Ad Widget

ಮಂಗಳೂರಿನಲ್ಲಿ ಮಹಿಳೆಯ ಬೀದಿ ಹುಚ್ಚಾಟ | ‘ ಮಾಸ್ಕ್ ಹಾಕ್ಕೊಳ್ಳಿ ‘ ಎಂದರೆ ‘ ನಾನು 2 ಸಲ ಯಮಲೋಕಕ್ಕೆ ಹೋಗಿ ಬಂದಿದ್ದೇನೆ ‘ ಎಂದ ಮಹಿಳೆ !

ಇಡೀ ದೇಶವೇ ಕೊರೋನಾಗೆ ತತ್ತರಿಸಿದ್ದು ಅದರ ಭೀತಿಗೆ ಎಲ್ಲೆಡೆ ಲಾಕ್ ಡೌನ್ ಮತ್ತು ಜಾಗೃತಿ ನಡೆಸುತ್ತಿದ್ದರೆ, ಇಲ್ಲೊಬ್ಬಳು ಮಹನೀಯಳು ಮಾಸ್ಕ್ ಹಾಕಿಕೊಳ್ಳಲು ಹೇಳಿದಾಗ, ” ನಾನು 2 ಸಲ ಯಮನ ಹತ್ತಿರ ಗದೆ ತೊಗೊಂಡು ಹೋಗಿ ಬಂದಿದ್ದೇನೆ” ಎಂದು ಅಧಿಕಾರಿಗಳಿಗೆ ತನ್ನ ಗದಾಪ್ರಹಾರವನ್ನು ಮಾಡಿದ್ದಾಳೆ.

ಇವತ್ತು ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪಾಲಿಕೆ ಅಧಿಕಾರಿಗಳು ಆಕೆಯ ಮಾತಿಗೆ ಬೆಚ್ಚಿಬಿದ್ದಿದ್ದಾರೆ.

ಮಾಸ್ಕ್ ಹಾಕಲು ಹೇಳಿದ್ದಕ್ಕೆ ಮಹಿಳೆ ಮನಸ್ಸಿಗೆ ಬಂದಂತೆ ಮಾತನಾಡಿ, ಹುಚ್ಚಾಟ ಮೆರೆದಿದ್ದಾಳೆ. ಅಧಿಕಾರಿಗಳು ಮಾಸ್ಕ್ ಕಾರ್ಯಾಚರಣೆ ನಡೆಸುವ ವೇಳೆ ಮಹಿಳೆಗೆ ಬುದ್ಧಿವಾದ ಹೇಳಿದ್ದಾರೆ. ಈ ವೇಳೆ ಮಹಿಳೆ ಅನುಚಿತವಾಗಿ ವರ್ತಿಸಿದ್ದಾರೆ.

ನಾನು ಯಮಲೋಕಕ್ಕೆ 2 ಸಲ ಹೋಗಿ ಬಂದಿದ್ದೇನೆ. ಗದೆ ಹಾಕಿಕೊಂಡು ಯಮಲೋಕಕ್ಕೆ ಹೋಗಿ, 7 ದಿನ ಇದ್ದು ಬಂದಿದ್ದೇನೆ. ಕೊರೊನಾ ನ್ಯೂಸ್ ನಲ್ಲಿ ಬಂದರೆ ಅದು ಡಸ್ಟ್ ಬಿನ್ ಗೆ ಬೀಳುತ್ತದೆ. ಇಲ್ಲದಿದ್ದರೆ ಕೊರೊನಾ ಹೋಗುವುದಿಲ್ಲ. ವೈರಸ್ ಮಾಡಿದ ಥರ್ಡ್ ಕ್ಲಾಸ್ ಯಾವನು? ಎಂದು ಅಸಂಬದ್ಧವಾಗಿ ಮಾತನಾಡಿದ್ದಾಳೆ. ಆ ಮಹಿಳೆಯ ಹುಚ್ಚಾಟ ಕಂಡು ಅಧಿಕಾರಿಗಳಿಗೆ ಫುಲ್ ಶಾಕ್ ಆಗಿದೆ. ಮಹಿಳೆ ಮದ್ಯ ಸೇವಿಸಿ ಈ ರೀತಿ ಮಾತಾಡಿದ್ದಾಳಾ ಎಂಬ ಬಗ್ಗೆ ಅನುಮಾನವಿದೆ.

Leave a Reply

error: Content is protected !!
Scroll to Top
%d bloggers like this: