KMF: ದರ ಏರಿಕೆ ಮಾತ್ರವಲ್ಲ, ಪ್ಯಾಕೆಟ್ ನಲ್ಲಿ ಹಾಲು ಕೂಡ ಕಡಿತ?

Share the Article

 

KMF: ರಾಜ್ಯದಲ್ಲಿ ಸರ್ಕಾರವು ಬಸ್ ಪ್ರಯಾಣದರ, ಮೆಟ್ರೋ ಪ್ರಯಾಣದರ ಹಾಗೂ ವಿದ್ಯುತ್ ದರಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ ಇದೀಗ ನಂದಿನಿ ಹಾಲಿನ ದರವನ್ನು ಕೂಡ ಏರಿಸಲು ಚಿಂತನೆ ನಡೆಸಿದೆ. ಆದರೆ ಈಗ ಬಂದಿರುವ ಸುದ್ದಿಯ ಪ್ರಕಾರ ಹಾಲಿನ ದರ ಏರಿಸುವುದು ಮಾತ್ರವಲ್ಲ ಪ್ಯಾಕೆಟ್ ನಲ್ಲಿ ಹಾಲನ್ನು ಕೂಡ ಕಡಿತಗೊಳಿಸಲು ಕೆಎಂಎಫ್ ನಿರ್ಧರಿಸಿದೆ ಎನ್ನಲಾಗಿದೆ.

 

ಹೌದು, ಬಜೆಟ್ ಮಂಡನೆಯಾದ ಬಳಿಕ ರಾಜ್ಯದ ಜನತೆಗೆ ಸದ್ಯದಲ್ಲೇ ಹಾಲಿನ ಏರಿಕೆ ದರ ಶಾಕ್ ಎದುರಾಗುವ ಬಗ್ಗೆ ಸರ್ಕಾರವೇ ಸುಳಿವು ನೀಡಿದೆ. ಈ ಮಧ್ಯೆ ಕಳೆದ ಐದಾರು ತಿಂಗಳಿನಿಂದ ಪ್ರತಿ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲೂ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನೂ ಕೂಡ ಕಡಿತ ಮಾಡುವ ನಿಟ್ಟಿನಲ್ಲಿ ಕೆಎಂಎಫ್ (KMF) ಚಿಂತನೆ ಮಾಡಿದ್ದು, ಇದರ ಜೊತೆಗೆ ಸದ್ಯ ಹೆಚ್ಚುವರಿ ಹಾಲಿಗೆ (Extra Milk) ನೀಡುತ್ತಿರುವ ಹಣಕ್ಕೆ ಹೆಚ್ಚುವರಿ ದರ ಏರಿಕೆ ಮಾಡಿ, ಹಾಲನ್ನು ಕಡಿತಗೊಳಿಸುವ ಬಗ್ಗೆ ಕೆಎಂಎಫ್ ಚಿಂತನೆಗೆ ಮುಂದಾಗಿದೆ.

 

ಐದಾರು ತಿಂಗಳ ಹಿಂದೆ ಪ್ರತಿನಿತ್ಯ ಒಂದು ಕೋಟಿ ಸಮೀಪ ಹಾಲು ಉತ್ಪಾದನೆಯಾಗುತ್ತಿದ್ದ ಕಾರಣ ಹಾಲನ್ನ ಪ್ರತಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೆಟ್‌ಗಳಲ್ಲಿ ಕ್ರಮವಾಗಿ 50 ಎಂಎಲ್, ಮತ್ತು 100 ಎಂಎಲ್ ಹೆಚ್ಚುವರಿಯಾಗಿ ಸೇರಿಸಿ, ಹೆಚ್ಚುವರಿಯಾಗಿ ದರ ಪರಿಷ್ಕರಣೆ ಮಾಡಿದ್ದರು. ಆದರೆ ಸದ್ಯ ಬೇಸಿಗೆ ಕಾರಣ ಹಿಂದೆ ಉತ್ಪಾದನೆ ಆಗುತ್ತಿದ್ದಷ್ಟೇ ಪ್ರಮಾಣದಲ್ಲಿ ಈಗ ಉತ್ಪಾದನೆ ಕಷ್ಟವಾಗಲಿದ್ದು, ಸುಮಾರು 10 ರಿಂದ 15%ನಷ್ಟು ಹಾಲಿನ ಉತ್ಪಾದನೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನ ಕಡಿತ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Comments are closed.