ಸುದೀರ್ಘ 30 ವರ್ಷ, 22 ಅಡಿ ಉಗುರು ಬೆಳೆಸಿ ತನ್ನದೇ ಹಳೆಯ ದಾಖಲೆ ಮುರಿದು ಉಗುರು ಕತ್ತರಿಸಿ ಕೊಂಡ ಮಹಿಳೆಯ ವಿಡಿಯೋ ವೈರಲ್
ಅಮೆರಿಕಾ ಟೆಕ್ಸಾಸ್ ನ ಮಹಿಳೆಯೊಬ್ಬಳು ಬರೋಬ್ಬರಿ 30 ವರ್ಷಗಳ ನಂತರ ತನ್ನ ಕೈ ಬೆರಳುಗಳ ಉಗುರನ್ನು ಕತ್ತರಿಸಿ ಸುದ್ದಿಯಲ್ಲಿದ್ದಾಳೆ.
ಅಮೆರಿಕದ ಟೆಕ್ಸಾಸ್‌ನ 45 ವರ್ಷದ ಆಯನಾ ವಿಲಿಯಮ್ಸ್ ಎನ್ನುವರು ತಮ್ಮ ಎರಡು ಕೈ ಬೆರಳುಗಳ ಉಗುರುಗಳನ್ನು ಸತತ 30 ವರ್ಷಗಳಿಂದ ಬೆಳೆಸಿದ್ದಳು. ಹಾಗೆ ಉಗುರು ಬೆಳೆಸಿ ಬೆಳೆಸಿ ಅದು 22 ಅಡಿ ಉದ್ದುದ್ದ ಬೆಳೆದುಬಿಟ್ಟಿತ್ತು. ಆಕೆಯ ಈ ಸಾಧನೆ 2017 ರಲ್ಲಿ ಗಿನ್ನಿಸ್ ದಾಖಲೆ ಕೂಡ ನಿರ್ಮಿಸಿತ್ತು.
ಆ ನಂತರ ಕೂಡ ಆಕೆ ತನ್ನ ಉಗುರು ಗಿಡ ಬೆಳೆಸುವ ಕೃಷಿಯನ್ನು ಮುಂದುವರೆಸಿದ್ದಳು. ಅದು ಮತ್ತಷ್ಟು ಬೆಳೆದು ಮೊನ್ನೆ ತನಕ 22 ಅಡಿಗಳಾಗಿತ್ತು. ಆ ಮೂಲಕ ಮತ್ತೊಮ್ಮೆ ತಮ್ಮದೇ ದಾಖಲೆಯನ್ನು ಮುರಿದ ನಂತರ ಆಕೆ ತನ್ನ ಉಗುರು ಮುರಿದುಕೊಂಡಿದ್ದಾಳೆ.
ಆಕೆ ತಮ್ಮ ಉಗುರುಗಳನ್ನು ಕತ್ತರಿಸಿರುವ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ.
ಆಕೆಗೆ ತನ್ನ ಇಷ್ಟು ಉದ್ದದ ಉಗುರಿಗೆ ಒಂದು ಸಲ ನೇಲ್ ಪಾಲಿಶ್ ಹಾಕಲು 2 ಲೀಟರಿನ 2 ಡಬ್ಬ ಬೇಕಾಗುತ್ತಿತ್ತಂತೆ. ಆಕೆ ತನ್ನ ಎರಡೂ ಕೈಗಳಲ್ಲಿ ಅಷ್ಟು ಉದ್ದದ ಉಗುರು ಬೆಳೆಸಿದ ಕಾರಣ ಆಕೆ ತನ್ನ ದೈನಂದಿನ ‘ ಕಾರ್ಯ ‘ ಕ್ರಮಗಳನ್ನು ಹೇಗೆ ಮಾಡುತ್ತಿದ್ದಳು ಎಂಬುದೇ ದೊಡ್ಡ ಫಝಲ್ !