Ad Widget

ಧ್ವನಿವರ್ಧಕದಿಂದ ಆಜಾಜ್ : ಸಂವಿಧಾನಿಕವೋ ಅಸಂವಿಧಾನಿಕವೋ ?’ – ಆನ್‌ಲೈನ್ ವಿಶೇಷ ವಿಚಾರ ಸಂಕಿರಣ !

ಮಸೀದಿಯಲ್ಲಿ ಅನಧಿಕೃತ ಧ್ವನಿವರ್ಧಕದ ಸಮಸ್ಯೆ, ಇದು ಕೇವಲ ಧ್ವನಿಮಾಲೀನ್ಯಕ್ಕೆ ಮಾತ್ರ ಸೀಮಿತವಲ್ಲ, ಇದು ಹಿಂದೂಗಳನ್ನು ಹತ್ತಿಕ್ಕುವ ‘ಲ್ಯಾಂಡ್ ಜಿಹಾದ್’ ! – ಶ್ರೀ. ಸಂತೋಷ ಪಾಚಲಗ, ಅರ್ಜಿದಾರ

‘ಮುಂಬಯಿಯ ಕಪಾಡಿಯಾನಗರ(ಕುರ್ಲಾ) ಇಲ್ಲಿ ಶೇ. 50 ರಷ್ಟು ಹಿಂದೂಗಳು ವಾಸವಾಗಿದ್ದಾರೆ. ಇಲ್ಲಿ ಅನೇಕ ಮಸೀದಿಯ ಮೇಲೆ ಅನಧಿಕೃತವಾಗಿ ಧ್ವನಿವರ್ಧಕವನ್ನು ಅಳವಡಿಸಿ ಅದರಿಂದ ಕರ್ಕಶವಾದ ಧ್ವನಿಯಲ್ಲಿ ಆಜಾನ ನೀಡಲು ಆರಂಭವಾಗಿದೆ. ಸತತವಾಗಿ ತೊಂದರೆಯಿಂದ ಬೇಸತ್ತ ಇಲ್ಲಿಯ ಹಿಂದೂಗಳು ತಮ್ಮ ಮನೆಮಾರುಗಳನ್ನು ಮುಸಲ್ಮಾನರಿಗೆ ಮಾರಿ ಹೋಗಿದ್ದಾರೆ. ಇಂದು ಇಲ್ಲಿ ಕೇವಲ ಶೇ. ೩ ರಷ್ಟು ಹಿಂದೂಗಳು ಉಳಿದಿದ್ದಾರೆ. ಇದು ಹಿಂದೂಗಳನ್ನು ಹತ್ತಿಕ್ಕುವ ಪಿತೂರಿಯಾಗಿದೆ. ಆದ್ದರಿಂದ ಮಸೀದಿಯ ಮೇಲೆ ಅಳವಡಿಸಿರುವ ಅನಧಿಕೃತ ಧ್ವನಿವರ್ಧಕದ ಪ್ರಶ್ನೆಯು ಕೇವಲ ಧ್ವನಿ ಮಾಲೀನ್ಯಕ್ಕೆ ಸೀಮಿತವಾಗಿರದೇ ಹಿಂದೂಗಳನ್ನು ಹತ್ತಿಕ್ಕುವ ಒಂದು ಆಯೋಜನಾ ಬದ್ಧ ‘ಲ್ಯಾಂಡ್ ಜಿಹಾದ್’ ಆಗಿದೆ, ಎಂಬ ಜಾಜ್ವಲ್ಯವಾದ ಅಭಿಪ್ರಾಯವನ್ನು ಮಸೀದಿಯ ಮೇಲಿನ ಅನಧಿಕೃತ ಧ್ವನಿವರ್ಧಕವನ್ನು ವಿರೋಧಿಸಿ ನವಿ ಮುಂಬಯಿಯ ಹಿಂದುತ್ವನಿಷ್ಠ ಶ್ರೀ. ಸಂತೋಷ ಪಾಚಲಗ ಇವರು ಅರ್ಜಿ ಸಲ್ಲಿಸಿದ್ದಾರೆ.

ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ಧ್ವನಿವರ್ಧಕದಿಂದ ನೀಡುವ ಆಜಾನ : ಸಂವಿಧಾನಿಕವೋ ಅಥವಾ ಅಸಂವಿಧಾನಿಕವೋ ?’ ಈ ‘ಆನ್‌ಲೈನ್ ವಿಶೇಷ ವಿಚಾರ ಸಂಕಿರಣ’ದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ‘ಫೇಸ್‌ಬುಕ್’ ಹಾಗೂ ‘ಯು-ಟ್ಯೂಬ್’ ಮೂಲಕ 13000 ಜನರು ವೀಕ್ಷಿಸಿದ್ದಾರೆ.

ಶ್ರೀ. ಪಾಚಲಗ ತಮ್ಮ ಮಾತನ್ನು ಮುಂದುವರೆಸುತ್ತಾ, ನವಿ ಮುಂಬಯಿಯಲ್ಲಿ 45 ಮಸೀದಿಯ ಮೇಲಿನ ಅನಧಿಕೃತ ಬೋಂಗಾಗಳ ವಿರುದ್ಧದ ಅರ್ಜಿಯಲ್ಲಿ ಗೆಲುವು ಸಿಕ್ಕಿರುವುದು ಕೇವಲ ಆರಂಭವಾಗಿದ್ದು ರಾಜ್ಯದ 3200 ಅನಧಿಕೃತ ಬೋಂಗಾಗಳ ವಿರುದ್ಧ ನಾವು ಮಾನಹಾನಿ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದೇವೆ. ಈ ಹೋರಾಟ ನಡೆಯುತ್ತಲೇ ಇದೆ. ಇದರಲ್ಲಿ ಹಿಂದೂಗಳ ಸಂಘಟಿತರಾಗಿ ಸಹಭಾಗ ಹೆಚ್ಚಾದಾಗಲೇ ರಾಜಕಾರಣಿಗಳು ನಮ್ಮ ಪರ ಬರಲು ಸಾಧ್ಯ; ಅವರು ಕೇವಲ ಸಮೂಹದ ಹಿಂದೆ ಓಡುವವರಾಗಿರುತ್ತಾರೆ. ಅದಕ್ಕಾಗಿ ನಮಗೆ ಹಿಂದೂಗಳ ಸಂಘಟಿತ ಶಕ್ತಿಯನ್ನು ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು.

ಈ ವಿಚಾರ ಸಂಕಿರಣದಲ್ಲಿ ಸಹಭಾಗಿಯಾಗಿದ್ದ ಹರಿಯಾಣಾದ ‘ವಿವೇಕಾನಂದ ಕಾರ್ಯ ಸಮಿತಿ’ಯ ಅಧ್ಯಕ್ಷ ಶ್ರೀ. ನೀರಜ ಅತ್ರಿಯವರು ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ, ಆಜಾನ ನಾವು ಕೇಳುತ್ತೇವೆ; ಆದರೆ ಹೆಚ್ಚಿನ ಜನರಿಗೆ ಅದರ ಅರ್ಥ ಗೊತ್ತಿಲ್ಲ. ಆಜಾನ್‌ನಲ್ಲಿ ‘ಅಲ್ಲಾನೊಬ್ಬನೇ ಸರ್ವಶ್ರೇಷ್ಠವಾಗಿದ್ದಾನೆ. ಈ ಜಗತ್ತಿನಲ್ಲಿ ಅಲ್ಲಾನ ಹೊರತಾಗಿ ಬೇರೆ ಯಾರನ್ನೂ ಪೂಜಿಸುವುದು ಯೋಗ್ಯವಲ್ಲ, ಎಂದು ನಾನು ಹೇಳುತ್ತೇನೆ.’ ಎಂದು ಹೇಳಲಾಗುತ್ತದೆ. ದೇಶದಾದ್ಯಂತ ಪ್ರತಿದಿನ 5 ಸಲ ಬೋಂಗಾದಿಂದ ಈ ಸಂದೇಶವನ್ನು ಎಲ್ಲರಿಗೆ ಕೇಳಿಸಲಾಗುತ್ತದೆ. ಇದು ಒಂದು ರೀತಿಯ ಹಿಂದೂಗಳ ದೇವತೆಗಳ ಅವಮಾನವೇ ಆಗಿದ್ದು ಮುಸಲ್ಮಾನರೇತರರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಕೃತ್ಯವಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಈ ಸಮಯದಲ್ಲಿ ‘ಹಿಂದೂ ವಿಧಿಜ್ಞ ಪರಿಷತ್ತಿ’ನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ ಇವರು ತಮ್ಮ ಅಭಿಪ್ರಾಯವನ್ನು ಹೇಳುತ್ತಾ, ಅನಧಿಕೃತ ಬೋಂಗಾದ ವಿರೋಧದ ಹೋರಾಟದಲ್ಲಿ ಎಲ್ಲೆಡೆಗಳಲ್ಲಿನ ಹಿಂದೂಗಳು ಒಟ್ಟಾಗಬೇಕು.

ಪೊಲೀಸರಿಗೆ ದೂರು ನೀಡಲಿಕ್ಕಾಗಿ ಲಭ್ಯ ಮಾಡಿಕೊಟ್ಟಿರುವ 100 ಕ್ರಮಸಂಖ್ಯೆಯೊಂದಿಗೆ ‘ಟ್ವಿಟರ್’ ಹಾಗೂ ‘ಫೇಸ್‌ಬುಕ್’ ಈ ಸೋಶಿಯಲ್ ಮೀಡಿಯಾದ ಮಾಧ್ಯಮದಿಂದ. ಅದೇರೀತಿ ರಾಷ್ಟ್ರೀಯ ಹಸಿರು ಪ್ರಾಧಿಕಾರ, ಜಿಲ್ಲಾಧಿಕಾರಿ ಇತ್ಯಾದಿಗಳಲ್ಲಿ ಸಮೂಹದಿಂದ ದೂರನ್ನು ನೊಂದಾಯಿಸಬೇಕು. ಪರಿಸರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಧ್ವನಿಮಾಲಿನ್ಯ ಮಾಡುವವರಿಗೆ 5 ವರ್ಷ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿಯ ದಂಡ ವಿಧಿಸುವ ಏರ್ಪಾಡುಯಿದೆ. ಈ ಕಾನೂನನ್ನು ಉಪಯೋಗಿಸಬೇಕು. ಈ ಸಂದರ್ಭದಲ್ಲಿ ಮಾತನಾಡಿದ ನವ ದೆಹಲಿಯಲ್ಲಿ ಬೋಂಗಾಗಳ ವಿರುದ್ಧ ಹೋರಡುವ ‘ಅಖಂಡ ಭಾರತ ಮೋರ್ಚಾ’ ಅಧ್ಯಕ್ಷರಾದ ಶ್ರೀ. ಸಂದೀಪ ಅಹುಜಾ ಇವರು, ಮಸೀದಿಗಳ ಮೇಲೆ ಅನಧಿಕೃತ ಬೋಂಗಾಗಳನ್ನು ಜಿಹಾದ್‌ಗಾಗಿ ಕರೆ ನೀಡಲು ಆಯುಧಗಳಾಗಿ ಬಳಸಲಾಗುತ್ತಿದೆ. ಪೊಲೀಸರು ಮಸೀದಿಗಳಲ್ಲಿ ಅನಧಿಕೃತ ಬೋಂಗಾಗಳ ವಿರುದ್ಧದ ದೂರುಗಳನ್ನು ದಾಖಲಿಸಿಕೊಳ್ಳುವುದಿಲ್ಲ. ದೆಹಲಿಯ 10 ಮಸೀದಿಗಳಲ್ಲಿ ಅನಧಿಕೃತ ಬೋಂಗಾಗಳ ವಿರುದ್ಧ ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ ಹೋಗಿದ್ದೆ. ಅಲ್ಲಿನ ನ್ಯಾಯಾಧೀಶರು ಮುಸಲ್ಮಾನರಾಗಿದ್ದರು ಮತ್ತು ಅವರು ಮೊದಲು ಅರ್ಜಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದರು; ಆದರೆ ನಾವು ಕಾನೂನಿನ ನಿಲುವಿನಿಂದ ದೃಢವಾಗಿದ್ದರಿಂದ ಅವರು ಅರ್ಜಿಯನ್ನು ಸ್ವೀಕರಿಸಬೇಕಾಯಿತು; ಆದರೆ, ಅವರು ನಿರೀಕ್ಷಿತ ತೀರ್ಪನ್ನು ನೀಡದ ಕಾರಣ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬೇಕಾಯಿತು. ಎಂದು ಶ್ರೀ. ರಮೇಶ ಶಿಂದೆ
ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ. ಅವರು ಹೇಳಿದ್ದಾರೆೆೆೆ.

Leave a Reply

error: Content is protected !!
Scroll to Top
%d bloggers like this: