ಅಮರಪಡ್ನೂರು | ವಿದ್ಯುತ್ ಬಳಕೆದಾರರಿಂದ ವಿದ್ಯುತ್ ಲೈನ್ ಕ್ಲಿಯರೆನ್ಸ್ ಕಾರ್ಯಕ್ರಮ

ಶೇಣಿ : ಮಳೆಗಾಲದಲ್ಲಿ ವಿದ್ಯುತ್ ತಂತಿ ಮೇಲೆ ಮರದ ರೆಂಬೆ ಅಥವಾ ಇತರ ಕಾಡು ಬಳ್ಳಿಗಳು ತಾಗಿ ವಿದ್ಯುತ್ ಪ್ರಸರಣಕ್ಕೆ ಅಡ್ಡಿಯಾಗುವುದನ್ನು ತಪ್ಪಿಸುವ ಸಲುವಾಗಿ ವಿದ್ಯುತ್ ಲೈನ್ ಕ್ಲಿಯರೆನ್ಸ್ ಕಾರ್ಯ ಇಂದು ಶೇಣಿಯಲ್ಲಿ ನಡೆಯಿತು.

ಶೇಣಿ ಹಾಗೂ ಚೂಂತಾರು ಭಾಗದ ಬಳಕೆದಾರರು ಒಟ್ಟಾಗಿ ಈ ಶ್ರಮದಾನದಲ್ಲಿ ಭಾಗವಹಿಸಿದ್ದರು. ಶೇಣಿಯಿಂದ ಚೂಂತಾರು ತನಕ ಲೈನ್ ಕ್ಲಿಯರ್ ಮಾಡಲಾಯಿತು. ವಿದ್ಯುತ್ ಲೈನ್ ಮ್ಯಾನ್ ಕಿಶೋರ್ ಮತ್ತು ಪ್ರವೀಣ್ ಹಾಗೂ ಊರವರು ಈ ಕಾರ್ಯದ ಯಶಸ್ವಿಗಾಗಿ ಕೈ ಜೋಡಿಸಿದರು.

Leave A Reply

Your email address will not be published.