ಮಂಗಳೂರು : ಭಾರೀ ಮಳೆಗೆ ಫ್ಲ್ಯಾಟಿನ ತಡೆಗೋಡೆ ಕುಸಿತ | ಮೂರು ವಾಹನಗಳು ಜಖಂ

ಶುಕ್ರವಾರ ಸುರಿದ ಭಾರೀ ಮಳೆಗೆ ಮಂಗಳೂರು ನಗರದ ಫ್ಯಾಟ್ ವೊಂದರ ತಡೆಗೋಡೆ ಕುಸಿದ ಘಟನೆ ನಡೆದಿದೆ.

ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿ ತಡೆಗೋಡೆ ಕುಸಿದು ಬಿದಿದ್ದು, ಈ ವೇಳೆ ತಡೆಗೋಡೆ ಪಕ್ಕ ನಿಲ್ಲಿಸಿದ್ದ ಮೂರು ವಾಹನಗಳು ಜಖಂಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಮದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಮೇಯರ್ , ಮಂಗಳೂರು ನಗರ ಪಾಲಿಕೆ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ತನಿಖೆಗೆ ಆದೇಶ ನೀಡಿದ್ದಾರೆ.

Leave A Reply

Your email address will not be published.