ದ.ಕ. ಜಿಲ್ಲೆಯಲ್ಲಿ ಮತ್ತೆ ಆವರಿಸಿದ ಕೊರೋನಾ ಕಾರ್ಮೋಡ | ಬುಧವಾರ ಅತೀ ಹೆಚ್ಚು ಸೋಂಕು ಪತ್ತೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 664 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗೆಯೇ 256 ಮಂದಿ ಸೋಂಕಿತರು ಬುಧವಾರ ಗುಣಮುಖರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ವರದಿಯಾದ 664 ಕೊರೊನಾ ವೈರಸ್ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 42,729 ಕ್ಕೆ ಏರಿಕೆಯಾಗಿದೆ.
ಈ ಪೈಕಿ 4694 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ.ಒಟ್ಟು 7,29,742 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ 687013 ಮಾದರಿಗಳು ನೆಗೆಟಿವ್ ಆಗಿದೆ. ಬುಧವಾರ 256 ಜನರು ಗುಣಮುಖರಾಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 37,280ಕ್ಕೆ ಏರಿದೆ. ಇನ್ನು ಬುಧವಾರ ನಾಲ್ವರು ಸೋಂಕಿತರು ಸಾವನ್ನಪ್ಪಿದ್ದು, ಈವರೆಗೆ ಒಟ್ಟು 755 ಸಾವುಗಳು ಸಂಭವಿಸಿವೆ.
ರಾಜ್ಯದಲ್ಲಿ ಕೊರೋನಾ ವಿವರ:
ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 39047 ಪ್ರಕರಣಗಳು ಪತ್ತೆಯಾಗಿವೆ.
ಏಪ್ರಿಲ್,28 ಬುಧವಾರ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳನ್ವಯ ರಾಜ್ಯದಲ್ಲಿ 39047 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ ಕೋವಿಡ್ನಿಂದ 229 ಜನರು ಸಾವನ್ನಪ್ಪಿದ್ದಾರೆ.