4000 ಹುಡುಗಿಯರ ಜತೆ ಸೆಕ್ಸ್ ಮಾಡಿದ್ದ 77 ರ ಈ ಆಗರ್ಭ ಶ್ರೀಮಂತನ ದುರಂತ ಸಾವು ಆ ಸುಂದರಿಯಿಂದ ಬಂದಿತ್ತು !!

ಟೊಕಿಯೋ: ಮದುವೆಯಾದ ಒಂದೇ ತಿಂಗಳಲ್ಲಿ 77 ವರ್ಷದ ವೃದ್ಧ ಪತಿಯನ್ನು ಕೊಲೆ ಮಾಡಿರುವ ಸಂಶಯ ಹಿನ್ನೆಲೆಯಲ್ಲಿ 25 ವರ್ಷದ ಮಹಿಳೆಯನ್ನು ಬಂಧಿಸಿರುವ ಘಟನೆ ಜಪಾನ್‌ನಲ್ಲಿ ನಡೆದಿದೆ.

ತನ್ನನ್ನು ತಾನು “ಡಾನ್ ಜಾನ್” (ಒಬ್ಬ ಮಹಾನ್ ಪ್ರೇಮಿ ಅಥವಾ ಮಹಿಳಾ ಮೋಹಿ) ಎಂದು ಸ್ವಯಂ ಆಗಿ ಘೋಷಿಸಿಕೊಂಡ ಜಪಾನಿನ ಈ ಶ್ರೀಮಂತ ವ್ಯಕ್ತಿಯ ದುರಂತ ಸಾವಿನ ಪ್ರಕರಣವಿದು. ಆತನ ನಿಜ ಹೆಸರು ಕೊಸುಕೆ ನಝಾಕಿ. ಈ 77 ವರ್ಷ ವಯಸ್ಸಿನ ವ್ಯಕ್ತಿಯೇ ಈಗ ಕೊಲೆಯಾದ ವ್ಯಕ್ತಿ.

ಯಾರು ಈ ಡಾನ್ ಜಾನ್ ? ಏನವನ ಸ್ಪೆಷಾಲಿಟಿ ?!

ಒಂದು ಕಾಲದಲ್ಲಿ ಜಪಾನಿನಲ್ಲಿ ಗುಜರಿ ಸಾಮಾನ್ಯ ಮಾರುತ್ತಿದ್ದ, ಅಂಗಡಿಗಳಲ್ಲಿ ಮತ್ತು ಹೊಟೇಲ್ಗಳಿಗೆ ಕಾಂಡೊಮ್ ಅನ್ನು ಮಾರುತ್ತಿದ್ದ ಈತ ಹಂತ ಹಂತವಾಗಿ ಬದುಕಿನಲ್ಲಿ ಸ್ಥಿತಿವಂತರಾಗಿದ್ದ. ಕೊನೆಗೆ ಒಂದು ದಿನ ಜಪಾನಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ದುಡ್ಡು ಮಾಡಲೇಬೇಕೆಂದು ಹಟಕ್ಕೆ ಬಿದ್ದು ಬಿಲಿಯನೇರ್ ಆಗಿದ್ದ. ಅಂದ ಹಾಗೆ ನಝಾಕಿ ರಿಯಲ್ ಎಸ್ಟೇಟ್ ಉದ್ಯಮ, ಮದ್ಯ ಮಾರಾಟ ಕಂಪನಿ ನಡೆಸುತ್ತಿದ್ದನು. ಅಲ್ಲದೆ, ಹಣ ಸಾಲ ನೀಡುವ ಕಂಪನಿ ಸಹ ಹೊಂದಿದ್ದನು.

ಆತನೇ ಹೇಳಿಕೊಂಡಂತೆ ತನ್ನ ಆತ್ಮಚರಿತ್ರೆ (ಡಾನ್ ಜಾನ್ ಆಫ್ ಕಿಶುನಲ್ಲಿ ನಝಾಕಿ ಹೇಳಿಕೊಂಡಂತೆ ಆತನಿಗೆ ಒಳ್ಳೆಯ ಜಾಗ, ಐಷಾರಾಮಿ ಮನೆ ಮತ್ತು ಬೆಲೆಬಾಳುವ ಕಾರು ಮುಂತಾದ ಯಾವುದನ್ನು ಕೊಳ್ಳಬೇಕೆಂಬ ಆಸೆ ಇರಲಿಲ್ಲ. ಅದು ಯಾವುದು ಆತನನ್ನು ಆಕರ್ಷಿಸುತ್ತಿರಲಿಲ್ಲ. ಇಷ್ಟಕ್ಕೂ ಆತ ಇಷ್ಟೆಲ್ಲಾ ಸಂಪಾದಿಸಿದ್ದು ಇವ್ಯಾವುದನ್ನು ಕೂಡಾ ಕೊಳ್ಳಲಿಕ್ಕಲ್ಲ. ಹಾಗಾದರೆ ಮತ್ತ್ಯಾವ ಕಾರಣಕ್ಕಾಗಿ ಸಂಪತ್ತನ್ನು ಗಳಿಸಿದ ಎಂದು ಆತನನ್ನು ಕೇಳಿದರೆ ಆತ ಹೇಳುವ ಉತ್ತರ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ.

ಅದು ಸೆಕ್ಸ್. ಅನಿಯಮಿತ ಸೆಕ್ಸ್. ಸುಂದರ ಸ್ತ್ರೀಯರ ಜತೆಗಿನ ಸೆಕ್ಸ್……..ಆತನ ಜಗತ್ತು ಕೇವಲ ಸೆಕ್ಸ್ ನ ಸುತ್ತ ಮಾತ್ರ ಸುತ್ತುತ್ತಿತ್ತು. ಸ್ತ್ರೀ ಸೌಖ್ಯ ಬಿಟ್ಟು ಆತನಿಗೆ ಬೇರೆ ಏನೂ ರುಚಿಸುತ್ತಿರಲಿಲ್ಲ. ಅದೊಂದೇ ಆತನ ಜೀವನದ ಪರಮ ಧ್ಯೇಯವಾಗಿತ್ತು!

ಸುಂದರ ಮಹಿಳೆಯರ ಜತೆ ಸೆಕ್ಸ್ ಮಾಡುವ ತನ್ನ ಅಗಾಧ ಲೈಂಗಿಕ ಬಯಕೆಗಾಗಿ ತನ್ನ ಜೀವನದಲ್ಲಿ ಸಂಪಾದಿಸಿದ ಮಿಲಿಯನ್‌ಗಟ್ಟ ಹಣವನ್ನು ವ್ಯಯಿಸಿದ್ದ. ಆತನೇ ತನ್ನ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಂತೆ ಆತ ತನ್ನ ಪರಮಧ್ಯೇಯ ಉದ್ದೇಶಕ್ಕಾಗಿ ಮೂರು ಬಿಲಿಯನ್ ಜಪಾನಿ ಯೆನ್ ಅಂದರೆ ಅಮೆರಿಕಾದ ಲೆಕ್ಕದಲ್ಲಿ 27.5 ಮಿಲಿಯನ್ ಡಾಲರ್ ಅನ್ನು ತನ್ನ ಸ್ತ್ರೀ ಲೋಲುಪತೆಗೆ ವ್ಯಯ ಮಾಡಿದ್ದ. ಅಷ್ಟೇ ಅಲ್ಲದೆ ಸ್ತ್ರೀಯರನ್ನು ಪಟಾಯಿಸುವುದು ನಲ್ಲಿ ಆತ ಸಿದ್ಧ ಹಸ್ತನಾಗಿದ್ದ. ಆತನ ಜೀವಮಾನದಲ್ಲಿ ಆತ ಒಟ್ಟು 4000 ಹುಡುಗಿಯರ ಜತೆ ಸೆಕ್ಸ್ ಮಾಡಿದ್ದ ಎಂದರೆ ಆತ ಅದೆಷ್ಟು ದೊಡ್ಡ ಸ್ತ್ರೀ ಲಂಪಟನಾಗಿದ್ದಿರಬಹುದು ಎಂದು ನೀವೇ ಊಹಿಸಿಕೊಳ್ಳಿ.

ಇಂತಹ ನಜಾಕಿ 2018 ರಲ್ಲಿ ಮತ್ತೆ ಮದುವೆಯಾಗಿದ್ದ : ಸುಡೋ ಎಂಬ 25 ರ ತರುಣಿಯನ್ನು. ಅದೂ ತನ್ನ 77 ನೆಯ ವಯಸ್ಸಿನಲ್ಲಿ. ನನಗೆ ಸುಂದರವಾದ ಮಹಿಳೆಯರೊಂದಿಗೆ ಅಗಾಧವಾದ ಲೈಂಗಿಕ ಬಯಕೆ ಇದೆ ಎಂದು ಬರೆದುಕೊಂಡಿದ್ದ. ಅಲ್ಲದೆ, ಕಾಲೇಜು ವಿದ್ಯಾರ್ಥಿಗಳು ಮತ್ತು ತನ್ನ ಸಿಬ್ಬಂದಿಯನ್ನು ಯಾವ ರೀತಿ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಎಂಬುದನ್ನು ಸಹ ನಝಾಕಿ ಆತ್ಮಚರಿತ್ರೆಯಲ್ಲಿ ಆತ ವಿವರಿಸಿದ್ದಾನೆ.

ನಝಾಕಿ ಸಾವಿಗೂ ಎಂಟು ತಿಂಗಳ ಮೊದಲು ಬರೆದಿದ್ದ ಅಂಕಣವೊಂದರಲ್ಲಿ ಆತನಿಗಿಂತ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಡೋ ಆತನನ್ನು ಮದುವೆಯಾಗುವುದೇ ಕೇವಲ ಹಣಕ್ಕಾಗಿ ಮಾತ್ರ, ಜಾಗೃತರಾಗಿರಿ ಎಂದು ಆತನನ್ನು ಹಲವರು ಎಚ್ಚರಿಸಿದ್ದರು. ಆದರೆ ನಝಾಕಿ ಅದೆಲ್ಲಾ ವರದಿಗಳನ್ನು ತಳ್ಳಿಹಾಕಿದ್ದರು.

ಆದರೆ ಈಗ ಎಲ್ಲರ ಊಹೆ ನಿಜವಾಗಿದೆ ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು ಸುಡೋ ಆತನನ್ನು ಕೊಂದು ಹಾಕಿದ್ದಳು. ಸುಡೋ ಡ್ರಗ್ಸ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಕೂಲ್ ಡ್ರಿಂಕ್ಸ್ ಜೊತೆ ಮಿಕ್ಸ್ ಮಾಡಿ ನೀಡಿ ಆತನಿಗೆ ನೀಡಿದ್ದಳು. ಆ ಮೂಲಕ ಅವರು ಮದುವೆಯಾದ ಒಂದು ತಿಂಗಳೊಳಗೆ ಮುದುಕನನ್ನು ಮುಗಿಸಿದ್ದಳ

ಪತಿಯ ಸಾವಿಗೂ ಮುನ್ನ ಆರೋಪಿ ಸುಡೋ ಆನ್‌ಲೈನ್‌ನಲ್ಲಿ ಡ್ರಗ್ಸ್ ಬಗ್ಗೆ ಹುಡುಕಾಟ ನನಡೆಸಿರುವುದು ಬಹಿರಂಗವಾಗುವುದರೊಂದಿಗೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆತ ತನ್ನ ಅರ್ಧ ಆಸ್ತಿಯನ್ನು ತನ್ನೂರಿನ ಅಭಿವೃದ್ಧಿಗಾಗಿ ವಿಲ್ ಬರೆದಿದ್ದ. ಉಳಿದ ಆಸ್ತಿ ಸಹಜವಾಗಿ ಆತನ ಪತ್ನಿಗೆ ಸೇರುತ್ತದೆ. ಒಂದು ವೇಳೆ ಈ ಮುದುಕ ಆದಷ್ಟು ಬೇಗ ಮುಗಿದು ಹೋದರೆ ಎಲ್ಲಾ ಸಂಪತ್ತನ್ನು ಅನುಭವಿಸಬಹುದು ಎಂದುಕೊಂಡ ಸುಡೋ ಆತನಿಗೆ ಡ್ರಗ್ಸ್ ನೀಡಿ ಕೊಂದುಹಾಕಿದ್ದಾಳೆ.

ಕೊಂದ ತಪ್ಪಿಗೆ ಆಕೆಯನ್ನು ಈಗ , ಕೊಲೆ ನಡೆದ 3 ವರ್ಷಗಳ ನಂತರ ಜೈಲಿಗೆ ಹಾಕಿದ್ದಾರೆ.

Leave A Reply

Your email address will not be published.