ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಸ್ವಾವಲಂಬಿ ರಾಷ್ಟ್ರವಾಗಿ ಮನ್ನಡೆಯುತ್ತಿದೆ ಭಾರತ – ಶಾಸಕ ಮಠಂದೂರ್

ಪುತ್ತೂರು: ಕಳೆದ ಕೆಲವು ದಶಕಗಳಿಂದ ಮುಂದಿವರೆಯುತ್ತಿರುವ ರಾಷ್ಟ್ರವಾಗಿ ತನ್ನಷ್ಟಕ್ಕೆ ತಾನೇ ಇದ್ದ ಭಾರತ ಕಳೆದ 6 ವರ್ಷಗಳಲ್ಲಿ ವಿಶ್ವಗುರುವಾಗುವತ್ತ ಬಹುದೊಡ್ಡ ಹೆಜ್ಜೆಯಿಡುತ್ತಿದೆ. ಸಮಾನಾಂತರ ಸಮನ್ವಯ, ಬಡವರ ಕಲ್ಯಾಣ, ರಾಷ್ಟ್ರ ರಕ್ಷಣೆ ಮತ್ತು ಆರ್ಥಿಕ ಸುಧಾರಣೆಗಳಿಗೆ ಸಂಭಂದಿಸಿದಂತೆ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾ ಮೋದಿ ಸರಕಾರ ಸ್ವಾವಲಂಬಿ ಭಾರತಕ್ಕೆ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದೆ ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದ್ದಾರೆ.

ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿಯ ಎರಡನೇ ಅವಧಿಯ ಸರಕಾರ ಮೇ. 30ರಂದು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ದಶಕದ ಬಳಿಕ ಆಡಳಿತದ ಚುಕ್ಕಾಣಿ ಹಿಡಿದು ಮೊದಲನೆಯ ಅವಧಿಯಲ್ಲಿ ವಿಶ್ವ ಮೆಚ್ವುವ ಆಡಳಿತ ನಡೆಸಿ ಜಗತ್ತಿಗೆ ಭಾರತದ ಮೂಲ ಶಕ್ತಿ ಗೊತ್ತುಪಡಿಸಿ, ಜನರ ಮೆಚ್ಚಿನ ನಾಯಕ ಎರಡನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸರ್ಕಾರ ಜಾರಿಗೆ ತಂದ ಯೋಜನೆಗಳು, ಸಾಧನೆಗಳು, ಪ್ರಮುಖ ನಿರ್ಧಾರಗಳು, ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟ ಇತ್ಯಾದಿ ವಿಚಾರಗಳನ್ನು ಅದರಲ್ಲಿ ಉಲ್ಲೇಖಿಸಿದ್ದು ಒಬ್ಬ ಪ್ರಧಾನಿಗೆ ಇರುವ ಜವಾಬ್ದಾರಿಯನ್ನು ಅವರು ಮಾಡಿ ತೋರಿಸಿದ್ದಾರೆ. ಈ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸ್ವಾವಲಂಬಿ ಭಾರತಕ್ಕೆ ಅಡಿಪಾಯ ಹಾಕಿದ್ದಾರೆ. ದೂರದೃಷ್ಟಿಯ ನೀತಿಗಳ ಮೂಲಕ ಮೋದಿ ಅವರು ದೇಶದ ಪ್ರಜಾಪ್ರಭುತ್ವಕ್ಕೆ ಹೊಸ ಆಯಾಮ ನೀಡಿದ್ದಾರೆ. ಸರ್ಕಾರದ ಪ್ರತಿಯೊಂದು ನಿರ್ಧಾರಗಳು ಜನರ ಕಲ್ಯಾಣ, ದೇಶದ ಹಿತಾಸಕ್ತಿಯನ್ನು ಪ್ರತಿಧ್ವನಿಸಿವೆ ಎಂದು ಹೇಳಿದರು.

ಮೋದಿ ಸರಕಾರದ ಈವರೆಗಿನ ಸಾಧನೆ :
ಕೊರೊನಾ ಲಾಕ್‌ಡೌನ್‌ನಿಂದ ಕಂಗೆಟ್ಟ ಅರ್ಥ ವ್ಯವಸ್ಥೆಗೆ ರೂ.20ಲಕ್ಷ ಕೋಟಿಯ ಪ್ಯಾಕೇಜ್ ಘೋಷಣೆ, ಭಯೋತ್ಪಾದನೆ ವಿರುದ್ಧ ಕಾನೂನಿನ ಕೈಗೆ ಬಲಪಡಿಸಿದ್ದು, ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಮಸೂದೆಗೆ ಸಂಸತ್ ಅಂಗೀಕಾರ, ಮುಸ್ಲಿಂ ಹೆಣ್ಣುಮಕ್ಕಳ ವಿರುದ್ಧದ ದೌರ್ಜನ್ಯಗಳಿಗೆ ತಡೆ ಒಡ್ಡುವ ತ್ರಿವಳಿ ತಲಾಖ್ ಜಾರಿ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಅಪರಾಧಿಗೆ ಮರಣದಂಡನೆ ಶಿಕ್ಷೆ ನೀಡುವ ಕಾಯ್ದೆ ಜಾರಿ, ಮೂರು ಕಂತುಗಳಲ್ಲಿ ರೈತರಿಗೆ 6000 ಸಹಾಯಧನ ನೀಡುವ ಯೋಜನೆ ಅನುಷ್ಠಾನ, ಒಮ್ಮೆ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಮೋದಿ ಕರೆ. ಆಂದೋಲನ ಘೋಷಣೆಯಾದ ಕೇವಲ 15 ದಿನಗಳಲ್ಲಿ 13 ಸಾವಿರ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ, ಸುಳ್ಳುಸುದ್ದಿ ಹರಡದಂತೆ ತಡೆಯಲು ಕ್ರಮ. ಈ ನಿಟ್ಟಿನಲ್ಲಿ ‘ಫ್ಯಾಕ್ಟ್‌ಚೆಕ್’ ವೇದಿಕೆ ಆರಂಭ ಸೇರಿದಂತೆ ಅನೇಕ ಉತ್ತಮ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿದ್ದಾರೆ ಎಂದರು.

Leave A Reply

Your email address will not be published.