ಬಲೆ ಬೀಸಿ ಮೀನು ಹಿಡಿಯುವಾಗ ಮೀನುಗಾರನಿಗೆ ಬಂಪರ್…ಮೀನಿನ ಹೊಟ್ಟೆಯಲ್ಲಿ ಸಿಕ್ಕಿತು ‘ಗಂಗಸರ’ ಬಾಟಲ್

ಹೊಳೆ ಅಥವಾ ಸಾಗರದಲ್ಲಿ ಬಲೆ ಬೀಸಿ ಮೀನು ಹಿಡಿಯುವುದು ಒಂದು ಖುಷಿ, ಹೀಗೆ ಬಲೆ ಬೀಸುವಾಗ ಮೀನೊಂದು ಸಿಕ್ಕಿದರೆ ಇನ್ನೂ ಖುಷಿ. ಆದರೆ ಇಲ್ಲೊಬ್ಬ ಮೀನುಗಾರ ಸಾಗರದಲ್ಲಿ ಬಲೆ ಬೀಸಿ ಮೀನು ಹಿಡಿಯುತ್ತಿರುವಾಗ ಬೃಹದಾಕಾರದ ಮೀನೊಂದು ಬಲೆಗೆ ಬಿದ್ದಿದೆ.

ಮೀನು ಬೀಳುತ್ತಲೇ ಆತ ಖುಷಿಯಿಂದ ಬಲೆಯನ್ನು ಮೇಲಕ್ಕೆತ್ತಿ ಮೀನನ್ನು ಬಿಡಿಸಿಕೊಂಡು ನೋಡುವಾಗ ಇನ್ನೊಂದು ಆಶ್ಚರ್ಯ ಆತನಿಗೆ ಕಾದಿತ್ತು. ಅದೇನೆಂದು ನೋಡುತ್ತಲೇ ಆತ ಬೆಚ್ಚಿಬಿದ್ದ, ಆಶ್ಚರ್ಯವೆಂಬಂತೆ ಆ ಮೀನಿನ ಹೊಟ್ಟೆಯಲ್ಲಿ ವಿಸ್ಕಿ ಬಾಟಲೊಂದು ದೊರಕಿದೆ. ಅದೂ ಫುಲ್ ಬಾಟಲ್. ಸೀಲ್ ಬೇರೆ ಓಪನ್ ಆಗಿಲ್ಲ. ಮೀನಿನ ಜತೆ ಫುಲ್ ಬಾಟಲ್ ಸಿಕ್ಕ ಮೀನುಗಾರನ ಆನಂದದ ಬಗ್ಗೆ ಬೇರೆ ಹೇಳಬೇಕೆ ? ಈ ಘಟನೆಯನ್ನು ಆತ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ಮೀನುಗಾರನಿಗೆ ದೊರಕಿದ ವಿಸ್ಕಿ ಬಾಟಲಿಯಿಂದ ಆತ ಫುಲ್ ಖುಷಿಯಾಗಿದ್ದರೂ, ನೆಟ್ಟಿಗರು ಈ ಬಗ್ಗೆ ಕಾಮೆಂಟ್ಸ್ ಗಳ ಮೂಲಕ ವನ್ಯಜೀವಿಗಳಿಗೆ ಬಂದೊದಗುತ್ತಿರುವ ಅಪಾಯದ ಬಗೆಗೆ ಚರ್ಚೆ ನಡೆಸುತ್ತಿದ್ದಾರೆ. ಕಾರ್ಖಾನೆಗಳಿಂದ ಹೊರಬರುತ್ತಿರುವ ತ್ಯಾಜ್ಯ ಮುಂತಾದವುಗಳು ಸಮುದ್ರ ಸೇರುವುದರಿಂದ ಜಲಚರಗಳು ಇಂತಹುದೇ ವಸ್ತುಗಳನ್ನು ಸೇವಿಸುತ್ತಿವೆ. ಇವು ಉಸಿರಾಡುವಾಗ ಇಲ್ಲವೇ ಆಹಾರವೆಂದು ತಿನ್ನುವ ಸಂದರ್ಭದಲ್ಲಿ ಸಾಗರದಲ್ಲಿರುವ ಈ ತ್ಯಾಜ್ಯ ವಸ್ತುಗಳು ಅವುಗಳ ಹೊಟ್ಟೆಯನ್ನು ಸೇರಿಕೊಳ್ಳುತ್ತಿದೆ.

ಏನೇ ಆಗಲಿ, ಆ ಮೀನುಗಾರನ ಖುಷಿಗೆ ಪಾರವೇ ಇಲ್ಲ. ಅತ್ತ ಮೀನು ಫ್ರೈ ರೆಡಿ ಆಗುತ್ತಿದ್ದಂತೆ, ಇತ್ತ ಒಂದು ಪೆಗ್ ರೆಡಿ ಮಾಡಿಕೊಳ್ಳಲೆಂದು, ಸ್ವತಃ ಮೀನೇ ಡ್ರಿಂಕ್ಸ್ ಅರೇಂಜ್ ಮಾಡಿದೆ.

Leave A Reply

Your email address will not be published.