ರಾಜ್ಯ ಸರಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ | ಮಾರುಕಟ್ಟೆಗಳು ಸಂತೆಗಳು ಕಂಪ್ಲೀಟ್ ಬಂದ್ !

ಕರ್ನಾಟಕ ಸರ್ಕಾರ ಮತ್ತೊಂದು ಬಾರಿ ಕೊರೋನಾ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ.

ಇದೀಗ ಪರಿಷ್ಕೃತ ಮಾರ್ಗಸೂಚಿ ಬಂದಿದ್ದು ಅದರಲ್ಲಿ ಬದಲಾವಣೆಗಳು ಈ ರೀತಿ ಇದೆ. ಈ ಪರಿಷ್ಕೃತ ಜಾಹೀರಾತು ನಾಳೆಯಿಂದಲೇ ಜಾರಿಗೆ ಬರಲಿದೆ.

  1. ಹಾಲು ಹಣ್ಣು ತರಕಾರಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾರಾಟ ಮಾಡಲು ಅವಕಾಶ
  2. ಸಂತೆಗಳು ಮಾರುಕಟ್ಟೆಗಳು ಕಂಪ್ಲೀಟ್ ಬಂದ್
  3. ದಿನಸಿ ಮನಸ್ಸಿಗೆ ಬೇಕಾದ ಪದಾರ್ಥಗಳ ಅಂಗಡಿಗಳು 6.00 ರಿಂದ 12.30 ಕಾರ್ಯನಿರ್ವಹಿಸಬಹುದು
  4. ಎಪಿಎಂಸಿ ಯನ್ನೂ ಬೆಳಿಗ್ಗೆ 6 ರಿಂದ 12 ಗಂಟೆಯ ತನಕ ತೆರೆಯಲು ಅನುಮತಿ
  5. ಮಾಮೂಲಿನಂತೆ ಮಾಸ್ಕ್ ಸಾಮಾಜಿಕ ಅಂತರ ಪಾಲಿಸಿ ವ್ಯಾಪಾರ ಮಾಡಬೇಕು
  6. ರೂಲ್ಸ್ ಬ್ರೇಕ್ ಮಾಡುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು
  7. ತಳ್ಳುವ ಗಾಡಿ ತರಕಾರಿ ಹೂವು ಹಣ್ಣು ಇಂಥವುಗಳನ್ನು ತೆಗೆದುಕೊಂಡು ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ ಕಾರ್ಯನಿರ್ವಹಿಸಬಹುದುು
  8. ಮಾರುಕಟ್ಟೆ ದರದಲ್ಲಿ ಮಾತ್ರ ಮಾರಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹಾಗಿಲ್ಲ
  9. ಮೀನು ಮಾಂಸ ಮಾರಾಟ ಎಂದಿನಂತೆ 6 ಗಂಟೆಯಿಂದ ಹತ್ತು ಗಂಟೆಯವರೆಗೆ
  10. ಮದ್ಯ ಮಾರಾಟ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಎಂದಿನಂತೆ.
  11. ಬಿಬಿಎಂಪಿ, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚನೆ

ಇತ್ತೀಚೆಗೆ ಮಾರುಕಟ್ಟೆಗಳು ಮತ್ತು ಸಂತೆಗಳಲ್ಲಿ ವಿಪರೀತ ನೂಕುನುಗ್ಗಲು ಉಂಟಾಗಿ ಸೋಂಕು ಜಾಸ್ತಿ ಹರಡಬಹುದಾದ ಹಿನ್ನೆಲೆಯಲ್ಲಿ ಇದನ್ನು ತಪ್ಪಿಸಲು ಪರಿಷ್ಕೃತ ಬಿಡುಗಡೆ ಮಾಡಲಾಗಿದೆ.

Leave A Reply

Your email address will not be published.