ಮಂಗಳೂರು ಅನಗತ್ಯವಾಗಿ ನಗರಕ್ಕೆ ಬಂದ ವಾಹನ ಸೀಝ್ | ಐವನ್ ಡಿಸೋಜರ ಮಾತು ಕೇಳಿ ಸೀಝ್ ಆಯ್ತು ಗಾಡಿ
ಮಂಗಳೂರು: ಇಂದಿನಿಂದ ಮೇ 24ರವರೆಗೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಜಾರಿಯಲ್ಲಿದ್ದು, ಅನಗತ್ಯ ಸಂಚಾರಕ್ಕೆ ಅವಕಾಶವಿಲ್ಲ. ಆದರೂ ಸೋಮವಾರ ನಿಗಧಿತ ಅವಧಿ ಮೀರಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಬಂದ 180ಕ್ಕೂ ಅಧಿಕ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದ ಬಳಿಕ ಮಾಜಿ ಎಂಎಲ್ ಸಿ ಐವನ್ ಡಿಸೋಜ ಅವರು ಬೆಳಗ್ಗೆ 10 ಗಂಟೆಯವರೆಗೆ ವಾಹನ ಉಪಯೋಗಿಸಲು ಯಾವುದೇ ಅಡ್ಡಿಯಿಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಸೂಚನೆ ನೀಡಿದ್ದು ಈ ಬಗ್ಗೆ ತಾನು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಮಂತ್ರಿಯವರೊಡನೆ ಮಾತನಾಡಿರುವೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು.
ಇದರಿಂದ ಕೆಲವರು ಅನಗತ್ಯವಾಗಿ ವಾಹನಗಳನ್ನು ಬಳಸಿಕೊಂಡು ನಗರಕ್ಕೆ ದಿನಸಿ ಸಾಮಾಗ್ರಿ ತರಕಾರಿಗಳನ್ನು ಖರೀದಿ ಮಾಡಲು ಬಂದಿದ್ದು, ಇಂತಹ ಅನಗತ್ಯ ಸಂಚಾರದ ವಾಹನಗಳನ್ನು ಸೀಸ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಅವರು ನಿನ್ನೆಯೇ ವೀಡಿಯೋ ಮಾಡಿ ಅನಗತ್ಯವಾಗಿ ಯಾರೂ ಸಂಚಾರ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ನಾಗರಿಕರು ಅವರ ಮನೆಯ ಹತ್ತಿರದಲ್ಲಿನ ಅಂಗಡಿಗಳಲ್ಲಿ ಮಾತ್ರ ನಡೆದುಕೊಂಡೇ ಹೋಗಿ ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಅನಿವಾರ್ಯತೆ ಇದ್ದಲ್ಲಿ ಮಾತ್ರ ವಾಹನಗಳ ಬಳಸುವಂತೆ ಸೂಚನೆ ನೀಡಿದ್ದರು.