ರಾಜ್ಯ ಸರಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ | ಮಾರುಕಟ್ಟೆಗಳು ಸಂತೆಗಳು ಕಂಪ್ಲೀಟ್ ಬಂದ್ !
ಕರ್ನಾಟಕ ಸರ್ಕಾರ ಮತ್ತೊಂದು ಬಾರಿ ಕೊರೋನಾ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ.
ಇದೀಗ ಪರಿಷ್ಕೃತ ಮಾರ್ಗಸೂಚಿ ಬಂದಿದ್ದು ಅದರಲ್ಲಿ ಬದಲಾವಣೆಗಳು ಈ ರೀತಿ ಇದೆ. ಈ ಪರಿಷ್ಕೃತ ಜಾಹೀರಾತು ನಾಳೆಯಿಂದಲೇ ಜಾರಿಗೆ ಬರಲಿದೆ.
- ಹಾಲು ಹಣ್ಣು ತರಕಾರಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾರಾಟ ಮಾಡಲು ಅವಕಾಶ
- ಸಂತೆಗಳು ಮಾರುಕಟ್ಟೆಗಳು ಕಂಪ್ಲೀಟ್ ಬಂದ್
- ದಿನಸಿ ಮನಸ್ಸಿಗೆ ಬೇಕಾದ ಪದಾರ್ಥಗಳ ಅಂಗಡಿಗಳು 6.00 ರಿಂದ 12.30 ಕಾರ್ಯನಿರ್ವಹಿಸಬಹುದು
- ಎಪಿಎಂಸಿ ಯನ್ನೂ ಬೆಳಿಗ್ಗೆ 6 ರಿಂದ 12 ಗಂಟೆಯ ತನಕ ತೆರೆಯಲು ಅನುಮತಿ
- ಮಾಮೂಲಿನಂತೆ ಮಾಸ್ಕ್ ಸಾಮಾಜಿಕ ಅಂತರ ಪಾಲಿಸಿ ವ್ಯಾಪಾರ ಮಾಡಬೇಕು
- ರೂಲ್ಸ್ ಬ್ರೇಕ್ ಮಾಡುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು
- ತಳ್ಳುವ ಗಾಡಿ ತರಕಾರಿ ಹೂವು ಹಣ್ಣು ಇಂಥವುಗಳನ್ನು ತೆಗೆದುಕೊಂಡು ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ ಕಾರ್ಯನಿರ್ವಹಿಸಬಹುದುು
- ಮಾರುಕಟ್ಟೆ ದರದಲ್ಲಿ ಮಾತ್ರ ಮಾರಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹಾಗಿಲ್ಲ
- ಮೀನು ಮಾಂಸ ಮಾರಾಟ ಎಂದಿನಂತೆ 6 ಗಂಟೆಯಿಂದ ಹತ್ತು ಗಂಟೆಯವರೆಗೆ
- ಮದ್ಯ ಮಾರಾಟ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಎಂದಿನಂತೆ.
- ಬಿಬಿಎಂಪಿ, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚನೆ
ಇತ್ತೀಚೆಗೆ ಮಾರುಕಟ್ಟೆಗಳು ಮತ್ತು ಸಂತೆಗಳಲ್ಲಿ ವಿಪರೀತ ನೂಕುನುಗ್ಗಲು ಉಂಟಾಗಿ ಸೋಂಕು ಜಾಸ್ತಿ ಹರಡಬಹುದಾದ ಹಿನ್ನೆಲೆಯಲ್ಲಿ ಇದನ್ನು ತಪ್ಪಿಸಲು ಪರಿಷ್ಕೃತ ಬಿಡುಗಡೆ ಮಾಡಲಾಗಿದೆ.