ಮ್ಯಾನ್‌ಹೋಲ್‌ಗೆ ಇಳಿದ ಮೂವರು ಕಾರ್ಮಿಕರು ಸಾವು | ಉಸಿರುಗಟ್ಟಿ ಜೀವ ತೆತ್ತ ಕಾರ್ಮಿಕರು

ಬೆಂಗಳೂರು : ಜಿಲ್ಲಾ ಕೇಂದ್ರ ರಾಮನಗರ ಖಾಸಗಿ ಲೇಔಟ್ ನಲ್ಲಿ ಯು.ಜಿ.ಡಿ. ಕಾಮಗಾರಿ ವೇಳೆ ನಿರ್ಮಾಣ ಹಂತಸ ಮ್ಯಾನ್ ಹೋಲ್ ಗೆ ಇಳಿದ ಮೂವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ರಾಜೇಶ (30 ವ), ಮಂಜುನಾಥ (30 ವ), ಮಂಜುನಾಥ (31 ವ) ಮೃತಪಟ್ಟವರು. ಎಲ್ಲರೂ ಬೆಂಗಳೂರು ಕಮಲಾನಗರದ ನಿವಾಸಿಗಳು. ಇವರೆಲ್ಲರೂ ಉಸಿರುಗಟ್ಟಿ ಸತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ಶವಗಳನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave A Reply

Your email address will not be published.