ಅಕ್ರಮ ಸಕ್ರಮ ಜಮೀನಿನ ಮಾರಾಟ ಪ್ರಕ್ರಿಯೆಗೆ ಕ್ಷಣಗಣನೆ | ಶಾಸಕ ಸಂಜೀವ ಮಠಂದೂರು

ಅಕ್ರಮ ಸಕ್ರಮ ಜಮೀನಿನ ಮಾರಾಟಕ್ಕೆ ಇದ್ದ ನಿಷೇಧವನ್ನು ತೆರವು ಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂಬುದನ್ನು ಕಳೆದ ವಾರ ವರದಿ ಮಾಡಿದ್ದೆವು. ಆ ನಂತರ ಅಕ್ರಮ ಸಕ್ರಮ ಜಮೀನಿನ ಮಾರಾಟದ ಬಗ್ಗೆ ಮಾಹಿತಿಯನ್ನು ಕೊಡುವಂತೆ ನಮ್ಮ ಓದುಗರು ನಮ್ಮನ್ನು ಕೇಳಿದ್ದರು. ಅದಕ್ಕಾಗಿ ಈ ಪೋಸ್ಟ್.

ಈಗ ಗೆಜೆಟ್ ನೋಟಿಫಿಕೇಶನ್ ಆಗಿದ್ದು, ಯಾವುದೇ ಕ್ಷಣದಲ್ಲಿ ಕಂದಾಯ ಇಲಾಖೆಯಲ್ಲಿ ಈ ಸಂಬಂಧ ಮಾರಾಟ ಪ್ರಕ್ರಿಯೆ ನಡೆಯಬಹುದು.

ಪುತ್ತೂರು ಶಾಸಕ ಶ್ರಿ ಸಂಜೀವ ಮಠಂದೂರು

ಅಕ್ರಮ ಸಕ್ರಮ ಪರ ಮತ್ತು ಇತ್ತೀಚೆಗೆ ಸದನದಲ್ಲಿ ಅಕ್ರಮ ಸಕ್ರಮ ಜಮೀನು ಮಾರಾಟಕ್ಕೆ ಅನಗತ್ಯ ಕಟ್ಟುಪಾಡು ಮಾಡಿದ್ದ ಹಿಂದಿನ ಸರಕಾರದ ಕ್ರಮವನ್ನು ಶಾಸಕ ಸಂಜೀವ ಮಠಂದೂರು ಪ್ರಶ್ನಿಸಿ, ಮಾರಾಟ ಪ್ರಕ್ರಿಯೆಯನ್ನು ಸರಳೀಕರಿಸಲು ಆಗ್ರಹಿಸಿದ್ದರು. ಅದರಂತೆ ಕರ್ನಾಟಕ ಸರಕಾರ ಅವರ ಬೇಡಿಕೆಗೆ ಅಸ್ತು ಅಂದಿದೆ.

ಅಕ್ರಮ ಸಕ್ರಮ ಜಾಗ ಮಾರಾಟದ ಬಗ್ಗೆ ಇರುವ ಹೊಸ ಕಾನೂನಿನ ಬಗ್ಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಹೊಸ ಕನ್ನಡ ಪತ್ರಿಕೆ ಮಾತಾಡಿಸಿತ್ತು. ಅದರ ಸಾರಾಂಶ ಇಲ್ಲಿದೆ.

ಹಿಂದೆ ಅಕ್ರಮ ಸಕ್ರಮ ಜಮೀನು, ಸಕ್ರಮ ಆದ ನಂತರ 15 ವರ್ಷಗಳ ಕಾಲ ಮಾರಾಟ ಮಾಡುವುದನ್ನು ಸರಕಾರ ನಿರ್ಬಂಧಿಸಿತ್ತು.
ಆನಂತರ, ಸರಕಾರ ಇನ್ನೊಮ್ಮೆ ಅಕ್ರಮ ಜಾಮೀನು ಸಕ್ರಮಗೊಳಿಸಿತ್ತು. ಆಗ ಸಕ್ರಮ ಆದ ಜಮೀನನ್ನು 25 ವರ್ಷಗಳ ನಂತರ ಮಾರಾಟ ಮಾಡಬಹುದೆಂದು ಸರಕಾರ ಕಾನೂನು ತಂದಿತ್ತು. ಆ ಸಂದರ್ಭದಲ್ಲಿ, ಈ ಹಿಂದೆ 15 ವರ್ಷಗಳ ಲಾಕ್ ಇನ್ ಪೀರಿಯಡ್ ಅನ್ನು ಬದಲಿಸಿ ಎಲ್ಲಾ ಅಕ್ರಮ ಸಕ್ರಮ ಜಮೀನುಗಳನ್ನು, ಸಕ್ರಮಗೊಂಡ ದಿನದಿಂದ 25 ವರ್ಷಗಳ ನಂತರ ಮಾತ್ರ ಪರಭಾರೆ ಮಾಡಬಹುದು ಎಂದು ಕಾನೂನು ತಂದಿತ್ತು.

ಇದರಿಂದಾಗಿ ಅಕ್ರಮ ಸಕ್ರಮ ಜಾಗಗಳನ್ನು, ಅನಿವಾರ್ಯ ಸಂದರ್ಭಗಳಲ್ಲಿ, 15 ವರ್ಷದಲ್ಲಿ ಕೂಡಾ ಮಾರಲಾಗದೆ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದರು.
ಈಗ ರೈತ ಪರ ಸದಾ ನಿಲ್ಲುವ ಯಡಿಯೂರಪ್ಪನವರು ಈ ಸಲ ಹೊಸ ಕಾನೂನು ತಂದಿದ್ದಾರೆ.

ಇದರ ಪ್ರಕಾರ ಹಿಂದೆ ಸಕ್ರಮ ಆದಾಗ 15 ವರ್ಷ ಲಾಕ್ ಇನ್ ಅಂತ ಕೊಟ್ಟ ಜಮೀನುಗಳನ್ನು 15 ವರ್ಷಗಳ ನಂತರ ಪರಭಾರೆ ಮಾಡಬಹುದು.

ಇದರ ಪ್ರಕಾರ ಹಿಂದೆ ಸಕ್ರಮ ಆದಾಗ 25 ವರ್ಷ ಲಾಕ್ ಇನ್ ಅಂತ ಕೊಟ್ಟ ಜಮೀನುಗಳನ್ನು 25 ವರ್ಷಗಳ ನಂತರ ಪರಭಾರೆ ಮಾಡಬಹುದು.

ಈಗ ಗೆಜೆಟ್ ನೋಟಿಫಿಕೇಶನ್ ಆಗಿದ್ದು, ಯಾವುದೇ ಕ್ಷಣದಲ್ಲಿ ಕಂದಾಯ ಇಲಾಖೆಯಲ್ಲಿ ಈ ಸಂಬಂಧ ಮಾರಾಟ ಪ್ರಕ್ರಿಯೆ ನಡೆಯಬಹುದು ಎಂದು ಪುತ್ತೂರು ಶಾಸಕ ಶ್ರಿ ಸಂಜೀವ ಮಠಂದೂರು ಅವರು ತಿಳಿಸಿದ್ದಾರೆ.

Leave A Reply

Your email address will not be published.