ಕರುನಾಡಿಗೆ ನ್ಯೂ ಫಂಗಸ್ ಎಂಟ್ರಿ…? | ಮೈಸೂರಿನ ಕೆಲವರಲ್ಲಿ ಮೈಕೋಸಿಸ್ ಫಂಗಸ್ ಪತ್ತೆ…!
ಮೈಸೂರು: ಕೊರೋನಾ ದಿನೇ ದಿನೇ ಹೊಸ ಹೊಸ ವಿಧಗಳಲ್ಲಿ ಮತ್ತೆ ಕಾಡುತ್ತಿದೆ. ಬ್ಲ್ಯಾಕ್ ಫಂಗಸ್ ಪತ್ತೆ ಬೆನ್ನಲ್ಲೇ ಮೈಸೂರಿನಲ್ಲಿ ಅದರ ಹೊಸ ರೂಪ ಮೂವರಲ್ಲಿ ಕಂಡು ಬಂದಿದೆ.
ಹೊಸ ಫಂಗಸ್ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದ್ದು, ಗುಣಮುಖರಾದ ಕೋವಿಡ್ ರೋಗಿಗಳಲ್ಲಿ ಕಂಡುಬಂದಿದೆ.
ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಮೂವರಲ್ಲಿ ಬ್ಲ್ಯಾಕ್ ಫಂಗಸ್ ದೃಢಪಟ್ಟಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ ಮೂವರು ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಪರೀಕ್ಷೆ ಮಾಡಿಸಿದಾಗ ಅವರಲ್ಲಿ ಹೊಸ ಬಗೆಯ ಫಂಗಸ್ ಸೋಂಕು ಕಂಡು ಬಂದಿದೆ.
ಮೊದಲಿಗೆ ಇದನ್ನು ಬ್ಲ್ಯಾಕ್ ಫಂಗಸ್ ಎಂದುಕೊಂಡಿದ್ದ ವೈದ್ಯರಿಗೆ, ನಂತರ ಇದು ಕಪ್ಪು ಶಿಲೀಂಧ್ರಕ್ಕಿಂತ ಭಿನ್ನವಾದುದು ಎಂದು ಕಂಡು ಬಂದಿದ್ದು, “ಮ್ಯೂಕೋ ಮೈಕೋಸಿಸ್” ಗುಂಪಿಗೆ ಸೇರಿದ ಫಂಗಸ್ ಎಂದು ಗುರುತಿಸಿದ್ದಾರೆ. ಸೋಂಕಿತರನ್ನು ಹೆಚ್ಚಿನ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ.