ವ್ಯಾಪಕ ಪ್ರಶಂಸೆಗೆ ಕಾರಣವಾದ ಬೆಳ್ತಂಗಡಿ ಪೊಲೀಸರ ಅಪ್ರೋಚ್ | ನಾಳೆ ಇರೋದು ರೆಗ್ಯುಲರ್ ಲಾಕ್ ಡೌನ್ / ವೀಕೆಂಡ್ ಕರ್ಫ್ಯೂ ? Full details…!

ನಾಳೆ ಇರುವುದು ರೆಗ್ಯುಲರ್ ಲಾಕ್ಡೌನ್ ಅಥವಾ ವೀಕೆಂಡ್ ಎನ್ನುವ ಬಗ್ಗೆ ಇವತ್ತಿಗೂ ಹಲವರಿಗೆ ಕನ್ಫ್ಯೂಷನ್ ಇದೆ. ಎಲ್ಲ ದಿನ ಮಾಮೂಲಿ ದಿನಗಳು ಆಗಿರುವಾಗ, ವೀಕೆಂಡ್ ಕರ್ಫ್ಯೂ ಅನ್ನುವುದಕ್ಕೆ ಒಂದು ವಿಶೇಷ ಅರ್ಥವಿದೆ.

ಈಗ ಪ್ರತಿದಿನವೂ ಒಂದು ತರಹದ ಕಂಟ್ರೋಲ್ಡ್ ಕರ್ಫ್ಯೂ. ಆದುದರಿಂದ ಹೊಸದಾಗಿ ವೀಕೆಂಡ್ ಕರ್ಫ್ಯೂ ಅನ್ನುವುದಕ್ಕೆ ಯಾವುದೇ ಅರ್ಥವಿಲ್ಲ.
ಸಿಂಪಲ್ಲಾಗಿ ಹೇಳಬೇಕೆಂದರೆ ನಾಳೆೆ ಎಂದಿನ ರೀತಿಯ ಎಂದಿನ ರೀತಿಯ ಲಾಕ್ಡೌನ್ ಜಾರಿಯಲ್ಲಿ ಇರುತ್ತದೆ.

ಈಗಾಗಲೇ, ಇವತ್ತು ರಾತ್ರಿ 9:00 ಗಂಟೆ ಕಳೆದ ಕಾರಣದಿಂದ ಕರ್ಫ್ಯೂ ಜಾರಿಗೆ ಬಂದಾಗಿದೆ. ನಾಳೆ ಬೆಳಿಗ್ಗೆ 6ಗಂಟೆಗೆ ಅಗತ್ಯ ವಸ್ತುಗಳ ಖರೀದಿಗಾಗಿ ಕರ್ಫ್ಯೂ ಸಡಿಲಿಕೆ ಆಗಲಿದ್ದು 10 ಗಂಟೆಯೊಳಗೆ ನಮ್ಮ ಎಲ್ಲಾ ಖರೀದಿಗಳನ್ನು ಮುಗಿಸಿಕೊಂಡು ಮನೆ ಸೇರಬೇಕಾದ ಅನಿವಾರ್ಯತೆ ಇದೆ.
ಮತ್ತೆ ಭಾನುವಾರ ಬೆಳಿಗ್ಗೆ 6 ಗಂಟೆಗೆ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ತೆರಯಲಿದ್ದು, ಮತ್ತೆ ಬೆಳಿಗ್ಗೆ 10 ಗಂಟೆಗೆ ಮತ್ತೆ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳಲಿದೆ.

ಮನೆಗೆ ಬೇಕಾದ ಅಡುಗೆ ಸಾಮಾನು, ದಿನಸಿ,ತರಕಾರಿ, ಹಣ್ಣು,ಮೀನು, ಮಾಂಸದ ಅಂಗಡಿಗಳು 6.00 ರಿಂದ 10.00 ಗಂಟೆಯವರೆಗೆ ದೊರೆಯಲಿವೆ.

ನಂದಿನಿ ಹಾಲಿನ ಉತ್ಪನ್ನಗಳು ಬೆಳಿಗ್ಗೆ 6 ಗಂಟೆಯಿಂದ ಸಂಜೆ 8:00 ಗಂಟೆಯವರೆಗೆ ದೊರೆಯಲಿವೆ.

ಕೋವಿಡ್ ಅಪ್ಡೇಟ್

ಬೆಳ್ತಂಗಡಿ ತಾಲೂಕಿನಲ್ಲಿ ಇಂದು 162 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿ, ತಾಲೂಕಿನ ಜನರಲ್ಲಿ ಆತಂಕ ಸೃಷ್ಟಿಮಾಡಿದೆ.

ಇಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 618 ಆಗಿದ್ದು 23 ಮಂದಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಪುತ್ತೂರು ಕಡಬ ಸೇರಿ ಇವತ್ತು ಒಟ್ಟು ಪಾಸಿಟಿವ್ ಸಂಖ್ಯೆ 82 ಜನ ಪಾಸಿಟಿವ್ ಆಗಿದ್ದಾರೆ. ಪುತ್ತೂರು ಕಡಬ ಸೇರಿ ಒಟ್ಟು 190 ಜನ ಆಕ್ಟಿವ್ ರೋಗಿಗಳಿದ್ದಾರೆ.

ಬೆಳ್ತಂಗಡಿ ಪೊಲೀಸರ ಸ್ಪೆಷಲ್ ಅಫ್ರೋಜ್ !!

ಕೊರೋನಾ ಸಂಧರ್ಭದಲ್ಲಿ ಜನಸ್ನೇಹಿಯಾಗಿ ಕರ್ತವ್ಯ
ನಿರ್ವಹಿಸುತ್ತಿರುವ ಸಂದೇಶ್ ಪಿಜಿ ಹಾಗೂ ಇವರ ತಂಡಕ್ಕೆ ಸ್ಥಳೀಯರ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜನತಾ ಕರ್ಪ್ಯೂನ ನೆಪದಲ್ಲಿ ರಾಜ್ಯಾದ್ಯಂತ ಪೊಲೀಸರು ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಲಾಟಿ ಮೂಲಕ
ಬೆದರಿಸುತ್ತಿರುವ ಸಂಧರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಪೊಲೀಸ್ ಠಾಣೆ ಸಿಬ್ಬಂದಿಗಳು ಮಾತ್ರ ಸಾರ್ವಜನಿಕರೊಂದಿಗೆ, ವ್ಯಾಪಾರಸ್ಥರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಅವರಿಗೆ ಪ್ರೀತಿಯಿಂದ ತಿಳಿಹೇಳಿ ಅಂಗಡಿ ಮುಗ್ಗಟ್ಟುಗಳನ್ನು ಸಮಯಕ್ಕೆ ಸರಿಯಾಗಿ ಬಂದ ಮಾಡುವಂತೆ ವಿನಂತಿಸುತ್ತಿದ್ದಾರೆ.

ಇವರ ವಿನಂತಿಯನ್ನು ಅಷ್ಟೇ ಗೌರವದೊಂದಿಗೆ ಒಪ್ಪಿಕೊಳ್ಳುತ್ತಿರುವ ಅಂಗಡಿ ಮಾಲಕರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಸರಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ತಾಲೂಕಿನ ಪಿಎಸ್ಐ‌‌ ಮತ್ತು ಸಿಬ್ಬಂದಿ ವರ್ಗಕ್ಕೆ ಬಹಳ ಮೆಚ್ಚುಗೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ಜನರು ದಿನಬಳಕೆಯ ಅಗತ್ಯ ವಸ್ತುಗಳಿಗೆ ಹೋಗುವ ಸಂದರ್ಭದಲ್ಲಿ ಪೊಲೀಸರಿಗೆ ಸರ್ಕಲ್ ಇನ್ಸ್ಪೆಕ್ಟರ್ ಅವರು ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಆವಾಜ ಹಾಕಬೇಡಿ, ಅವಾಚ್ಯ ಶಬ್ದಗಳಿಂದ ನಿಂದಿಸಬೇಡಿ, ಅನಾವಶ್ಯಕವಾಗಿ ಹೊಡೆಯಬೇಡಿ ಎಂದು ಖಡಕ್ಕಾಗಿ ಹೇಳಿ ಕಳುಹಿಸುತ್ತಾರೆ. ಅವರು ಹೇಳಿದಂತೆ ಪೊಲೀಸರು ಸಹ ಸಾರ್ವಜನಿಕರೊಂದಿಗೆ ಸ್ನೇಹಿತರಂತೆ ನಡೆದುಕೊಳ್ಳುತ್ತಿರುವ ದೃಶ್ಯಗಳು ನಗರದಲ್ಲಿ ಅಲ್ಲಲ್ಲಿ ಕಂಡುಬರುತ್ತಿವೆ.

ತಾಲೂಕಿನಲ್ಲಿ ಅನವಶ್ಯಕವಾಗಿ ತಿರುಗಾಟ ಹಾಗೂ ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಕಾನೂನು ಕೈಗೆತ್ತಿಕೊಂಡವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಜನತಾ ಕರ್ಫ್ಯೂ ಸಮಯದಲ್ಲಿ ಅನಾವಶ್ಯಕ ವಾಹನದಲ್ಲಿ ಓಡಾಟ ಕಂಡು ಬಂದಲ್ಲಿ ಅಂತಹವರ ವಾಹನವನ್ನುು ವಿಪತ್ತು ನಿರ್ವಹಣ ಕಾಯ್ದೆಯ ಅಡಿಯಲ್ಲಿ ಕೇಸು ದಾಖಲಿಸಿ ಮುಟ್ಟುಗೋಲು ಹಾಕಲಾಗುವುದು ಎಂದು ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಅವರು ತಿಳಿಸಿರುತ್ತಾರೆ.

Leave A Reply

Your email address will not be published.