ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಗೆ ಮದುವೆ ಊಟದ್ದೇ ಚಿಂತೆ | ಸಾಮಾಜಿಕ ಜವಾಬ್ದಾರಿ ಮರೆತ ವ್ಯಕ್ತಿಗೆ ಹಿಗ್ಗಾಮುಗ್ಗಾ ಬಾರಿಸುತ್ತಿದೆ ಸೋಷಿಯಲ್ ಮೀಡಿಯಾ !

ರೂಲ್ಸ್ ಗಳು, ನಿಯಮ ಕಟ್ಟು ಪಾಡುಗಳೆಲ್ಲ ಕೇವಲ ಸಾಮಾನ್ಯ ಜನರಿಗೆ ಮಾತ್ರ ಎಂದು ಮತ್ತೊಮ್ಮೆ ಸಾಬೀತಾಗಿದೆ!

ಉಡುಪಿಯ ಅಡಿಷನಲ್ ಎಸ್ ಪಿ ಅವರ ಮಗಳ ಮದುವೆಯಲ್ಲಿ ಮಾಸ್ಕ್ ಹಾಗೂ ಅಂತರಗಳ ಗೊಡವೆಗಳಿಲ್ಲದೆ ಆನಂದದಲ್ಲಿ ಪಾಲ್ಗೊಂಡವರು ನಮ್ಮ ನಮ್ಮ ಹೆಮ್ಮೆಯ ಉಡುಪಿಯ ಜಿಲ್ಲಾಧಿಕಾರಿಗಳು ! ನಿನ್ನೆ ಅಂದರೆ ರಾತ್ರಿ 8.45ಕ್ಕೆ ಅವರು ಅಲ್ಲಿ ಸಂಭ್ರಮದಲ್ಲಿ ಮುಳುಗಿದ್ದರೆ, ರಾತ್ರಿ 9 ಕ್ಕೆ ನೈಟ್ & ವೀಕೆಂಡ್ ಕರ್ಫ್ಯೂ ಆರಂಭ. ಆದರೆ ಈ ವ್ಯಕ್ತಿ ಸಾಮಾಜಿಕ ಅಂತರ ಮಾಸ್ಕ್ ಏನೂ ಇಲ್ಲದೆ ಮದುವೆಯ ಮನೆಯಲ್ಲಿ ನಗುತ್ತಾ ನಿಂತಿದ್ದಾರೆ.

ಇದೇ ವ್ಯಕ್ತಿ ಮೊನ್ನೆ ಸಂಜೆ  ಶಾಲಾ ಕಾಲೇಜು ಮುಗಿಸಿಕೊಂಡು ಮನೆಗೆ ಬಸ್ಸಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯರನ್ನು ಅರ್ಧ ದಾರಿಯಲ್ಲಿ ಇಳಿ ಹೋಗಿದ್ದರು.

ಇವತ್ತು ಸೋಶಿಯಲ್ ಮೀಡಿಯಾ ಜಿಲ್ಲಾಧಿಕಾರಿಯ ವಿರುದ್ಧ ಪ್ರತಿಭಟನೆಯಿಂದ ತುಂಬಿ ಹೋಗಿದೆ.

‘ಪಾಪದವರ ಮನೆಯಲ್ಲಿ ಮೆಹಂದಿ ಸಂಭ್ರಮ ಮಾಡಲೂ ಅವಕಾಶ ಇಲ್ಲ. ಉಳ್ಳವರು ಏನು ಬೇಕಾದರೂ ಮಾಡಬಹುದು ಇದು ನಮ್ಮ ವ್ಯವಸ್ಥೆ.’

‘ನೀವೇ ರೂಲ್ಸ್ ಪಾಲನೆ ಮಾಡದೆ ಹೋದರೆ, ನೀವು ಹೇಗೆ ಒಂದು ಇಡೀ ಜಿಲ್ಲೆಯ ಜನತೆಯನ್ನು ಪ್ರಭಾವಿಸುತ್ತೀರಿ ? ಮುಖದಲ್ಲಿ ಒಂದು ಹನಿ ನಾಚಿಕೆ ಇಲ್ಲದೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. Shame on ಜಗದೀಶ್.
Lets raise voice
#ShameOnSystem #DCUdupi #UdupiDC

ಇದು ಇಡೀ ಉಡುಪಿ ದಕ್ಷಿಣಕನ್ನಡದಲ್ಲಿ ಇವತ್ತು ಆಕ್ರೋಶದಿಂದ ಕೇಳಿಬರುವ ಮಾತು.

ಸೋಷಿಯಲ್ ಮೀಡಿಯಾ ಸ್ಯಾಂಪಲ್ ಗಳು

Leave A Reply

Your email address will not be published.