Ad Widget

ಮಂಗಳೂರು ಜೈಲಿನಲ್ಲಿ ಮತ್ತೆ ಕೈದಿಗಳ ನಡುವೆ ಹೊಡೆದಾಟ | ವಾರದಲ್ಲಿ ಎರಡನೇ ಘಟನೆ

ಮಂಗಳೂರು : ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಮತ್ತೆ ಹೊಡೆದಾಟ ನಡೆದಿದೆ.ಈ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಭಿಷೇಕ್ ಮತ್ತು ಸಮೀರ್ ಎಂಬವರ ಮಧ್ಯೆ ಹೊಡೆದಾಟ ನಡೆದಿದ್ದು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೈಲ್‍ನ ಸಿ ಬ್ಲಾಕ್‍ನ ವಿಚಾರಣಾಧೀನ ಕೈದಿಗಳು ಜೈಲ್‍ನಲ್ಲಿ ತಿರುಗಾಡುತ್ತಿದ್ದಾಗ ಅಭಿಷೇಕ್ ಮತ್ತು ಸಮೀರ್ ಮಧ್ಯೆ ವಾಗ್ವಾದ ನಡೆದಿದೆ. ಇದು ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ತಕ್ಷಣ ಜೈಲು ಸಿಬ್ಬಂದಿ ಇಬ್ಬರನ್ನೂ ಬಿಡಿಸಿದ್ದಾರೆ.

ಕಾರಾಗೃಹದಲ್ಲಿ ಕಳೆದ ರವಿವಾರ ಬೆಳಗ್ಗೆ ವಿಚಾರಣಾಧೀನ ಕೈದಿಗಳ ನಡುವೆ ಹೊಡೆದಾಟ ನಡೆದಿದ್ದು, ಇದರಿಂದ ಇಬ್ಬರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಗಲಾಟೆ ತಡೆಯಲು ಹೋದ ಜೈಲು ಸಿಬ್ಬಂದಿಗೂ ಹಲ್ಲೆ ಮಾಡಲಾಗಿತ್ತು.

Leave a Reply

error: Content is protected !!
Scroll to Top
%d bloggers like this: