ಅರ್ಧದಲ್ಲಿ ನಿಂತು ಹೋದ ರೋಲರ್ ಕೋಸ್ಟರ್ | ಬಾವಲಿ ಗಳಂತೆ ನೇತಾಡಲ್ಪಟ್ಟ ರೈಡರ್ ಗಳು

ರೋಲರ್ ಕೋಸ್ಟರ್ ಎಂದರೆ ಹಲವರಿಗೆ ಮೋಜಿನಾಟ. ಅದನ್ನು ನೆಚ್ಚಿಕೊಂಡವರು ಬಹಳ ಬಹುಮಂದಿ. ಅಮೆರಿಕದ ಅಮ್ಯೂಸೆಂಟ್ ಪಾರ್ಕ್ ಒಂದರಲ್ಲಿ ರೋಲರ್‌ಕೋಸ್ಟರ್‌ ರೈಡ್‌ನ ಮೋಜಿನಲ್ಲಿದ್ದ ಪ್ರವಾಸಿಗರಿಗೆ ಜೀವಭಯ ಮೂಡಿಸುವ ಘಟನೆಯೊಂದು ಜರುಗಿದೆ. ರೈಡ್ ನಡುವೆಯೇ ಕೆಟ್ಟು ನಿಂತ ರೋಲರ್ ಕೋಸ್ಟರ್‌ನಲ್ಲಿ ಸಿಲುಕಿಕೊಂಡಿದ್ದ 22 ಮಂದಿ ಗಾಳಿಯಲ್ಲಿ 20 ಅಡಿ ಮೇಲೆ ನೇತಾಡುತ್ತಿದ್ದರು.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಈ ಪ್ರವಾಸಿಗರನ್ನು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಒಂದು ಕ್ಷಣ ಎಲ್ಲರ ಜೀವ ಕೈಗೆ ಬಂದಿತ್ತು. ಈ ಘಟನೆಯ ಬಳಿಕ ರೋಲರ್ ಕೋಸ್ಟರ್ನಲ್ಲಿದ್ದ ಹಲವು ಮಂದಿ ಈ ಭಯಾನಕ ಅನುಭವವನ್ನು ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.