ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಳೆಯ ಹುಡುಗನಿಗೆ ರಾಡ್ ಬೀಸಿ ಕೊಲೆ

ಹಿಂದೂಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಬಾಡಿ ಬಿಲ್ಡರ್ ಕೊಲೆಯಾಗಿದೆ.
ಈ ಕೊಲೆಯನ್ನು ಖಂಡಿಸಿ ಚಿಕ್ಕಮಗಳೂರು ನಗರ ಬಂದ್‌ಗೆ ಕರೆ ನೀಡಲಾಗಿದೆ.

ಅಯ್ಯಪ್ಪ ನಗರದ ಮನೋಜ್ (21) ಮೃತ. ಬಾಡಿ ಬಿಲ್ಡರ್ ಆಗಿದ್ದ ಮನೋಜ್ ಮಿಸ್ಟರ್ ಚಿಕ್ಕಮಗಳೂರು ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ.
ಬುಧವಾರ ರಾತ್ರಿ ಮನೋಜ್ ನನ್ನು ಕರೆಸಿಕೊಂಡಿದ್ದ ಕೆಲ ಮುಸ್ಲಿಂ ಹುಡುಗರು 15 ಜನಕ್ಕೂ ಅಧಿಕ ಮಂದಿ ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕಬ್ಬಿಣದ ರಾಡ್ ಬೀಸಿ ಹಲ್ಲೆ ನಡೆಸಲಾಗಿದ್ದ ಆತನನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಮನೋಜ್ ಮೃತಪಟ್ಟಿದ್ದಾನೆ. ಮನೋಜ್ ನ ಕೊಲೆ ವಿರೋಧಿಸಿ ಚಿಕ್ಕಮಗಳೂರಿನ ಎಂ.ಜಿ ರಸ್ತೆಯಲ್ಲಿ ಅಂಗಡಿಗಳ ಬಾಗಿಲು ಮುಚ್ಚಿ ಪ್ರತಿಭಟಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಅಷ್ಟೇ ಅಲ್ಲದೆ ಅಲ್ಲಿನ ಠಾಣೆಯೊಂದರ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸ್ವಧರ್ಮ ಮೋಹದಿಂದ ವಿಳಂಬ ಮಾಡುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ.

Leave A Reply

Your email address will not be published.