Ad Widget

ಕಳೆದ ಬಾರಿ ಎಷ್ಟು ಜನ ಅಟೋ ಚಾಲಕರು ಫಲಾನುಭವಿಗಳಾಗಿದ್ದಾರೆ…..? | ಮೊದಲು ಹಳೆಯ ಪ್ಯಾಕೇಜ್ ಲೆಕ್ಕ ಕೊಡಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ರಾಜ್ಯ ಸರಕಾರ ಹೊರಡಿಸಿದ ಕೋವಿಡ್ ವಿಶೇಷ ಪ್ಯಾಕೇಜ್ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದು ವಿಪಕ್ಷಗಳ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ತಂದ ಪ್ಯಾಕೇಜ್ ಆಗಿದೆ ಎಂದು ವ್ಯಂಗವಾಡಿದ್ದಾರೆ.

ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಮೊದಲು ನೀವು ನಿಮ್ಮ ಹಳೆಯ ಪ್ಯಾಕೇಜ್‌ನ ಲೆಕ್ಕಾಚಾರವನ್ನ ಕೊಡಿ. ಕಳೆದ ಬಾರಿ ನೀವು ಆಟೋ ಡ್ರೈವರ್‌ಗಳಿಗೆ ಹಣ ಕೊಡುತ್ತೇವೆ ಎಂದು ಹೇಳಿದ್ದೀರಿ. ಆದರು ಎಷ್ಟು ಜನಕ್ಕೆ ನಿಮ್ಮ ಪರಿಹಾರ ಧನ ತಲುಪಿದೆ. ಇಂತಹ ಸುಳ್ಳು ಪ್ಯಾಕೇಜ್‌ಗಳನ್ನ ನಾವು ತುಂಬಾ ಕಂಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ಮೇಲೆಯೂ ನಮಗೆ ನಂಬಿಕೆ ಹೋಗಿದೆ. ಹಳೆಯ ಪ್ಯಾಕೇಜ್‌ನ ಪರಿಹಾರ ಧನವನ್ನು ಸರಿಯಾಗಿ ನೀಡಿದರೆ ಮಾತ್ರ ಈ ಪ್ಯಾಕೇಜ್‌ನ್ನು ನಂಬಬಹುದು ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಘೋಷಣೆ ಮಾಡಿದ ಕೊರೊನಾ ವಿಶೇಷ ಪ್ಯಾಕೇಜ್‌ಗೆ ವಿರೋಧ ಪಕ್ಷದ ನಾಯಕರು ಒಬ್ಬರಾದ ಮೇಲೆ ಒಬ್ಬರಂತೆ ಅಸಮಾಧಾನ ಹೊರಹಾಕುತ್ತಿದ್ದಾರೆ .

Leave a Reply

error: Content is protected !!
Scroll to Top
%d bloggers like this: