Monthly Archives

May 2021

ಸಿಬಿಎಸ್ಇ 12 ಪರೀಕ್ಷೆ ಕುರಿತು ಎರಡು ದಿನಗಳಲ್ಲಿ ಅಂತಿಮ ತೀರ್ಮಾನ | ಕೇಂದ್ರ ಸರ್ಕಾರ ಮಾಹಿತಿ

ನವದೆಹಲಿ: ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ದೇಶದಲ್ಲಿ ಸಿಬಿಎಸ್ಇ 12 ತರಗತಿ ಪರೀಕ್ಷೆ ನಡೆಸುವ ಕುರಿತು ಎರಡು ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಸುಪ್ರೀಂ ಕೋರ್ಟ್ ಇಂದು ಈ ವಿಚಾರವಾಗಿ ವಿಚಾರಣೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ಕೇಂದ್ರ

ಅಟೋಮೊಬೈಲ್ ಅಂಗಡಿಗೆ ಆಕಸ್ಮಿಕ ಬೆಂಕಿ

ಮಂಗಳೂರು ಂ ತೊಕ್ಕೊಟ್ಟಿನಲ್ಲಿರುವ ಆಟೋ ಮೊಬೈಲ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಕೊರಗಜ್ಜನ ಕಟ್ಟೆಯ ಸಮೀಪ ಇರುವ ಕಟ್ಟಡದಲ್ಲಿ ಕುಂಪಲ ನಿವಾಸಿ ಭರತ್ ಎಂಬವರು ದ್ವಿಚಕ್ರ ವಾಹನಗಳ ಆಟೋ ಮೊಬೈಲ್ಸ್ ಮಳಿಗೆ ನಡೆಸುತ್ತಿದ್ದರು.

ತೊಕ್ಕೊಟ್ಟು | ಬೆಂಕಿಯ ಜ್ವಾಲೆಗೆ ಸಂಪೂರ್ಣ ಭಸ್ಮವಾದ ಅಂಗಡಿ

ತೊಕ್ಕೊಟ್ಟು: ಮಂಗಳೂರಿನ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಇರುವ ಕೊರಗಜ್ಜನ ಗುಡಿ ಸಮೀಪದ ವಾಣಿಜ್ಯ ಕಟ್ಟಡದ ಅಂಗಡಿಯೊಂದರಲ್ಲಿ ಇಂದು ಬೆಳಿಗ್ಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಓವರ್ ಬ್ರಿಡ್ಜ್ ಬಳಿಯಿರುವ ಗೋಲ್ಡನ್ ಸ್ಪೇರ್ ಪಾರ್ಟ್ಸ್ ಅಂಗಡಿಯಲ್ಲಿ ಅವಘಢ ಸಂಭವಿಸಿದೆ. ಮುಚ್ಚಿದ್ದ

ಶವದ ಎದುರಲ್ಲೇ ಊಟ-ತಿಂಡಿ ಮಾಡಬೇಕಾದ ಶೋಚನೀಯ ಸ್ಥಿತಿ | ಇದು ಸೋಂಕಿತರ ಮತ್ತು ಸಂಬಂಧಿಕರ ಗೋಳು

ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೋನ ಎರಡನೇ ಅಲೆಯಿಂದಾಗಿ ದಿನದಿಂದ ದಿನಕ್ಕೆ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ, ಅಲ್ಲದೆ ಪ್ರತಿದಿನ ಸಾವಿನ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೆಲವು ಆಸ್ಪತ್ರೆಗಳಲ್ಲಿ ಶೋಚನೀಯ ಸ್ಥಿತಿ ಎದುರಾಗಿದೆ. ಇದಕ್ಕೊಂದು ಉದಾಹರಣೆ

ಕಾರ್ಕಳ | ಆಕಸ್ಮಿಕವಾಗಿ ಬಾವಿಗೆ ಬಿದ್ದ ಇಬ್ಬರನ್ನು ರಕ್ಷಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು

ಕಾರ್ಕಳ : ನಗರದ ಮಾರ್ಕೆಟ್ ರಸ್ತೆ ಬಳಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಇಬ್ಬರನ್ನು ಕಾರ್ಕಳ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಮೇ 30ರಂದು ರಾತ್ರಿ ಕಾಲು ಜಾರಿ 53 ವರ್ಷದ ವ್ಯಕ್ತಿಯೋರ್ವರು ಬಾವಿಗೆ ಬಿದ್ದಿದ್ದರು. ಇದನ್ನು ಕಂಡು ಅವರ ರಕ್ಷಣೆಗೆ ಮತ್ತೋರ್ವರು ಬಾವಿಗಿಳಿದರು.

ಸೌದಿ ಅರೇಬಿಯಾದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿರ್ಬಂಧ ಹೇರಿದ ಸರಕಾರ

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಕಡಿಮೆ ಮಾಡುವುದಕ್ಕೆಸೌದಿ ಅರೇಬಿಯಾದಲ್ಲಿ ಕಠಿಣ ನಿಯಮವನ್ನು ಜಾರಿಗೊಳಿಸಲಾಗಿದೆ. ದಿನದಲ್ಲಿ ಎರಡೇ ಬಾರಿ ಧ್ವನಿವರ್ಧಕ ಬಳಕೆ ಮಾಡಬೇಕು, ಅದು ಕೂಡ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಶಬ್ದ ಮಾಡಿ ಅದರ ಬಳಕೆ ಮಾಡಬೇಕು. ಇಲ್ಲದಿದ್ದರೆ ಕಠಿಣ ಕ್ರಮ

ಸುಳ್ಯ | ರಕ್ತದೊತ್ತಡ ಇಳಿಕೆ ವೈದ್ಯಕೀಯ ವಿದ್ಯಾರ್ಥಿನಿ ಮೃತ್ಯು

ಸುಳ್ಯ : ರಕ್ತದೊತ್ತಡ ಇಳಿಕೆಯಾಗಿ ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಸುಳ್ಯ ತಾಲೂಕಿನ ಕೂಜುಗೋಡು ಕಟ್ಟೆಮನೆಯ ಯುವತಿಯೋರ್ವಳು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ದಿನೇಶ್ ಕೂಜುಗೋಡು ಕಟ್ಟೆಮನೆ ಎಂಬವರ ಪುತ್ರಿ ಪ್ರತೀಕ್ಷಾ (21 ವರ್ಷ)

ವಿಟ್ಲ | ಮನೆ ನಿರ್ಮಾಣ ವಿಚಾರದಲ್ಲಿ ಎರಡು ಹಿಂದೂ ಸಂಘಟನೆಗಳ ನಡುವೆ ಪರಸ್ಪರ ಹಲ್ಲೆ, ದೂರು ದಾಖಲು

ಮನೆ ನಿರ್ಮಿಸಿ ಕೊಡುತ್ತಿರುವ ವಿಚಾರವಾಗಿ ವಿಟ್ಲದ ಪೆರುವಾಯಿಯಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರ ನಡುವೆ ವೈಮನಸ್ಸು ಉಂಟಾಗಿ ಪರಸ್ಪರ ಹಲ್ಲೆ ನಡೆದಿದೆ ಎಂದು ಆರೋಪಿಸಿ ಎರಡು ತಂಡಗಳ ಸದಸ್ಯರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಾಗೂ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಮೇ 31 ರಂದು

ಬಂಟ್ವಾಳ ನಗರ ಪೊಲೀಸ್ ಠಾಣೆ ಎಎಸ್ಐ ಜಯರಾಮ ರೈ ಹೃದಯಾಘಾತದಿಂದ ನಿಧನ

ಬಂಟ್ವಾಳ: ಬಂಟ್ವಾಳ ನಗರ ಠಾಣೆಯ ಎಎಸೈ ಜಯರಾಮ ರೈ ಅವರು ಹೃದಯಾಘಾತದಿಂದ ಸೋಮವಾದ ನಿಧನರಾದರು. ಬಂಟ್ವಾಳ ತಾಲೂಕಿನಮಂಚಿ ನಿವಾಸಿಯಾಗಿರುವ ಜಯರಾಮ ರೈ ಅವರು ಕೆಲ ದಿನಗಳಿಂದ ಬೆನ್ನು ನೋವು ಸಮಸ್ಯೆ ಯಿಂದ ಬಳಲುತ್ತಿದ್ದು ವಾರದ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ

ತನ್ನ ಧರ್ಮವನ್ನು ಮುಚ್ಚಿಟ್ಟು ಇನ್ನೊಂದು ಮದುವೆಯಾದ ಏಳು ಮಕ್ಕಳ ತಂದೆ

ವ್ಯಕ್ತಿಯೊಬ್ಬ ತನ್ನ ನಿಜವಾದ ಧರ್ಮವನ್ನು ಮರೆ ಮಾಚಿ ಸುಳ್ಳು ಹೇಳಿ ಯುವತಿಯೊಬ್ಬಳಿಗೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಉತ್ತರಪ್ರದೇಶದ ಲಕ್ಷ್ಮೀ ಸಮೀಪದ ಗಾಜಿಪುರ್ ನಲ್ಲಿ ಈ ಪ್ರಕರಣ ದಾಖಲಾಗಿದೆ. ಅಬಿದ್ ಎಂಬ ಹೆಸರಿನ ವ್ಯಕ್ತಿ ತನ್ನನ್ನು ಆದಿತ್ಯ ಸಿಂಗ್ ಎಂದು ಪರಿಚಯಿಸಿಕೊಂಡಿದ್ದ.