಯುವುದೇ ವಿದ್ಯಾರ್ಥಿಯು ಮೃತಪಟ್ಟರೆ ಆ ಕುಟುಂಬಕ್ಕೆ ಒಂದು ಕೋಟಿ ರೂ ನೀಡಬೇಕೆಂದು ಎಚ್ಚರಿಸಿದೆ.

ಆಂಧ್ರಸರ್ಕಾರದ ಪರ ವಾದಿಸಿದ ವಕೀಲ ಮಹಪೂಜ್ ನಜ್ಕಿ, ‘ಕೇರಳ ರಾಜ್ಯದಲ್ಲಿ ಕೊರೋನ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಜುಲೈನ ಪ್ರಾರಂಭದ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ’ ಎಂದು ತಿಳಿಸಿದ್ದಾರೆ.

ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಪ್ರಥಮ ಪಿಯು ಸಿ ಪರೀಕ್ಷೆ ನಡೆಸುವುದಾಗಿ ಕೇರಳ ಸರ್ಕಾರ ಕೋರ್ಟ್‌ಗೆ ತಿಳಿಸಿದ್ದು, ಆಗಸ್ಟ್ ಮತ್ತು, ಸೆಪ್ಟೆಂಬರ್‌ನಲ್ಲಿ ಕೋವಿಡ್‌ 3ನೇ ಅಲೆ ತೀವ್ರವಾಗಿರುತ್ತದೆ ಎಂದು ದೆಹಲಿ ಏಮ್ಸ್ ನಿರ್ದೇಶಕರು ಎಚ್ಚರಿಸಿದ್ದಾರೆ. ಇಂತಹ ಸಂದರ್ಭದಲ್ಲೂ ಪರೀಕ್ಷೆಗಳನ್ನು ಹೇಗೆ ನಿಭಾಯಿಸುತ್ತೀರಿ ಎಂದು ನ್ಯಾಯಾಧೀಷರು ಪ್ರಶ್ನಿಸಿದ್ದು,ನಿಖರವಾದ ಉತ್ತರ ದೊರಕಿಲ್ಲ.

Leave A Reply

Your email address will not be published.