ವಿಟ್ಲ : ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ | ರಸ್ತೆಗೆ ಬಿದ್ದ ಸಹಸವಾರೆ ಮೃತ್ಯು

ವಾಹನದಿಂದ ಸಹಸವಾರ ನಿಯಂತ್ರಣ ತಪ್ಪಿ ರಸ್ತೆ ಬಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವಿಟ್ಲ ಕಸಬ ಗ್ರಾಮದ ಸೇರಾಜೆ ಎಂಬಲ್ಲಿ ನಡೆದಿದೆ.

ವಿಟ್ಲ ಕಸಬಾದ ಸೇರಾಜೆ ನಿವಾಸಿ ರುಫಿನಾ ಕೋಸೆಸ್ ಪಿಂಟೋ(52) ಎಂಬವರೇ ಮೃತಪಟ್ಟ ಮಹಿಳೆ

ಮಾಸ್ಟ್ರೋ ದ್ವಿಚಕ್ರ ವಾಹನದಲ್ಲಿ ಸವಾರ ಜಯರಾಮ ಎಸ್ ಅವರು ಪರಿಚಯದ ರುಫಿನಾ ಕೋಸೆಸ್ ಪಿಂಟೋ(52) ರವರನ್ನು ಕೂರಿಸಿ ತೆರಳುತ್ತಿದ್ದ ವೇಳೆ ಸಹಸವಾರ ರುಫಿನಾ ಕೋಸೆಸ್ ಪಿಂಟೋ ಅವರು ಹತೋಟಿ ತಪ್ಪಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದು, ಇದರಿಂದ ಅವರ ತಲೆಯ ಹಿಂಬದಿ, ಬಾಯಿಗೆ, ಹಣೆಯ ಎದುರು ಭಾಗ ತೀವ್ರ ತರವಾದ ಗಾಯಗೊಂಡಿದ್ದು ತಕ್ಷಣವೇ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾರೆ.

Leave A Reply

Your email address will not be published.