ಆಟೋ, ಟ್ಯಾಕ್ಸಿ ಚಾಲಕರು ಫುಲ್ ಖುಷ್ | ರಾಜ್ಯ ಸರಕಾರದಿಂದ ನಾಳೆಯೇ 5000 ರೂಪಾಯಿ ಕೋರೋನಾ ಸಹಾಯಧನ ಖಾತೆಗೆ

ಮುಖ್ಯಮಂತ್ರಿ ಯಡಿಯೂರಪ್ಪನವರು ಆಟೋ, ಟ್ಯಾಕ್ಸಿ ಚಾಲಕರಿಗೆ ಒಟ್ಟು 5000 ರೂಪಾಯಿಗಳನ್ನು ಕೋರೋನಾ ಸಂಕಷ್ಟ ಕಾಲದಲ್ಲಿ ಸಹಾಯಧನವಾಗಿ ಘೋಷಿಸಿದ್ದರು.

ಇದೀಗ ಶುಭ ಸುದ್ದಿಯೊಂದು ಬಂದಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದ 40000 ಆಟೊ – ಟ್ಯಾಕ್ಸಿ ಚಾಲಕರಿಗೆ ನಾಳೆಯೇ ಆ ಹಣ ದೊರೆಯಲಿದೆ.

ಅರ್ಜಿ ಸಲ್ಲಿಸಿದವರ ಖಾತೆಗೆ ನಾಳೆ ಸಂಜೆಯೊಳಗೆ ಆ ಹಣವನ್ನು ಜಮಾ ಮಾಡಲಾಗುವುದು ಎಂದು ತಿಳಿದುಬಂದಿದೆ.
ಒಟ್ಟು 1.77 ಲಕ್ಷ ಚಾಲಕರು ಅರ್ಜಿ ಹಾಕಿದ್ದು ಅವರಿಗೆಲ್ಲರಿಗೂ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು.

ಸರ್ಕಾರದಿಂದ 20 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದವರ ಖಾತೆಗೆ ಈ ಸಹಾಯಧನ ಹಣ ಕೈಸೇರಲಿದೆ.

ಒಟ್ಟು 7.75 ಲಕ್ಷ ಆಟೋ ಮತ್ತು ಟ್ಯಾಕ್ಸಿ್ಸಿ ಚಾಲಕರಿ ಗೆ ತಲಾಾ ಐದು ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು ಎಂದು ರಾಜ್ಯ ಸರಕಾರ ತನ್ನ ಪ್ಯಾಕೇಜಿನಲ್ಲಿ ತಿಳಿಸಿತ್ತು. ಅದರಂತೆಯೇ ನಾಳೆೆ ತನ್ನ ಮೊದಲ ಕಂತಿನ ಹಣ ಬಿಡುಗಡೆೆ ಮಾಡಲಿದ್ದು, ಆಟೋ ಮತ್ತು ಟ್ಯಾಕ್ಸಿ ಚಾಲಕರ ಮೊಗದಲ್ಲಿ ಮಂದಹಾಸ ಮೂಡಿದೆ.

Leave A Reply

Your email address will not be published.