ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರಾಗಿ ಎಚ್.ಎಂ.ಕೃಷ್ಣ ಕುಮಾರ್

CAMPCO ಇದರ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಎಚ್.ಎಮ್.ಕೃಷ್ಣಕುಮಾರ್‌ರವರು ಅಧಿಕಾರ ವಹಿಸಿಕೊಂಡಿದ್ದಾರೆ. ಕ್ಯಾಂಪ್ಕೊ ಕೇಂದ್ರ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನೇಮಕ ಮಾಡಲಾಯಿತು.

ಆಹಾರ ತಂತ್ರಜ್ಞಾನ ಪರಿಣಿತರಾಗಿರುವ ಕೃಷ್ಣಕುಮಾರ್ ರವರು ಮಂಗಳೂರು ವಿಶ್ವವಿದ್ಯಾಲಯದಿಂದ ರ್‍ಯಾಂಕ್ ನೊಂದಿಗೆ ಬಿಎಸ್ಸಿ ಮತ್ತು ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಿಂದ ಎಂ.ಎಸ್ಸಿ ಪದವಿಯನ್ನು ಪಡೆದಿದ್ದು, ಗುಣಮಟ್ಟ ಖಾತರಿ ವಿಷಯದಲ್ಲಿ ವಿಶೇಷ ಪರಿಣತಿಯನ್ನು ಹೊಂದಿದವರಾಗಿದ್ದಾರೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಗಳನ್ನು ನೀಡಿರುವ ಅವರು, ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆಯಲ್ಲಿ ಆಹಾರ ಗುಣಮಟ್ಟ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿ, ಸಂಸ್ಥೆಯ ವಿವಿಧ ವಿಭಾಗದಲ್ಲಿ ಸುಮಾರು ೩೦ ವರ್ಷಗಳ ಕಾಲ ಸಲ್ಲಿಸಿದ್ದು, ರಾಷ್ಟ್ರಮಟ್ಟದಲ್ಲಿ ಆಹಾರ ಭದ್ರತಾ ಪ್ರಾಧಿಕಾರದ ನಿಯಮಾನುಸಾರ ಅಡಿಕೆಯ ಪ್ರಮಾಣೀಕರಣಕ್ಕಾಗಿ ಮತ್ತು ಆ ಮೂಲಕ ಅಡಿಕೆ ಮಾರುಕಟ್ಟೆಯ ಭವಿಷ್ಯವನ್ನು ಸುಭದ್ರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸುರೇಶ್ ಭಂಡಾರಿ ಅವರ ಕಾರಣಾಂತರಗಳ ರಜೆಯ ಹಿನ್ನೆಲೆಯಲ್ಲಿ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಕೃಷ್ಣ ಕುಮಾರ್ ಅವರು ಕೆಲಸ ನಿರ್ವಹಣೆಯಲ್ಲಿ ಇದ್ದರು‌‌.ಈಗ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆ ಮಾಡಿದೆ.

ಸದಸ್ಯ ಬೆಳೆಗಾರರುಗಳು ಸಂಸ್ಥೆಗೆ ಯಾ ಸಂಸ್ಥೆಯ ವ್ಯವಹಾರಗಳಿಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಳಿಗಾಗಿ mdcampco@gmail.com, hmkkumar@gmail.com, ದೂರವಾಣಿ 0824 2425866/2888220/2888218, 9535618138. ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave A Reply

Your email address will not be published.