ನಗ್ನ ಚಿತ್ರ ಮತ್ತು ವಿಡಿಯೋಗಳೇ ಈಕೆಯ ಬಂಡವಾಳ | ಬೆತ್ತಲೆ ದೇಹ ಎದುರಿಗಿಟ್ಟು ದುಡ್ಡು ಮಾಡಲು ಹೊರಟ ಪೂನಂ ಪಾಂಡೆ !

ಬಾಲಿವುಡ್ ನಟಿ ಪೂನಂ ಪಾಂಡೆ ಯಾರಿಗೆ ಗೊತ್ತಿಲ್ಲ ಹೇಳಿ. ಈ ನಟಿ ಸದಾ ತನ್ನ ಹಾಟ್ ನ್ಯೂಸ್ ನಿಂದ ಸುದ್ದಿಯಲ್ಲಿರುತ್ತಾರೆ. ಈಗ ಈಕೆ ಮತ್ತೆ ಅದೇ ರೀತಿಯ
ಸುದ್ದಿಯಲ್ಲಿದ್ದಾಳೆ. ಸದ್ಯಕ್ಕೆ ಯಾವುದೇ ಸಿನಿಮಾ, ವೆಬ್ ಸೀರಿಸ್ ಆಫರ್ ಗಳು ಆಕೆಯ ಕೈಯಲ್ಲಿ ಇಲ್ಲದ ಕಾರಣ ಪೂನಂ ತಮ್ಮ ಹಾಟ್ ಲುಕ್ ಮೂಲಕದ್ದಾಳೆ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಬೌನ್ಸಿಂಗ್ !

ಈಗ ಆಕೆ ತಮ್ಮದೇ ಆ್ಯಪ್ ಮೂಲಕ, ಅನೇಕ ಹಸಿಬಿಸಿ
ವಿಡಿಯೋಗಳನ್ನು, ಮಾದಕ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಆ್ಯಪ್ ಡೌನ್ಲೋಡ್ ಮಾಡಿಕೊಂಡ ಚಂದಾದಾರರಿಗೆ ಆ ವಿಡಿಯೋ ಮತ್ತು ಫೋಟೋಗಳ ಕ್ಷಣಿಕ ರಸದೌತಣ ದೊರಕುತ್ತದೆ. ಅಷ್ಟಕ್ಕೇ ಆಕೆ ತೃಪ್ತಳು. ಆಕೆಯ ನೋಡುಗರಂತೂ ಸದಾ ಅತೃಪ್ತ ಆತ್ಮಗಳು. ಅವು ಆಕೆಯ ಮತ್ತೊಂದು ಅಂತಹುದೇ ಫೋಟೋ ಮತ್ತು ವಿಡಿಯೋ ಗಾಗಿ ಕಾದು ಕುಳಿತಿರುತ್ತವೆ !!

ಇಂಗ್ಲೆಂಡ್ ಮೂಲದ ಓಗ್ಲಿಫ್ಯಾನ್ಸ್ ಜಾಲತಾಣದಲ್ಲಿ ಪೂನಂ ಪಾಂಡೆ ಖಾತೆ ಹೊಂದಿದ್ದಾರೆ. ಅಲ್ಲಿ ಅವರು ಹಾಕುವ ವಿಡಿಯೋಗಳನ್ನು ನೋಡಬೇಕು ಎಂದರೆ ಜನರು ಹಣ ನೀಡಬೇಕು. ಹೀಗಾಗಿ ಪೂನಂ ಪಾಂಡೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ, ವಿಡಿಯೋ ಹಾಕುವುದರ ಬಗ್ಗೆ ಮಾಹಿತಿ ನೀಡುತ್ತಾರೆ. ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಪೂನಂ ಪಾಂಡೆ ಇದನ್ನೇ ಈಗ ಹಣ ಗಳಿಸುವ ಮಾರ್ಗವನ್ನಾಗಿಸಿದ್ದಾರೆ.

ವೆಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಅಶ್ಲೀಲ ವೀಡಿಯೊಗಳಿಗೆ ಸಂಬಂಧಿಸಿದಂತೆ ಆಕೆಯ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಎರಡು ದಿನಗಳ ಹಿಂದೆ ಮುಂಬೈ ಸೆಷನ್ ನ್ಯಾಯಾಲಯ ಬಂಧನಪೂರ್ವ ಜಾಮೀನು ಕೂಡ ನಿರಾಕರಿಸಿದೆ. ನ್ಯಾಯಾಲಯದಿಂದ ಪೂನಂ ಪಾಂಡೆಗೆ ನೋಟಿಸ್ ಕಳುಹಿಸಿದರೂ, ತನಿಖೆಗೆ ಆಕೆ ಸಹಕರಿಸಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಎಲ್ಲದಕ್ಕೂ ಆಕೆ ಡೊಂಟ್ ಕೇರ್ !

ಕಳೆದ ವರ್ಷ ಅವರಿಗೆ ಸ್ಯಾಮ್ ಬಾಂಬೆ ಎಂಬುವರ ಜತೆ ವಿವಾಹವಾಗಿತ್ತು. ಕಟ್ಟಿದ ಗಂಟು ಕೆಲವೇ ದಿನಗಳಲ್ಲಿ ಕಗ್ಗಂಟಾಗಿ ಆನಂತರ ಗಂಟು ಬಿಚ್ಚಿಕೊಂಡು ಬಿಟ್ಟಿತ್ತು.ಆ ಮದುವೆ ಕೊನೆಗೆ ಮುರಿದುಬಿದ್ದಿದೆ.

ಅವಳು ತನ್ನ ಕಲೆ ಮತ್ತು ಪ್ರತಿಭೆಯ ಮೂಲಕ ಬೆಳೆಯಬೇಕೆ ಹೊರತು, ತನ್ನ ಹಸಿಬಿಸಿ ಮೈ ತೋರಿಸಿಕೊಂಡು, ಅಶ್ಲೀಲತೆಯಿಂದ ಪ್ರಚಾರ ಮಾಡಿಕೊಂಡು ಹಾಗೂ ಅದರ ಮೂಲಕ ಹಣಗಳಿಸುವುದಲ್ಲ. ಇದು ಈಕೆ ತನ್ನ ವೃತ್ತಿಗೆ ತೋರುವ ಅಗೌರವವೇ ಸರಿ. ಬಿಚ್ಚಲು ಹೋಗಿ ಕೊನೆಗೆ ಬೆಚ್ಚಿ ಬಿದ್ದು, ಸರಿ ದಾರಿಯ ಕಡೆಗೆ ಹೊರಟ ಸನ್ನಿಯ ಉದಾಹರಣೆ ತೀರ ಹತ್ತಿರದಲ್ಲಿ ಕಣ್ಣಮುಂದಿದ್ದರೂ, ಪೂನಂ ಪಾಂಡೆಗೆ ಯಾವುದೂ ಕಾಣಿಸುತ್ತಿಲ್ಲ.

Leave A Reply

Your email address will not be published.