ಕರ್ನಾಟಕದಲ್ಲಿ ಕಂಪ್ಲೀಟ್ ಲಾಕ್ ಡೌನ್ ಗೆ ಕ್ಷಣಗಣನೆ | ಮೇ 3 – 4 ರಂದು ಅಂತಿಮ ನಿರ್ಧಾರ ಪ್ರಕಟ ?!
ಕರ್ನಾಟಕದಲ್ಲಿ ಕಳೆದ ಸಲದ ಮೊದಲನೆಯ ಹೇಗೆ ನಡೆಯಿತು ಅದೇ ರೀತಿ ಕಂಪ್ಲೀಟ್ ಮಾಡದೆ ಹೋದರೆ ಈಗ ನಡೆಯುತ್ತಿರುವ ಚೈನ್ ಲಿಂಕನ್ನು ತಡೆಯಲು ಸಾಧ್ಯವಿಲ್ಲ ಎಂದು ತಜ್ಞರು ಈಗಾಗಲೇ ಅಭಿಪ್ರಾಯ ನೀಡಿದ್ದಾರೆ.
ಈಗ ಇರುವ ಲಾಕ್ಡೌನ್ ಅಂದರೆ ಜನತಾ ಕರ್ಫ್ಯೂ ಮಾದರಿಯಿಂದ ಹೆಚ್ಚಿನ ಪ್ರಯೋಜನ ಇಲ್ಲ.
ಕಾರಣ ಕೈಗಾರಿಕೆಗಳು ಗಾರ್ಮೆಂಟ್ ಗಳು ಸರ್ಕಾರಿ ಕಚೇರಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. 6 ಗಂಟೆಯಿಂದ 10 ವರೆಗೆ ಅಂದರೆ ಒಟ್ಟು ನಾಲ್ಕು ಗಂಟೆಗಳ ಕಾಲ ಅಗತ್ಯವಸ್ತುಗಳ ಲಭ್ಯವಿದೆ. ಇವುಗಳನ್ನೆಲ್ಲಾ ಸಾಗಾಣಿಕೆ ಮಾಡಲು ಸಾಗಾಣಿಕಾ ವ್ಯವಸ್ಥೆ ಇದೆ. ಆದದರಿಂದ ಕೋರೋನಾ ಕಮ್ಮಿ ಆಗಲು ಸಾಧ್ಯತೆ ಕಮ್ಮಿ ಎಂದೇ ಹೇಳಲಾಗುತ್ತಿದೆ.
ಈಗಾಗಲೇ ಸರ್ಕಾರದ ಮಟ್ಟದಲ್ಲಿ ಕಂಪ್ಲೀಟ್ ಲಾಕ್ ಡೌನ್ ಗೆ ತಯಾರಿ ಮತ್ತು ಸಿದ್ಧತೆಯ ಮಾತುಕತೆಗಳು ನಡೆಯುತ್ತಿದೆ ಎನ್ನಲಾಗಿದೆ. ರಾಜ್ಯ ಮಟ್ಟದ ಟಿವಿ ಚಾನಲ್ಲೊಂದರಲ್ಲಿ ಈ ಬಗ್ಗೆ ಖಚಿತ ಮಾಹಿತಿ ಎಂಬ ಮಾಹಿತಿ ಪ್ರಸಾರ ಆಗುತ್ತಿದೆ.
ಬಹುಶಃ ಸೋಮವಾರ ಅಥವಾ ಮಂಗಳವಾರ ಈ ಬಗ್ಗೆ ಖಚಿತ ನಿರ್ಧಾರ ಹೊರಬೀಳಲಿದೆ.
ಒಂದು ವೇಳೆ ಕಂಪ್ಲೀಟ್ ಲಾಕ್ ಡೌನ್ ಆದರೆ ಅದು ಹೇಗಿರುತ್ತದೆ?
1) ಎಲ್ಲಾ ಕೈಗಾರಿಕೆಗಳು ಬಂದ್ ಆಗಲಿದೆ
2) ಬೆಳಿಗ್ಗೆ ಈಗಿರುವ 4 ಗಂಟೆಗಳ ದಿನನಿತ್ಯದ ವಸ್ತುಗಳ ಖರೀದಿ ಸಮಯವನ್ನು 2 ಗಂಟೆಗೆ ಇಳಿಸುವುದು.
3) ಅಥವಾ 2 ದಿನಕ್ಕೊಮ್ಮೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡುವುದು
4) ಎಲ್ಲಾ ಸರ್ಕಾರಿ ಕಚೇರಿಗಳು ಬಂದ್
5) ಬ್ಯಾಂಕ್ ಗಳು ಬಾಗಿಲು ಹಾಕಿಕೊಳ್ಳಲಿವೆ
6) ಮದ್ಯದಂಗಡಿ ಮತ್ತು ಬಾರುಗಳು ಕಂಪ್ಲೀಟ್ ಬಂದ್. ಬೆಳಿಗ್ಗೆ ಕೂಡಾ ಓಪನ್ ಇರೋದಿಲ್ಲ.
7) ಹೋಟೆಲ್ ಗಳು ಕೂಡಾ ಇರಲ್ಲ
8) ಸಾರ್ವಜನಿಕ ವಾಹನ, ಆಟೋ, ಕ್ಯಾಬ್ ಸ್ಥಬ್ದ
9) ವಿಮಾನ, ರೈಲು ಪೂರ್ತಿ ಸ್ಟಾಪ್
ಸರಕಾರವು ಸರಿಯಾದ ಸಮಯಕ್ಕೆ ನಿರ್ಧಾರ ತೆಗೆದುಕೊಂಡಿದ್ದಾರೆ ಮತ್ತೊಂದು ಟೋಟಲ್ ಆಗುವುದನ್ನು ಮತ್ತು ಆಗಬಹುದಾದ ಸಾಧ್ಯತೆಯನ್ನು ತಪ್ಪಿಸಬಹುದಿತ್ತು. ಬೇರೆ ರಾಜ್ಯಕ್ಕೆ ಕರ್ನಾಟಕವನ್ನು ಹೋಲಿಸಬೇಡಿ, ನಾವು ಅಂತಹ ದುಸ್ಥಿತಿಯಲ್ಲಿ ಇಲ್ಲ, ಮುಂತಾದ ಬೇಜವಾಬ್ದಾರಿ ಹೇಳಿಕೆಗಳಿಂದ ರಾಜ್ಯ ಸರಕಾರ ಕಾಲ ಕಳೆದಿತ್ತು. ನಂತರ ವೀಕೆಂಡ್ ಕರ್ಫ್ಯೂ ಅನ್ನುವ ಕೆಲಸಕ್ಕೆ ಬಾರದ ನಾಟಕ ಶುರು ಮಾಡಿತ್ತು. ಅದು ಕೂಡ ಎಲ್ಲೋ ವರ್ಕೌಟ್ ಆಗುತ್ತಿಲ್ಲ ಅನ್ನುವಾಗ ಈಗ ಜನತಾ ಕರ್ಫೂ ತಂದಿದೆ ಸರಕಾರ. ಆದರೆ ಬಹುಪಾಲು ಕೆಲಸ ಕಾರ್ಯಗಳು ಎಂದಿನಂತೆ ನಡೆಯುತ್ತಿವೆ. ಈ ಜನತಾ ಕರ್ಫ್ಯೂ ಮಾದರಿಯ ಲಾಕ್ಡೌನ್ ಕೂಡಾ ಕೋರೋನಾ ಚೈನ್ ಲಿಂಕನ್ನು ತಡೆಯಲಾರದು ಎಂಬ ಅಭಿಪ್ರಾಯ ಮೂಡದ ಹಿನ್ನೆಲೆಯಲ್ಲಿ ಕಂಪ್ಲೀಟ್ ಲಾಕ್ ಡೌನ್ ಗೆ ಪ್ಲಾನ್ ಮಾಡುತ್ತಿರುವುದು ಎನ್ನಲಾಗಿದೆ.