ಯುವಕರ ಟಿಕ್ಕಾ ಪಾರ್ಟಿ ವೇಳೆ ಪೊಲೀಸರು ಪ್ರತ್ಯಕ್ಷ

ಟಿಕ್ಕಾ ಪಾರ್ಟಿ ನಡೆಯುತ್ತಿದ್ದಾಗ ಪೊಲೀಸರು ದಾಳಿ ಮಾಡಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಲಾಕ್ ಡೌನ್ ನಿಂದ ಹೊರಗಡೆ ಎಲ್ಲೂ ತಿರುಗಾಡೋದಕ್ಕೆ ಆಗಲ್ಲ ಎಂದು ಯುವಕರೆಲ್ಲರು ಒಂದು ಕಡೆ ಸೇರಿದ್ದರು. ಅಲ್ಲೇ ಎಲ್ಲರೂ ಸೇರಿ ಟಿಕ್ಕಾ ಪಾರ್ಟಿ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಪೊಲೀಸ್ ದಾಳಿ ನಡೆದಿದೆ.

ಪಾರ್ಟಿಗಾಗಿ ಚಿಕನ್ ತಂದು ಸ್ಥಳದಲ್ಲೇ ಟಿಕ್ಕಾ ತಯಾರಿಸಿ ತಿನ್ನೋದಕ್ಕೆ ರೆಡಿಯಾಗಿದ್ದರು. ಅಷ್ಟರಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಯುವಕರು ಟಿಕ್ಕಾ ಹಾಗೂ ತಮ್ಮ ಬೈಕ್ ಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಆಗತಾನೆ ಫ್ರೆಶ್ ಆಗಿ ಬೆಂದ, ಹೊಗೆ ಭರಿತ ಚಿಕನ್ ಟಿಕ್ಕಾ ಸವಿದಿದ್ದಾರೆ ಎಂದು ಸುದ್ದಿಯಿದೆ. ಆನಂತರ ಅಲ್ಲಿದ್ದ ಬೈಕುಗಳ ಜತೆ ಚಿಕನ್ ಟಿಕ್ಕಾ, ಚಿಕನ್ ಕಲ್ಮಿ ಗಳ ಜತೆ ಇತರ ಪರಿಕರಗಳನ್ನು ಪೋಲಿಸ್ ಠಾಣೆಗೆ ಪಾರ್ಸೆಲ್ ಮಾಡಿದ್ದಾರೆ.

Leave A Reply

Your email address will not be published.