BBK11: ಫಿನಾಲೆ ಟಿಕೆಟ್‌ ಗೆದ್ದ ಹಾಡು ಹಕ್ಕಿ ಹನುಮಂತ! ಮಂಜು ಜೈಲಿಗೆ

BBK11: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಫಿನಾಲೆ ಟಿಕೆಟ್‌ ಆಟ ನಡೆಯುತ್ತಿದೆ. ಇನ್ನೇನು ಎರಡು ವಾರದಲ್ಲಿ ಬಿಗ್‌ಬಾಸ್‌ ಶೋ ಮುಗಿಯಲಿದೆ. ಹಾಗಾಗಿ ಉಳಿದ ಸ್ಪರ್ಧಿಗಳಲ್ಲಿ ಸ್ಪರ್ಧೆ ತೀವ್ರವಾಗಿದೆ. ಎಲ್ಲರೂ ತಮ್ಮ ಕೊನೆಯ ಆಟ ಎಂಬಂತೆ 100% ಕೊಡುತ್ತಿದ್ದಾರೆ. ಬಿಗ್‌ಬಾಸ್‌ ಆಟ ರೋಚಕ ಹಂತ ತಲುಪಿದ್ದು, ಬಿಗ್‌ಬಾಸ್‌ ವೀಕ್ಷಕರನ್ನು ಕಣ್ಣು ಮಿಟುಕಿಸದ ರೀತಿಯಲ್ಲಿ ಹಿಡಿದಿಟ್ಟುಕೊಂಡು ಆಟ ನಡೆಯುತ್ತಿದ್ದು, ರಣರೋಚಕ ಕೊನೆಯ ಫಿನಾಲೆ ಟಿಕೆಟ್‌ ಪಡೆಯೋ ಹಂತಕ್ಕೆ ಬಂದಿದೆ. ಈಗಾಗಲೇ ಹನುಮಂತ, ಭವ್ಯಾ, ರಜತ್‌, ತ್ರಿವಿಕ್ರಮ್‌ ಅವರು ನೀಲಿ ಬ್ಯಾಜ್‌ ಧರಿಸಿ ಫಿನಾಲೆ ಟಿಕೆಟ್‌ ಪಡೆಯಲು ಸಜ್ಜಾಗಿದ್ದಾರೆ.

 


ಬೆಳಗ್ಗೆ ಬಿಟ್ಟ ಪ್ರೊಮೋದಲ್ಲಿ ನಾಲ್ಕು ಮಂದಿಯ ಆಟದ ಗ್ಲಿಂಪ್ಸ್‌ ತೋರಿಸಲಾಗಿತ್ತು. ಹಗ್ಗದ ಸರಪಳಿಯನ್ನು ಹತ್ತಿ ಬಾವುಟ ಹಾರಿಸಿ ಗೂಟ ಹಾಕಿ ಬಿಗ್‌ಬಾಸ್‌ ಎಂದು ಹೇಳಿ ಸರದಿಯಾಟದಲ್ಲಿ ಕಡಿಮೆ ಸಮಯ ತಗೊಂಡು ಆಟ ಮುಗಿಸುವರೋ ಅವರೇ ಈ ಬಿಗ್‌ಬಾಸ್‌ನ ಕೊನೆಯ ವಾರಕ್ಕೆ ಸಲೀಸಾಗಿ ಎಂಟ್ರಿ ಪಡೆಯಲು ಸಾಧ್ಯ. ಅಂದರೆ ಇನ್ನುಳಿದ ಎರಡು ವಾರ ಅವರು ಯಾವುದೇ ಕಷ್ಟ ಪಡದೇ ಆರಾಮವಾಗಿ ಇರಬಹುದು.

ಇದೀಗ ಮಧ್ಯಾಹ್ನ ಬಂದ ಪ್ರೊಮೋದಲ್ಲಿ ಕಳಪೆ ಉತ್ತಮ ಆಟದಲ್ಲಿ ಮಂಜು ಅವರಿಗೆ ಹೆಚ್ಚು ವೋಟ್‌ ಬಿದ್ದ ಪರಿಣಾಮ ಅವರು ಜೈಲಿಗೆ ಹೋಗಿದ್ದಾರೆ. ಇಲ್ಲಿ ಕಂಡು ಬಂದ ದೃಶ್ಯವೇನೆಂದರೆ ಜೈಲಿನ ಬಾಗಿಲು ಓಪನ್‌ ಮಾಡುವ ಕೀ ಕ್ಯಾಪ್ಟನ್‌ ಹನುಮಂತ ಅವರ ಕೈಯಲ್ಲಿತ್ತು. ಹಾಗಾಗಿ ಫಿನಾಲೆ ಟಿಕೆಟ್‌ ಪಡೆದು ಹನುಮಂತ ಗೆದ್ದಿದ್ದಾರೆ ಎನ್ನಬಹುದು. ಹಾಗೂ ಬಿಗ್‌ಬಾಸ್‌ ಮನೆಯ ಕೊನೆಯ ಕ್ಯಾಪ್ಟನ್‌ ಕೂಡಾ ಆಗಿದ್ದಾರೆ ಎನ್ನಬಹುದು.

ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಂದು ಬಿಗ್‌ಬಾಸ್‌ ಮನೆಯ ಆಟದ ಕೊನೆಯ ಫಿನಾಲೆ ಹಂತಕ್ಕೆ ತಲುಪಿದ ಹನುಮಂತು ಅವರ ಆಟ ನಿಜಕ್ಕೂ ಶ್ಲಾಘನೀಯ. ಯಾರೊಂದಿಗೂ ಹೆಚ್ಚು ಗಲಾಟೆ ಮಾಡದೇ, ಬಿಗ್‌ಬಾಸ್‌ ಮನೆಯಲ್ಲಿ ಉಳಿಯಬೇಕಾದರೆ ಕಿರುಚಾಡಬೇಕು ಎನ್ನುವುದನ್ನು ಸುಳ್ಳು ಮಾಡಿದ ಸ್ಪರ್ಧಿ. ತನ್ನ ಚಾಣಕ್ಯತನದ ಆಟ, ಮಾತು ಕಡಿಮೆ, ಕೆಲಸ ಜಾಸ್ತಿ ಎಂದು ಗುರುತಿಸಿಕೊಂಡವರಲ್ಲಿ ಹನುಮ ಮೊದಲಿಗ.

ಈ ವಾರ ಚೈತ್ರ, ತ್ರಿವಿಕ್ರಮ್‌, ಭವ್ಯಾ, ಧನರಾಜ್, ಮೋಕ್ಷಿತಾ ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದಾರೆ.

Comments are closed.