ಮಾಸ್ಕ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ವೈದ್ಯ | ಸೂಪರ್ ಮಾರ್ಕೆಟ್ ನಲ್ಲಿ ಡಾಕ್ಟರ್ ಕಕ್ಕಿಲ್ಲಾಯ ಸ್ಪೆಷಲ್ ಕಿರಿಕ್ !!

ಮಂಗಳೂರಿನಲ್ಲಿ ವೈದ್ಯರೊಬ್ಬರು ಮಾಸ್ಕ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.ವೈದ್ಯರೊಬ್ಬರು ನಾನು ಮಾಸ್ಕ್ ಧರಿಸೋದೇ ಇಲ್ಲ. ಸರ್ಕಾರದ ದಡ್ಡ ನಿಯಮಗಳನ್ನು ಪಾಲಿಸುವುದಿಲ್ಲ ಅಂತಾ ಹೇಳಿ ಸೂಪರ್ ಮಾರ್ಕೆಟ್ ನಲ್ಲಿ ಅವಾಂತರ ಮಾಡಿರುವ ಘಟನೆ ನಡೆದಿದೆ.

ಮಂಗಳೂರಿನ ಕದ್ರಿಯಲ್ಲಿರುವ ಜಿಮ್ಮಿಸ್ ಸೂಪರ್ ಮಾರ್ಕೆಟಿನಲ್ಲಿ ಮಂಗಳೂರಿನ ಪ್ರಸಿದ್ಧ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಈ ರೀತಿಯ ಅವಾಂತರ ಮೆರೆದಿದ್ದಾರೆ. ಸೂಪರ್ ಮಾರ್ಕೆಟ್’ಗೆ ಮಾಸ್ಕ್ ಧರಿಸದೆ ಬಂದ ಡಾ.ಕಕ್ಕಿಲ್ಲಾಯರನ್ನು ತಡೆದ ಸೂಪರ್ ಮಾರ್ಕೆಟ್ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ಇಷ್ಟಕ್ಕೇ ಸಿಬ್ಬಂದಿ ಜೊತೆ ಉಡಾಫೆ ವರ್ತನೆ ತೋರಿದ ಡಾಕ್ಟರ್, ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.

ನಾನು ಮಾಸ್ಕ್ ಧರಿಸೋದೇ ಇಲ್ಲ. ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಸ್ ಬರೋದಿಲ್ಲ ಅನ್ನೋದು ತಪ್ಪು ಕಲ್ಪನೆ. ಸರ್ಕಾರದ ದಡ್ಡ ನಿರ್ಧಾರಗಳನ್ನು ನಾನು ಪಾಲಿಸೋದಿಲ್ಲ ಅಂದು ಹೇಳಿ ಬೇಜಾಬ್ದಾರಿ ವರ್ತನೆ ತೋರಿದ್ದಾರೆ.

ಆಗ ಸೂಪರ್ ಮಾರ್ಕೆಟ್ ಸಿಬ್ಬಂದಿ ಮಾಸ್ಕ್ ಧರಿಸದೆ ನಮ್ಮಲ್ಲಿ ಬರಬೇಡಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತದೆ ಅಂತಾ ಮನವಿ ಮಾಡಿದರೂ, ಡಾ.ಕಕ್ಕಿಲ್ಲಾಯ ಮಾತ್ರ ಸೂಪರ್ ಮಾರ್ಕೆಟಿನಲ್ಲಿ ರೇಗಾಡಿ, ಕಿರುಚಾಡಿ ಶಾಪಿಂಗ್ ಮಾಡಿ ಹೋಗಿದ್ದಾರೆ.

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಕೊರೊನಾ ಸೋಂಕು ಆರಂಭದ ಕಾಲದಿಂದಲೂ, ಕೊರೊನಾ ವೈರಸ್ ಅನ್ನೋದು ಬೋಗಸ್, ಕೊರೊನಾದಿಂದ ಸಾವು ಬರಲ್ಲ, ಸರ್ಕಾರಗಳು ಕೊರೊನಾವನ್ನು ದಂಧೆಗೆ ಬಳಸಿಕೊಂಡಿದೆ ಎಂದು ಆರೋಪಿಸಿದ್ದರು. ಇಂಥಾ ಬೇಜವಾಬ್ದಾರಿತನ ತೋರಿಸುವುದು ಪ್ರಜ್ಞಾವಂತ ನಾಗರಿಕರ ಲಕ್ಷಣವಲ್ಲ ಎಂಬ ಮಾತುನಾಗರಿಕ ವಲಯಗಳಲ್ಲಿ ಕೇಳಿಬರುತ್ತಿದೆ.

ಈಗ ಘಟನೆಯು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರ ಗಮನಕ್ಕೆ ಬಂದಿದ್ದು,ಈ ವೈದ್ಯರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ರೀತಿ ಮಾತನಾಡಿದ್ದು ಕೋವಿಡ್ ನಿಯಮಾವಳಿಗಳಿಗೆ ವಿರುದ್ಧವಾಗಿ ಇರುವುದು ಕಂಡು ಬಂದಿದ್ದು ಇದೀಗ ಅವರ ಮೇಲೆ ಪ್ರಕರಣ ದಾಖಲಾಗಿದೆ

2 Comments
  1. Sainatha Rai KS says

    ಇಂಥಾ ಡಾಕ್ಟರ್‌ಗಳ ಕೈಲಿ ಕೊರೋನಾ ಪೇಷಂಟ್ಗಳ ಗತಿ ಹರೋಹರ ?

    ಫೂಲಿಶ್ ಡಾಕ್ಟರ್

  2. Sainatha Rai KS says

    ಇಂಥಾ ವೈದ್ಯರಿಂದನೇ ಕೊರೋನಾ ಇಷ್ಟೊಂದು ಹರಡುತ್ತಿರುವುದು. ತಾವೂ ದಾರಿ ತಪ್ಪಿದವರು. ಇನ್ನೊಬ್ಬರನ್ನೂ ದಾರಿ ತಪ್ಪಿಸುವವರು.

Leave A Reply

Your email address will not be published.