Ad Widget

ಹಿಂದೂ ಪವಿತ್ರ ಸ್ಥಳದಲ್ಲಿ ಮಾಡಿದ ನೀಲಿ ಚಿತ್ರದ ವಿಡಿಯೋ ವೈರಲ್ | ನಟಿಯ ಪತ್ತೆಗೆ ಹೊರಟ ಪೊಲೀಸರು

ರಷ್ಯಾ ಮೂಲದ ನೀಲಿ ತಾರೆಯೊಬ್ಬಳು
ತಮ್ಮ ಪಾರ್ಟ್ನರ್ ಜತೆ ಹಿಂದೂಗಳ ಪವಿತ್ರ ಸ್ಥಳವೊಂದರಲ್ಲಿ ಅಶ್ಲೀಲ ವೀಡಿಯೋ ಶೂಟ್ ಮಾಡಿದ್ದಾಳೆ.

ಇಂಡೋನೇಷಿಯಾದ ಪವಿತ್ರ ಸ್ಥಳವೊಂದರಲ್ಲಿ ಈ ಅಶ್ಲೀಲ ವಿಮಾಡಲಾಗಿದೆ. ಈ ವಿಡಿಯೋ ಧಾರ್ಮಿಕ ಶ್ರದ್ಧಾ ಭಕ್ತಿಯ ಸ್ಥಳದಲ್ಲಿ ಮಾಡಿರುವುದು ವೈರಲ್ ಆಗುತ್ತದೆ ಅಲ್ಲಿನ ಪೊಲೀಸರು ಎಚ್ಚೆತ್ತುಕೊಂಡಿದ್ದು, ಇದೀಗ ಆ ಜೋಡಿಯ ಹಿಂದೆ ಬಿದ್ದಿದ್ದಾರೆ.

ರಷ್ಯಾದ 22 ವರ್ಷದ ವೆರೋನಿಕಾ ಟ್ರೋಶಿನಾ ಮತ್ತು ಅವಳ 26 ವರ್ಷದ ಬಾಯ್‌ಫ್ರೆಂಡ್ ಮಿಖಾಯಿಲ್ ಮೊರೊಜೊವ್ ಈ ಕೆಲಸ ಮಾಡಿದವರು. ಅವರು ಕೆಲ ತಿಂಗಳ ಹಿಂದೆ ಇಂಡೋನೇಷಿಯಾದ ಬಾಲಿಯಲ್ಲಿರುವ ಮೌಂಟ್ ಬತೂರ್ ನ ‘ ಪಾಸರ್ ಬಗುಂಗ್ ‘ ಎಂಬ ಹಿಂದೂ ದೇವಾಲಯವಿರುವ ಸ್ಥಳದಲ್ಲಿ ಸೆಕ್ಸ್ ಮಾಡುತ್ತಾ ಅದರ ವಿಡಿಯೋ ಶೂಟ್ ಮಾಡಿದ್ದಾರೆ. ಅವರು ಶೂಟ್ ಮಾಡಿದ್ದ ಆ ಸ್ಥಳವನ್ನು ಹೋಲಿ ಹಿಲ್ ಎಂದೂ ಕರೆಯಲಾಗುತ್ತದೆ. ಅಲ್ಲಿನ ಸ್ಥಳೀಯರು ಆ ಸ್ಥಳವನ್ನು ಒಂದು ಧಾರ್ಮಿಕ ಸ್ಥಳವಾಗಿ ಪೂಜಿಸುತ್ತಾರೆ. ಆದರೆ ಅಂಥ ಸ್ಥಳದಲ್ಲಿ ಈ ಜೋಡಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದೆ.

Ad Widget Ad Widget Ad Widget

ಈ ವಿಡಿಯೋವನ್ನು ವರ್ಷಗಳ ಹಿಂದೆಯೇ ಶೂಟ್ ಮಾಡಲಾಗಿತ್ತು. ಆದರೆ ಅದನ್ನು ಇತ್ತೀಚೆಗೆ ವೆರೋನಿಕಾ ಟ್ರೋಶಿನಾ ಪೋರ್ನ್ ವೆಬ್‌ಸೈಟ್ ಒಂದರಲ್ಲಿ ಹರಿಬಿಟ್ಟಿದ್ದಾರೆ. ಅದಾದ ನಂತರ ಅಲ್ಲಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜನರೆಲ್ಲ ವೆರೋನಿಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ.

ಆ ಹಿನ್ನೆಲೆಯಲ್ಲಿ ಇಂಡೋನೇಷಿಯಾದ ಬಾಲಿ ಪೊಲೀಸರು ಈ ಜೋಡಿಯ ಹುಡುಕಾಟ ಮಾಡಲಾರಂಭಿಸಿದೆ. ಈ ಜೋಡಿ ಇನ್ನೂ ಬಾಲಿಯಲ್ಲೇ ಇದೆಯೇ ಅಥವಾ ರಷ್ಯಾಕ್ಕೆ ವಾಪಾಸಾಗಿದೆಯೇ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ.

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: