ಸಂಬಳ ಬಂದ ಮೇಲೆ ಯುಗಾದಿಗೆ ಹೊಸ ಬಟ್ಟೆ ಕೊಡಿಸುವೆ ಎಂದ ಅಪ್ಪ | ಕಾಯಲು ತಾಳ್ಮೆ ಇಲ್ಲದ 12 ರ ಬಾಲಕಿ ಆತ್ಮಹತ್ಯೆಗೆ ಶರಣಾಗತಿ

ಚಾಮರಾಜನಗರ: ಯುಗಾದಿ ಹಬ್ಬಕ್ಕೆ ಹೊಸಬಟ್ಟೆ ತೆಗೆದುಕೊಡಲಿಲ್ಲವೆಂದು ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಳ್ಳೇಗಾಲದ ಬಸೀಪುರದಲ್ಲಿ ನಡೆದಿದೆ.

ಹರ್ಷಿತಾ (12) ಹೀಗೆ ನೇಣು ಬಿಗಿದುಕೊಂಡು ಮೃತ ಬಾಲಕಿ.
ಮನೆಯಲ್ಲಿ ಯುಗಾದಿ ಹಬ್ಬವನ್ನು ಆಚರಿಸುವ ಕಾರಣ ಯುಗಾದಿ ಹಬ್ಬಕ್ಕೆ ಎಂದಿನಂತೆ ಹೊಸಬಟ್ಟೆ ಬೇಕೆಂದು ಮಗಳು ಕೇಳಿದ್ದಳು. ಯುಗಾದಿ ಹಬ್ಬ ಹತ್ತಿರ ಬರುತ್ತಿರುವಂತೆ ಹರ್ಷಿತಾ ಹೊಸ ಬಟ್ಟೆಗಾಗಿ ತಂದೆ ಬಸವರಾಜು ಬಳಿ ಕೂಡಲೇ ಬಟ್ಟೆ ಕೊಡಿಸುವಂತೆ ಹಠ ಹಿಡಿದಿದ್ದಳು.

ಆದರೆ ಅಪ್ಪನ ಕೈ ಖಾಲಿಯಾಗಿದ್ದ ಕಾರಣ ಸಂಬಳ ಬಂದ ನಂತರ ತೆಗೆದುಕೊಡುವುದಾಗಿ ಪಾಲಕರು ಹೇಳಿದ್ದರು. ಆದರೆ ಇದರಿಂದ ಹುಡುಗಿ ಅಸಮಾಧಾನಗೊಂಡಿದ್ದರೂ ಮನೆಯವರ ಮುಂದೆ ತೋರ್ಪಡಿಸಿ ಕೊಂಡಿರಲಿಲ್ಲ. ಆದರೆ ಮನೆಯವರೆಲ್ಲಾ ಹೊರಗೆ ಹೋದ ಸಂದರ್ಭದಲ್ಲಿ ಮಗಳು ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾಳೆ.

Leave A Reply

Your email address will not be published.