Big News || ಎಲ್ಲ 18 + ವಯಸ್ಕರಿಗೂ ಕರ್ನಾಟಕ ಸರ್ಕಾರದ ವತಿಯಿಂದ ಉಚಿತ ಕೊರೋನಾ ಲಸಿಕೆ !!
ಬೆಂಗಳೂರು: ಹೆಚ್ಚುತ್ತಿರುವ ಕೋವಿಡ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ರಾಜ್ಯದಲ್ಲಿ 14 ದಿನ ಲಾಕ್ ಡೌನ್ ಈಗಾಗಲೇ ಘೋಷಿಸಿದ್ದಾರೆ.
ನಾಳೆ ರಾತ್ರಿ 9 ಗಂಟೆಯಿಂದ ಮಯ್ 10 ರ ತನಕ ಲಾಕ್ ಡೌನ್ ಮುಂದುವರೆಯಲಿದೆ.
ಈ ಮಧ್ಯೆ, 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲು ಕರ್ನಾಟಕ ಸರಕಾರ ನಿರ್ಧರಿಸಿದೆ.
45 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಕೇಂದ್ರ ಸರ್ಕಾರದ ವತಿಯಿಂದ ಉಚಿತ ಲಸಿಕೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.