ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕಿ ಕಲಾವತಿ ಭುರಿಯಾ ಕೊರೋನಾ ಸೋಂಕಿಗೆ ಬಲಿ
ಇಂದೋರ್: ಕೋವಿಡ್ನಿಂದಾಗಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕಿ, ಮಾಜಿ ಕೇಂದ್ರ ಸಚಿವ ಕಾಂತಿಲಾಲ್ ಭುರಿಯಾ ಅವರ ಸೋದರ ಸೊಸೆ ಕಲಾವತಿ ಭುರಿಯಾ (49) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರದಂದು ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಿವೇಕ್ ಜೋಶಿ “12 ದಿನಗಳ ಹಿಂದೆ ಕಲಾವತಿ ಅವರನ್ನು ಇಂದೋರ್ನ ಶಲ್ಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿತ್ತು. ಕಲಾವತಿ ಅವರ ಶ್ವಾಸಕೋಶ ಶೇಕಡ 70ರಷ್ಟು ಸೋಂಕಿಗೆ ಒಳಗಾಗಿದ್ದು, ವೆಂಟಿಲೇಟರ್ ನೆರವು ನೀಡಲಾಗಿತ್ತು. ಅಲ್ಲದೆ ಅವರ ಸ್ಥಿತಿಯು ಪ್ರತಿನಿತ್ಯ ಕ್ಷೀಣಿಸುತ್ತಿತ್ತು. ಅವರನ್ನು ಉಳಿಸಲು ನಮಗೆ ಸಾಧ್ಯವಾಗಿಲ್ಲ” ಎಂದು ತಿಳಿಸಿದರು.
2018ರಲ್ಲಿ ಕಲಾವತಿ ಅವರು ಜೋಬತ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು.