ತಮಿಳು ತೆಲುಗು ಚಿತ್ರರಂಗದ ಹಿರಿಯ ಹಾಸ್ಯ ಚಕ್ರವರ್ತಿ ವಿವೇಕ್ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ವಿಧಿವಶ
ನಿನ್ನೆ (ಏಪ್ರಿಲ್ 16) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ತೆಲುಗು ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ, ಹಾಸ್ಯಚಕ್ರವರ್ತಿ ವಿವೇಕ್ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.
ಕನ್ನಡ ಸೇರಿದಂತೆ ಈ ಬಹುಭಾಷಾ, ಸುರದ್ರೂಪಿ ಹಾಸ್ಯ ನಟ ಹಲವು ಭಾಷೆಗಳಲ್ಲಿ ನಟಿಸಿ ತನ್ನದೇ ಮ್ಯಾನರಿಸಂ ನಿಂದ ನಗಿಸಿದ್ದರು.
ನಿನ್ನೆ ಅವರಿಗೆ ತೀವ್ರತರವಾದ ಹೃದಯಾಘಾತವಾಗಿತ್ತು. ವಿವೇಕ್ ಅವರ ಹೃದಯಾಘಾತಕ್ಕೆ ಗುರುವಾರ ತೆಗೆದುಕೊಂಡ ಕೋವಿಡ್ ಲಸಿಕೆ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ತಮಿಳುನಾಡು ಸರ್ಕಾರದ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಹೃದಯಾಘಾತಕ್ಕೆ ಲಸಿಕೆ ಕಾರಣವಲ್ಲ ಎಂದಿದ್ದಾರೆ.
ಹಿರಿಯ ನಿರ್ದೇಶಕ ಕೆ. ಬಾಲಚಂದರ್ ಅವರು ವಿವೇಕ್ ಅವರ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಸಾಕಷ್ಟು ಚಿತ್ರಗಳಲ್ಲಿ ಹಾಸ್ಯ ಕಲಾವಿದರಾಗಿ ನಟಿಸಿದ್ದಾರೆ. ಖುಷಿ,ಅನ್ನಿಯನ್, ಮಿನ್ನಾಲೆ, ಮುಗವರೀ, ದಮ್ ದಮ್ ದಮ್, ಶಿವಾಜಿ ಸೇರಿದಂತೆ ಹಲವಾರು ಪ್ರಮುಖ ಚಿತ್ರಗಳಲ್ಲಿ ವಿವೇಕ್ ಹಾಸ್ಯದ ಹೊಳೆಯನ್ನೇ ಹರಿಸಿದ್ದಾರೆ.
ರಜಿನಿಕಾಂತ್, ಕಮಲ್‌ಹಾಸ್, ಮಾಧವನ್, ವಿಜಯ್, ಅಜಿತ್ ಮತ್ತು ಸೂರ್ಯರಂತಹ ಘಟಾನುಘಟಿ ನಾಯಕರು ಜತೆ ವಿವೇಕ್ ತೆರೆಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ನಟ ಪ್ರೇಮ್ ಅಭಿನಯದ ಚಂದ್ರ ಚಿತ್ರದಲ್ಲಿ ನಟಿಸುವ ಮೂಲಕ ವಿವೇಕ್ ಕನ್ನಡಿಗರಿಗೂ ತಮಿಳು.