ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸೋರಿಕೆ | 20 ಕ್ಕೂ ಹೆಚ್ಚು ಕೋವಿಡ್ ರೋಗಿಗಳ ಸಾವು
ನಾಸಿಕ್: ನಾಸಿಕ್ ನ ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸೋರಿಕೆಯಿಂದ, ವೆಂಟಿಲೇಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 20 ಕೋವಿಡ್-19 ರೋಗಿಗಳೂ ಸೇರಿ ಒಟ್ತು 22 ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ. ಸ್ಟೋರೇಜ್ ಟ್ಯಾಂಕ್ ನಲ್ಲಿದ್ದ ಆಮ್ಲಜನಕ ಬೃಹತ್ ಪ್ರಮಾಣದಲ್ಲಿ ಸೋರಿಕೆಯಾಗಿದೆ, ಈ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಎಂದು ಹೇಳಿದ್ದಾರೆ.
ನಾಸಿಕ್ ಮಹಾನಗರ ಪಾಲಿಕೆಯಿಂದ ಕೋವಿಡ್-19 ನಿರ್ವಹಣೆಯಾಗುತ್ತಿದ್ದ ಆಸ್ಪತ್ರೆ ಇದಾಗಿದೆ.ಇತ್ತೀಚಿನ ಮಾಹಿತಿಯ ಪ್ರಕಾರ ವೆಂಟಿಲೇಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 22 ಮಂದಿ ಸಾವನ್ನಪ್ಪಿದ್ದಾರೆ. ಈ ಸೋರಿಕೆಯಿಂದ ಆಕ್ಸಿಜನ್ ಪೂರೈಕೆ ಕುಸಿದು ರೋಗಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಒಟ್ಟಾರೆ 150 ರೋಗಿಗಳ ಪೈಕಿ 127 ಮಂದಿಗೆ ಆಕ್ಸಿಜನ್ ನೀಡಲಾಗುತ್ತಿತ್ತು. ಸೋರಿಕೆಯಾಗುತ್ತಿರುವ ಆಕ್ಸಿಜನ್ ನ ವಿಡಿಯೋ ವೈರಲ್ ಆಗತೊಡಗಿದೆ.
ಈ ಎಲ್ಲಾ ಸಾವುಗಳು ಆಮ್ಲಜನಕದ ಕೊರತೆಯಿಂದ ಉಂಟಾಗಿವೆಯ ಅಥವಾ ಅತಿಯಾದ ಆಮ್ಲಜನಕದ ಪರಿಣಾಮದಿಂದ ( ಆಕ್ಸಿಜನ್ ಪಾಯ್ಸಾನಿಂಗ್, ಅಂದರೆ ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಇರುವುದು ಕೂಡ ಅಪಾಯ !!) ಘಟಿಸಿದೆಯ ಎಂಬುದು ತನಿಖೆಯ ನಂತರವಷ್ಟೆ ಗೊತ್ತಾಗಬೇಕಿದೆ.