Ad Widget

ತನ್ನ ಕೊರೋನಾ ಪೀಡಿತ ಪತಿಯ ಬಾಯಿಗೆ ಬಾಯಿಟ್ಟು ಉಸಿರು ನೀಡಲು ಪ್ರಯತ್ನಿಸಿದ ಮಹಾತಾಯಿ ! | ಆಕೆಯ ಪ್ರಯತ್ನಕ್ಕೆ ಫಲ ಸಿಕ್ಕಿತೇ….?!

ಇದನ್ನು ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ಅಷ್ಟೇ ಅಲ್ಲ, ವಿಶ್ವದಾದ್ಯಂತ ತನ್ನ ಕಬಂಧ ಹಸ್ತವನ್ನು ಚಾಚುತ್ತಾ ಮುನ್ನಡೆಯುತ್ತಿದ್ದರೆ, ಮನುಷ್ಯ ಕೇವಲ ತನ್ನ ದೃಢ ಸಂಕಲ್ಪದಿಂದ ಸಾವಿಗೂ ಹೆದರದೆ ರೋಗವನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದಾನೆ. ಅಂತಹ ಸಂದರ್ಭಗಳಲ್ಲಿ ಕೆಲವು ವಿಶೇಷ ಸಂಗತಿಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಇಂತಹ ಒಂದು ವಿಶೇಷ ಘಟನೆಯ ದೃಶ್ಯವು ಇದೀಗ ವೈರಲ್ ಆಗಿದ್ದು, ಅದು ಪತ್ನಿಯ ಕುಟುಂಬ ಪ್ರೀತಿಯನ್ನು ಎತ್ತಿ ಹಿಡಿಯುತ್ತಿದೆ.

ಈ ಗೃಹಿಣಿಯು ತನ್ನ ಪ್ರೀತಿಯ ಗಂಡನನ್ನು ಉಳಿಸಿಕೊಳ್ಳಲು ಆತ ಕೋರೋನಾ ಪೀಡಿತನಾಗಿದ್ದರೂ ಕೂಡ ಆತನಿಗೆ ತನ್ನ ಬಾಯಿಯ ಮೂಲಕ ಉಸಿರು ನೀಡಲು ಪ್ರಯತ್ನಿಸಿದ್ದಾಳೆ. ಆ ಮೂಲಕ ತನ್ನ ಪತಿಯನ್ನು ಉಳಿಸಿಕೊಳ್ಳಲು ತನ್ನ ಕೊನೆಯ ಪ್ರಯತ್ನಪಟ್ಟಿದ್ದಾಳೆ.

ಆಕೆಯ ಕೊನೆಯ ಈ ಪ್ರಯತ್ನದ ಫೋಟೋಗಳು ಇದೀಗ ಎಲ್ಲೆಡೆ ಹರಿದಾಡುತ್ತಿದೆ ಎಂಥವರ ಮನವನ್ನು ಕಲಕುವಂತಿದೆ.

Ad Widget Ad Widget Ad Widget

ಮಹಿಳೆಯೊಬ್ಬರು ಆಟೋದಲ್ಲಿ ಕುಳಿತುಕೊಂಡು ತನ್ನ ಪತ್ನಿಯನ್ನು ಕೊರೊನಾದಿಂದ ಬಚಾವ್ ಮಾಡಲು ಅವಿರತ ಪ್ರಯತ್ನ ಮಾಡುತ್ತಿರುವುದನ್ನು ಅಲ್ಲಿ ಕಾಣಬಹುದಾಗಿದೆ. ತೀವ್ರ  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ತನ್ನ ಪತಿ ರವಿ ಸಿಂಘಾಲ್ ಆಸ್ಪತ್ರೆಯ ದಾರಿಯಲ್ಲಿ ತೀವ್ರ ಎದುಸಿರು ಬಿಡುತ್ತಿದ್ದಾನೆ. ಇನ್ನೇನು ಉಸಿರಾಟ ಕಷ್ಟವಾಗುತ್ತದೆ, ಆಸ್ಪತ್ರೆಯ ಸೌಲಭ್ಯ ಇನ್ನೂ ದೂರದಲ್ಲಿದೆ ಎಂದು ತಿಳಿದಾಗ ಮಹಿಳೆಯು ಒಂದು ಕ್ಷಣ ಕಂಗಾಲಾದರೂ ಕೂಡಾ, ಮರುಕ್ಷಣ ಚೇತರಿಸಿಕೊಂಡು ತನ್ನ ಕೊರೋನಾ ಪೀಡಿತ ಪತಿಯ ಬಾಯಿಗೆ ಬಾಯಿಟ್ಟು ಗಾಳಿ ಊದಿದ್ದಾಳೆ.
ಆತನ ಬಾಯಿಗೆ ತನ್ನ ಬಾಯಿಯಿಟ್ಟು ಉಸಿರು ನೀಡುವ ಮೂಲಕ ಹೃದಯ ಮತ್ತು ಶ್ವಾಸಕೋಶ ಪ್ರಚೋದಿಸಲು ಸರ್ವ ಪ್ರಯತ್ನ ನಡೆಸಿದ್ದಾಳೆ . ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿದ್ದು, ಈ ಫೋಟೋ ವೈರಲ್ ಆಗಿದೆ.

ದುರ್ದೈವ ಅಂದರೆ ಮಹಿಳೆಯ ಪ್ರಯತ್ನ ವಿಫಲವಾಗಿದೆ. ಪತಿ ಆಟೋದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ನಂತರ ಆಗ್ರಾದ ಎಸ್ಎನ್ ಮೆಡಿಕಲ್ ಆಸ್ಪತ್ರೆಯಲ್ಲಿ ರವಿ ಸಿಂಗಲ್ ಅವರು ನಿಧನರಾಗಿದ್ದಾರೆ ಎಂದು ಕಂಫಾರ್ಮ್ ಮಾಡಿದ್ದಾರೆ.

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: