ರಾಜ್ಯದಲ್ಲಿ ಕೊರೋನಾ ರಣಕೇಕೆ | ಇಂದು ಒಂದೇ ದಿನ ಬರೋಬ್ಬರಿ 50 ಸಾವಿರ ಸನಿಹ ಪ್ರಕರಣ ದಾಖಲು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ನಿರೀಕ್ಷೆಗೂ ಮೀರಿ ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 48296 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ ಎಂದು ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳಲ್ಲಿ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 382690ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ರಾಜ್ಯದಲ್ಲಿ ಕೋವಿಡ್‍ಗೆ ಬಲಿಯಾದವರ ಸಂಖ್ಯೆ 217 ಎಂದು ವರದಿಗಳು ತಿಳಿಸಿವೆ. 14884 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಜಿಲ್ಲಾವಾರು ಕೊರೋನಾ ಮಾಹಿತಿ :

ಬಾಗಲಕೋಟೆ-234, ಬಳ್ಳಾರಿ -1282, ಬೆಳಗಾವಿ-514, ಬೆಂಗಳೂರು ಗ್ರಾಮಾಂತರ-818, ಬೆಂಗಳೂರು ನಗರ-26756, ಬೀದರ್-447, ಚಾಮರಾಜನಗರ-474, ಚಿಕ್ಕಬಳ್ಲಾಪುರ-579 ಚಿಕ್ಕಮಗಳೂರು-542, ಚಿತ್ರದುರ್ಗ-144, ದಕ್ಷಿಣ ಕನ್ನಡ-1205, ದಾವಣಗೆರೆ-438, ಧಾರವಾಡ-703,ಗದಗ-122, ಹಾಸನ-709, ಹಾವೇರಿ-90, ಕಲಬುರಗಿ-1256, ಕೊಡಗು-609, ಕೋಲಾರ-845, ಕೊಪ್ಪಳ-256, ಮಂಡ್ಯ-1348, ಮೈಸೂರು-3500, ರಾಯಚೂರು-733, ರಾಮನಗರ-286,ಶಿವಮೊಗ್ಗ-673, ತುಮಕೂರು-1801, ಉಡುಪಿ-660, ಉತ್ತರ ಕನ್ನಡ-426, ವಿಜಯಪುರ-521, ಯಾದಗಿರಿ-325.

1 Comment
  1. RANJITH THIRUVALE says

    ಪ್ರತಿ ನ್ಯೂಸ್ ನ ಮೇಲೆ ದಿನಾಂಕವನ್ನು ಹಾಕಿ
    ನಿಮ್ಮ ಹಳೆ ನ್ಯೂಸ್ ಗಳನ್ನು ಡಿಲೀಟ್ ಮಾಡಿ ,2020ರ ಕೋರೋಣ ನ್ಯೂಸ್ ಇವಾಗಲು ಇದೆ ಅದನ್ನು ಕೆಲವರು ಫಾರ್ವರ್ಡ್ ಮಾಡಿ ಭಯ ಹುಟ್ಟಿಸುತ್ತಿದ್ದಾರೆ.

Leave A Reply

Your email address will not be published.