ಲಾಕ್ ಡೌನ್ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆಗೆ ಹೋಗುವವರ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುವುದು ಅಗತ್ಯ:ಶಾಸಕ ಸಂಜೀವ ಮಠಂದೂರು
ವಿಟ್ಲ: ಲಾಕ್ ಡೌನ್ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆಗೆ ಹೋಗುವವರ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಈ ಸಂದರ್ಭ ಜನ ದಟ್ಟಣೆಯಾಗದಂತೆ ನೋಡಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಕಂದಾಯ ಇಲಾಖೆ ಚರ್ಚಿಸಿ ಕ್ರಮ ವಹಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಲಾಕ್ ಡೌನ್ ಸಂದರ್ಭ ಜನರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು ಎಂದು ಹೇಳಿದರು. ತಾಲೂಕು ಆರೋಗ್ಯಾಧಿಕಾರಿ ದೀಪಾ ಪ್ರಭು ಮಾತನಾಡಿ ತಾಲೂಕಿನಲ್ಲಿ ಕೊರೊನಾ ತೀವ್ರತೆ ಹೆಚ್ಚಾಗಿದೆ.ಕಳೆದ ಬಾರಿ ಸೋಂಕು ಹೆಚ್ಚಾಗಿ ವಯಸ್ಕರಲ್ಲಿ ಪತ್ತೆಯಾಗುತ್ತಿತ್ತು. ಈ ಬಾರಿಯ ಎರಡನೇ ಅಲೆ ಯುವಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಯುವಕರು ನಿರ್ಲಕ್ಷ್ಯ ವಹಿಸಬಾರದು. ಇದೊಂದು ರೂಪಾಂತರಿಕಾ ವೈರಸ್ ಆಗಿದ್ದು, ಗಂಭೀರ ಸ್ವರೂಪ ಹೊಂದಿದೆ.
ವಿಟ್ಲ ವ್ಯಾಪ್ತಿಯಲ್ಲಿ 28 ಸಕ್ರಿಯ ಪ್ರಕರಣಗಳಿವೆ. 34 ಮಂದಿ ಹೋಂ ಐಸೋಲೇಸನ್ ನಲ್ಲಿದ್ದು, ಇಬ್ಬರು ನಿಧನ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು. ವಿಟ್ಲ ಪೇಟೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕು ಹರಡುತ್ತಿದೆ ಈ ಬಗ್ಗೆ ಜಾಗೃತೆ ಅಗತ್ಯ ಎಂದರು.